Yash : ಪ್ರಭಾಸ್ ಜೊತೆ ಕೈ ಜೋಡಿಸಲಿದ್ದಾರ ಯಶ್..! ಸಲಾರ್ ಚಿತ್ರದ ಟ್ವಿಸ್ಟ್ ನೋಡಿ..! ಬೆರಗಾಗ್ತಿರ..!

By Infoflick Correspondent

Updated:Sunday, July 3, 2022, 10:04[IST]

Yash :  ಪ್ರಭಾಸ್ ಜೊತೆ ಕೈ ಜೋಡಿಸಲಿದ್ದಾರ ಯಶ್..! ಸಲಾರ್ ಚಿತ್ರದ ಟ್ವಿಸ್ಟ್ ನೋಡಿ..! ಬೆರಗಾಗ್ತಿರ..!

ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಅವರ ಕೆಜಿಎಫ್ ಭಾಗ 2 ಸಿನಿಮಾ ಯಶಸ್ಸಿನಲ್ಲಿದ್ದಾರೆ. ಕೆಜಿಎಫ್ ಭಾಗ 2 ಪ್ರಪಂಚದ ತುಂಬೆಲ್ಲ ಹೆಚ್ಚು ಸಿನಿಪ್ರಿಯರ ಮನಸ್ಸು ಗೆದ್ದು ಒಳ್ಳೆ ಪ್ರತಿಕ್ರಿಯ ಪಡೆದುಕೊಂಡಿತು. ಹಾಗೆ ಸಿನಿಮಾ ಕಲೆಕ್ಷನ್ ವಿಚಾರದಲ್ಲಿಯೂ ಹೆಚ್ಚು ದಾಖಲೆ ಮಾಡಿ, ಒಟ್ಟು 1260 ಕೋಟಿಗೂ ಅಧಿಕ ಹಣ ಕೆಜಿಎಫ್ ಚಿತ್ರತಂಡ ಗಳಿಸಿ ಇದೀಗ ಉತ್ತುಂಗದಲ್ಲಿದೆ. ನಟ ರಾಕಿಂಗ್ ಸ್ಟಾರ್ ಯಶ್ ಅವರ ಸಿನಿ ರಂಗದ ಬೆಲೆ ಕೂಡ ದೊಡ್ಡದಾಗಿದೆ. ಇವರ ಮಾರ್ಕೆಟ್ ನೋಡಿದರೆ 100 ಕೋಟಿಗೂ ಅಧಿಕ ಹಣ ಯಶ್ ಅವರಿಗೆ ಕೊಡುವುದಕ್ಕೆ ಸಾಕಷ್ಟು ನಿರ್ವಾಪಕರು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಅದೇ ಸಾಲಿನಲ್ಲಿ ಬರುವ ನಿರ್ಮಾಪಕ ತೆಲುಗು ಸಿನಿಮಾರಂಗದಲ್ಲಿ ಕೆಜಿಎಫ್ ಬಿಡುಗಡೆ ಮಾಡಿಸಿದ್ದ ನಿರ್ಮಾಪಕ ದಿಲ್ ರಾಜು ಅವರು ಅವರ ಮುಂದಿನ ಚಿತ್ರಕ್ಕೆ ಯಶ್ ಬಳಿ 100 ಕೋಟಿ ಆಫರ್ ಇಟ್ಟಿದ್ದಾರಂತೆ.    

ಹೀಗೆ ಒಂದಲ್ಲ ಒಂದು ವಿಚಾರವಾಗಿ ನಟ ಯಶ್ ಅವರು ಹೆಚ್ಚಾಗಿ ಸುದ್ದಿ ಆಗುತ್ತಿದ್ದಾರೆ. ಇನ್ನೊಂದು ಕಡೆ ಕೆ.ಜಿ.ಎಫ್. ಸಿನಿಮಾದ ಭಾಗ ಮೂರು ಬರುತ್ತದೆ ಎನ್ನಲಾಗಿ ಕೇಳಿತ್ತು. ಆ ಬಗ್ಗೆ ಯಾವ ಮಾಹಿತಿ ಕೂಡ ಚಿತ್ರತಂಡದಿಂದ ಬಂದಿಲ್ಲ. ಇದೆಲ್ಲದರ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ಪ್ರಭಾಸ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಹೊಸ ಸಲಾರ್ ಚಿತ್ರದ ಕೆಲವು ವಿಚಾರಗಳು ಇದೀಗ ಚರ್ಚೆ ಆಗುತ್ತಿವೆ. ಹೌದು ನಟ ಯಶ್ ಅವರು ಪ್ರಭಾಸ್ ಅವರ ಸಲಾರ್ ಚಿತ್ರದಲ್ಲಿ ಒಂದು ಅತಿಥಿ ಪಾತ್ರ ಮಾಡಲಿದ್ದಾರಂತೆ. ಹೀಗೆಂದು ಮಾಧ್ಯಮ ವಲಯದಲ್ಲಿ ಹೇಳಲಾಗುತ್ತಿದೆ. ಹಾಗೆ ಈ ವಿಷಯವೇ ಇದೀಗ ಹೆಚ್ಚು ಚರ್ಚೆಯಾಗುತ್ತಿದೆ ಎಂದು ಹೇಳಬಹುದು.

ಹೌದು ಒಂದು ವೇಳೆ ನಟ ಯಶ್ ಸಲಾರ್ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದೆ ಆದರೆ ಇದು ಕೆಜಿಎಫ್ ಭಾಗ-3 ಆಗಿದ್ದರೂ ಆಗಿರಬಹುದು ಎಂಬುದು ಸಿನಿ ಪ್ರಿಯರ ಲೆಕ್ಕ. ಆದ್ರೆ ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಏನನ್ನೂ ಹೇಳದೆ ಇರುವುದು ಕುತೂಹಲ ಮೂಡಿಸಿದೆ. ಹಾಗೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಅವರ ಜೊತೆ 800 ಕೋಟಿ ಬಜೆಟ್ ಸಿನಿಮಾದಲ್ಲಿ ಯಶ್ ಅಭಿನಯ ಮಾಡಬಹುದು ಎಂದು ತಿಳಿದುಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ನೀವು ಕೂಡ ಪ್ರಭಾಸ್ ಅವರ ಸಲಾರ್ ಸಿನಿಮಾದ ಅಪ್ಡೇಟ್ಸ್ ಗಾಗಿ ಕಾಯುತ್ತಿದ್ದರೆ, ಹೆಚ್ಚಿನ ಮಾಹಿತಿ ನಿಮಗೆ ಗೊತ್ತಿದ್ದಲ್ಲಿ ತಪ್ಪದೇ ಕಮೆಂಟ್ ಮಾಡಿ ಧನ್ಯವಾದಗಳು..