ಬರಲಿರುವ ಕೆಜಿಎಫ್ 3 ಸಿನಿಮಾ ಬಗ್ಗೆ ಯಶ್ ಹೇಳಿದ ಏನು ? ಭರ್ಜರಿ ಆಗಲಿದೆ ಧೃಶ್ಯಗಳು

By Infoflick Correspondent

Updated:Wednesday, April 27, 2022, 10:16[IST]

ಬರಲಿರುವ ಕೆಜಿಎಫ್ 3 ಸಿನಿಮಾ ಬಗ್ಗೆ ಯಶ್ ಹೇಳಿದ  ಏನು ? ಭರ್ಜರಿ ಆಗಲಿದೆ ಧೃಶ್ಯಗಳು

ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್'  ಎಲ್ಲಾ ಕಡೆ ಸದ್ದು ಮಾಡುತ್ತಿರೋದನ್ನು ನೋಡಿದರೆ, ಉಳಿದ ಒಂದಿಷ್ಟು ದಾಖಲೆಗಳನ್ನು ಅಳಿಸಿ ಹಾಕುವುದರಲ್ಲಿ ಡೌಟೇ ಇಲ್ಲ. ಸಿನಿಪ್ರಿಯರ ಮನಸ್ಸಿನಲ್ಲಿ 'ಕೆಜಿಎಫ್ ಚಾಪ್ಟರ್ 3' ನೂ ಬರುತ್ತಾ? ಅನ್ನುವ ಪ್ರಶ್ನೆ ಸಿನಿಮಾ ಬಿಡುಗಡೆಯಾದ ದಿನದಿಂದಲೇ ಎದ್ದಿದೆ. 

ಕೆಜಿಎಫ್ 2' ಕ್ಲೈಮ್ಯಾಕ್ಸ್ ಮುಗಿದ ಬಳಿಕ ಕೂಡಲೇ 'ಕೆಜಿಎಫ್ 3' ಬಗ್ಗೆ ಚಿತ್ರತಂಡ ಸುಳಿವು ನೀಡಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದರೂ, ಚಿತ್ರತಂಡ ಮಾತ್ರ ಒಂದೇ ಒಂದು ಪ್ರತಿಕ್ರಿಯೆ ನೀಡಿರಲಿಲ್ಲ.  

ಕೆಜಿಎಫ್ ಚಾಪ್ಟರ್ 3' ಬಗ್ಗೆ ಚಿತ್ರತಂಡ ಎಲ್ಲೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ಯಶ್ ಸಿನಿಮಾ ಬಗ್ಗೆ ಸಣ್ಣದೊಂದು ಸುಳಿವು ನೀಡಿದ್ದಾರೆ. 'ಕೆಜಿಎಫ್ 3' ಸಿನಿಮಾ ಬಗ್ಗೆ ಯಶ್ ಏನು ಹೇಳಿದ್ದಾರೆ? ಸುಳಿವು ಬಿಟ್ಟುಕೊಟ್ಟಿದ್ದೆಲ್ಲಿ? ಅನ್ನುವುದನ್ನು ತಿಳಿಯಲು ಮುಂದೆ ಓದಿ. 

ಕೆಜಿಎಫ್' ಸಿನಿಮಾ ಮಾಡುವಾಗ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಬಗ್ಗೆ ಆಲೋಚನೆ ಇರಲಿಲ್ಲ. ಅಲ್ಲದೆ ಇದನ್ನು ಪಾರ್ಟು 2 ಮಾಡುವ ಆಲೋಚನೆ ಕೂಡ ಇರಲಿಲ್ಲ. ಆದರೆ ಎರಡು ಪಾರ್ಟ್ ಮಾಡಲು ನಿರ್ಧರಿಸಿದ ಬಳಿಕ ಚಾಪ್ಟರ್ 1 ಬಗ್ಗೆ ಯಶ್‌ಗೆ ಚಿಂತೆ ಶುರುವಾಗಿತ್ತು. " ಬೆಸ್ಟ್ ಪಾರ್ಟ್ ಅನ್ನೋದು ಸೆಕೆಂಡ್ ಹಾಫ್‌ನಲ್ಲಿ ಇತ್ತು. ಅದುವೇ 'ಚಾಪ್ಟರ್ 2'. ಒಂದು ವೇಳೆ 'ಚಾಪ್ಟರ್ 1' ಗೆಲ್ಲದೆ ಹೋದರೆ, 'ಚಾಪ್ಟರ್ 2' ಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಹೀಗಾಗಿ 'ಚಾಪ್ಟರ್ 1' ಬಗ್ಗೆ ತುಂಬಾನೇ ತಲೆಕೆಡಿಸಿಕೊಂಡಿದ್ದೆ." ಎಂದು ಯಶ್ ಹೇಳಿದ್ದಾರೆ.

ಕೆಜಿಎಫ್ಅಧ್ಯಾಯ 2" ನ ಅಂತಿಮ ದೃಶ್ಯಗಳು ಮೂರನೇ ಅಧ್ಯಾಯದಲ್ಲಿ ಸುಳಿವನ್ನು ಒಳಗೊಂಡಿವೆ. ಚಾಪ್ಟರ್ 2'ನಲ್ಲಿ ನಾವು ಇನ್ನೂ ಸಾಕಷ್ಟು ವಿಷಯಗಳನ್ನು ಹೇಳುವುದಿತ್ತು. 'ಚಾಪ್ಟರ್ 3' ನಿರ್ಮಿಸಲು ಹಲವು ಸಾಧ್ಯಗಳಿವೆ ಎಂಬುದು ನಮಗೆ ಗೊತ್ತಿದೆ. ಈಗಾಗಲೇ ನಾನು ಮತ್ತು ಪ್ರಶಾಂತ್‌ನ ಸಾಕಷ್ಟು ದೃಶ್ಯಗಳ ಬಗ್ಗೆ ಯೋಚಿಸಿದ್ದೇವೆ ಎನ್ನುತ್ತಾರೆ ಯಶ್.  "ಅಧ್ಯಾಯ 2 ರಲ್ಲಿ ನಾವು ಮಾಡಲು ಸಾಧ್ಯವಾಗದ ಬಹಳಷ್ಟು ಸಂಗತಿಗಳಿವೆ. ಆದ್ದರಿಂದ ಸಾಕಷ್ಟು ಸಾಧ್ಯತೆಗಳಿವೆ ಎಂದು ನಮಗೆ ತಿಳಿದಿದೆ, ಸಾಕಷ್ಟು ಕಿಕ್ ದೃಶ್ಯಗಳಿವೆ.ಆದರೆ ಇದು ಕೇವಲ ಒಂದು ಐಡಿಯಾ ಅಷ್ಟೆ.‌ಆದರೆ ಇದು ಕೇವಲ ಒಂದು ಕಲ್ಪನೆ.  ಮತ್ತು ನಾವು ಸದ್ಯ ಅದನ್ನು ಅಲ್ಲಿಯೇ ಬಿಟ್ಟಿದ್ದೇವೆ. ” ಎಂದಿದ್ದಾರೆ ಯಶ್.