Yash : ಯಶ್ ಅವರ ಡಯೆಟ್ ನಲ್ಲಿ ಏನೆಲ್ಲಾ ಇರುತ್ತಿತ್ತು..! ಜಿಮ್ ಟ್ರೈನರ್ ಕಿಟ್ಟಿ ಹೇಳಿದ್ದಿಷ್ಟು ನೋಡಿ..!
Updated:Thursday, April 28, 2022, 21:14[IST]

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಭಾಗ-2 ಇದೀಗ ವಿಶ್ವ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ಇಡೀ ಪ್ರಪಂಚವೇ ಕನ್ನಡ ಚಿತ್ರರಂಗದ ಕಡೆಗೆ ಮುಖ ಮಾಡಿ ನೋಡುವಂತೆ ಕೆಜಿಎಫ್ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ ಎನ್ನಬಹುದು. ನಟ ಯಶ್ ಅವರ ಅಭಿನಯಕ್ಕೆ ಎಲ್ಲರೂ ಸಹ ಫಿದಾ ಆಗಿದ್ದು ರಾಕಿಬಾಯ್ ಆರ್ಭಟಕ್ಕೆ ಬೇರೆ ದೇಶಗಳಲ್ಲಿ ಕೂಡ ಸಿನಿಮಾ ನೋಡಿ ಹುಚ್ಚೆದ್ದು ಕುಣಿಯುತ್ತಿದ್ದಾರೆ ಎನ್ನಲಾಗಿದೆ. ಹೌದು ಹೀಗಿರುವಾಗ ಯಶ್ ಅವರ ಬಾಡಿ ಸಂಬಂಧಪಟ್ಟ ಯಾವ ರೀತಿಯಲ್ಲಿ ಯಶ್ ಡಯಟ್ ಮಾಡುತ್ತಿದ್ದರು, ಹೇಗೆ ಜಿಮ್ ನಲ್ಲಿ ಬೆವರುಹರಿಸಿ ಕಷ್ಟಪಟ್ಟು ವರ್ಕೌಟ್ ಮಾಡುತ್ತಿದ್ದರು ಎಂದು ಇದೀಗ ಅವರ ಜಿಮ್ ಟ್ರೈನರ್ ಕಿಟ್ಟಿಯವರು ಯಶ್ ಅವರ ಬಗ್ಗೆ ಮತ್ತು ಯಶ್ ಮಾಡುವ ವರ್ಕೌಟ್ ಬಗ್ಗೆ ಕೆಲ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಹೌದು ಯಶ್ ಅವರು ಕೆಜಿಎಫ್ ಚಿತ್ರದಲ್ಲಿ ಕಟ್ಟುಮಸ್ತಾಗಿ ಕಾಣಿಸಿಕೊಂಡಿದ್ದು ಇದರ ಹಿಂದಿನ ರೂವಾರಿ ಬಾಡಿ ಬಿಲ್ಡರ್ ಕಿಟ್ಟಿಯವರು ಎನ್ನಬಹುದು. ಹೌದು ಸಿನಿಮಾ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ಯಶ್ ಅವರು ಕಿಟ್ಟಿ ಸರ್ ಗೆ ಧನ್ಯವಾದ ಎಂದಿದ್ದರು. ಇದನ್ನೇ ನೆನೆದ ಕಿಟ್ಟಿ ಅದು ಅವರ ದೊಡ್ಡ ಗುಣ. ಯಶ್ ಅವರು ಎಷ್ಟೇ ಬ್ಯುಸಿ ಇದ್ದರೂ ನಮಗೆ ಸಮಯ ಕೊಡುತ್ತಿದ್ದರು. ಸುಮಾರು 13 ವರ್ಷಗಳಿಂದ ಪರಿಚಯ. ಕೆಜಿಎಫ್ ಸಿನಿಮಾ ವೇಳೆ ನೀವು ನಮ್ಮ ಜೊತೆಗೆ ಇರಬೇಕು ಎಂದು ನನ್ನನ್ನು ಜೊತೆಗೆ ಇರಿಸಿಕೊಂಡಿದ್ದರು. ಜಿಮ್ ನಲ್ಲಿ ಟ್ರೈನ್ ಮಾಡುವ ಕಿಟ್ಟಿ ಅವರು ನಟ ಯಶ್ ಹೇಗೆ ಡಯಟ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಯಶ್ ಅವರ ಬಾಡಿಗೆ ತಕ್ಕ ಹಾಗೆ ಕಿಟ್ಟಿ ಮಜಲ್ಸ್ ಪ್ಲಾನೆಟ್ ಎಂಬುದನ್ನ ಮಾಡಿಸಿದ್ದರಂತೆ. ಅವರ ತೂಕಕ್ಕೆ ತಕ್ಕಂತೆ ಹಾಗೆ ಎಷ್ಟು ವರ್ಕೌಟ್ ಮಾಡಿದರೆ ಯಾವ ರೀತಿ ರಿಸಲ್ಟ್ ಬರುತ್ತದೆ ಎಂದು ಮೊದಲೇ ಕ್ಯಾಲ್ಕುಲೇಷನ್ ಹಾಕಿ ಮಾಡುತ್ತಿದ್ದೆವು. ಯಶ್ ಅವರಿಗೆ ಡಯಟ್ ಮಾಡುವ ಸಂದರ್ಭದಲ್ಲಿ ಹೈ ಪ್ರೋಟೀನ್ ಕೊಡುತ್ತಿದ್ದೆವು. ನಾವು ಮಾಡಿಸಿದ್ದೆವು ಎಂದು ಹೇಳುವುದಕ್ಕಿಂತ ಅವರೆ ಮಾಡುತ್ತಿದ್ದರು ಅದು ದೊಡ್ಡದು ಎಂದಿದ್ದಾರೆ ಜಿಮ್ ಟ್ರೈನರ್ ಕಿಟ್ಟಿ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.. (video credit ; news first kannada)