ರಾಜಮೌಳಿ ಜೊತೆ ಸಿನಿಮಾ ಮಾಡುತ್ತಾರಾ ಯಶ್ ? ರಾಕಿ ಭಾಯ್ ಉತ್ತರ ಇಲ್ಲಿದೆ ನೋಡಿ

By Infoflick Correspondent

Updated:Wednesday, April 13, 2022, 13:30[IST]

ರಾಜಮೌಳಿ ಜೊತೆ ಸಿನಿಮಾ ಮಾಡುತ್ತಾರಾ ಯಶ್ ? ರಾಕಿ ಭಾಯ್ ಉತ್ತರ ಇಲ್ಲಿದೆ ನೋಡಿ

ಬಹುನಿರೀಕ್ಷಿತ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರು ಆಗಿದೆ. ನಟ ಯಶ್​ ಸೇರಿದಂತೆ ಇಡೀ ಚಿತ್ರತಂಡದವರು ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಮಯದಲ್ಲಿ ಯಶ್ ಹಲವು ಉಹಾಪೋಹ ಸುದ್ದಿಗಳಿಗೆ ನಿಖರವಾಗಿ ಉತ್ತರ ನೀಡುತ್ತಿದ್ದಾರೆ. ಇದರಿಂದ ಜನರ ಕುತೂಹಲಕ್ಕೆ ತೆರೆ ಬೀಳಲಿದೆ. 

ಬಹು ವರ್ಷಗಳ ಕನಸಿನ ಯಶ್ ಅವರ ಸಿನಿಮಾ ಕೆಜಿಎಫ್ 2 ಬಿಡುಗಡೆಯಾದ ನಂತರ ರಾಕಿಭಾಯ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಹಲವರ ತಲೆಯಲ್ಲಿ ಇದೆ. ಇದರ ಜೊತೆ ಅನೇಕ ಗಾಳಿ ಸುದ್ದಿಗಳು ಬೀಸುತ್ತಿವೆ. ಯಶ್ ಜೊತೆ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ ಎಂಬ ಸುದ್ದಿಗೆ ಯಶ್ ಅವರೇ ಈಗ ಉತ್ತರ ನೀಡಿದ್ದಾರೆ. 

ಅವರು ನನ್ನ ಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಸಿನಿಮಾಗಳಲ್ಲಿ ದೃಷ್ಟಿಕೋನ ಹೊಂದಿರುವ ನಿರ್ದೇಶಕ ಅವರ ಜೊತೆ ಕೆಲಸ ಮಾಡುವ ಅವಕಾಶ ಮಾತ್ರ ಯಾವತ್ತು ಬಿಟ್ಟುಕೊಡಲ್ಲ,‌ ಅವರ ಯಾವುದೇ ಸಿನಿಮಾಗೆ ನಾನು ಸೂಟ್ ಆಗ್ತಾನೆ ಎಂದು ಭಾವಿಸಿದರೆ ನಾನು ಯಾಕೆ ಅದನ್ನು ಮಾಡಬಾರದು?' ಎಂದು ಹೇಳುತ್ತಾ ಸದ್ಯ ನಾನು ಅವರ ಜೊತೆ ಸಿನಿಮಾ‌ ಮಾಡುತ್ತಿರುವೆ ಎನ್ನುವುದು ಸುಳ್ಳು ಸುದ್ದಿ ಎಂದಿದ್ದಾರೆ. 

ನಂತರ ರಾಜಮೌಳಿ ಅವರ ಜೊತೆ ಸಿನಿಮಾ ಮಾಡುವ ಕನಸು ಇದೆಯೇ ಎಂಬ ಪ್ರಶ್ನೆಗೂ ಯಶ್​ ಉತ್ತರಿಸಿದ್ದಾರೆ. ನಾನು ಯಾವತ್ತೂ ಇಂಥವರ ಜೊತೆ ಮಾಡಬೇಕು, ಅಂಥವರ ಜೊತೆ ಮಾಡಬೇಕು ಅಂತ ಕನಸು ಕಂಡಿಲ್ಲ. ಬಂದ ಕೆಲಸವನ್ನು ಚೆನ್ನಾಗಿ ಮಾಡಬೇಕು ಎಂಬುದಷ್ಟೇ ನನ್ನ ಗುರಿ’ ಎಂದು ಯಶ್​ ಹೇಳಿದ್ದಾರೆ.