ದರ್ಶನ್ ಬಗ್ಗೆ ಮಾತಾಡೋ ಯೋಗ್ಯತೆ ಅವರಿಗೆ ಇದ್ದೀಯ..? ರಾಕಿಂಗ್ ಸ್ಟಾರ್ ಯಶ್ ಕೊಟ್ಟ ಖಡಕ್ ವಾರ್ನಿoಗ್, ವಿಡಿಯೋ ನೋಡಿ..!!

Updated: Wednesday, July 21, 2021, 16:17 [IST]

    

ಸುದ್ದಿ ಹಾಗು ವಿಡಿಯೋ ಕೃಪೆ – ಕಾಲ್ ಮೀ ಸಂತು ಕನ್ನಡ ಚಾನಲ್) 

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಇತ್ತೀಚಿಗಷ್ಟೇ ನಟ ದರ್ಶನ್ ಹಾಗೂ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿಯ ನಡುವೆ ಒಂದು ವಿಚಾರ ದೊಡ್ಡದಾಗಿ ಸದ್ದು ಮಾಡಿತ್ತು, ಮತ್ತು ಅರುಣಾಕುಮಾರಿ ಹೆಸರು ಸಹ ಇವರ ಗಲಾಟೆ ಮಧ್ಯೆ ಕೇಳಿಬಂದಿದ್ದು 25 ಕೋಟಿ ದರ್ಶನ್ ಅವರ ಶೂರಿಟಿ ವಿಚಾರ ರಾಜ್ಯದಲ್ಲಿ ದಿನೇದಿನೇ ಹೊಸ ತಿರುವುಗಳನ್ನು ಪಡೆದುಕೊಂಡೆ ಹೋಯಿತು. ಆನಂತರ ಮೈಸೂರಿನ ಸಂದೇಶ ನೇತೃತ್ವದ ಪ್ರಿನ್ಸ್ ಹೋಟೆಲಲ್ಲಿ ದರ್ಶನ್ ಅವರು ಕೆಲಸಗಾರನಿಗೆ ಹೊಡೆದಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಸಹ ಆರೋಪ ಮಾಡಿದರು.  

ಅದಾದ ಬಳಿಕ ಮಾಧ್ಯಮದ ಮುಂದೆ ನಟ ದರ್ಶನ್ ಅವರು ನಾನು ಯಾರ ಮೇಲೆಯೂ ಕೈ ಮಾಡಿಲ್ಲ ಹಾಗಿದ್ದಲ್ಲಿ ಅವರು ಸಾಕ್ಷಿಯನ್ನು ಬಿಡುಗಡೆ ಮಾಡಲಿ, ಪೋಲಿಸರಿಗೂ ಕೆಲಸ ಕೊಡಬೇಕು ತನಿಖೆ ಆಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದರು. ಇದಾದ ಬಳಿಕ ದರ್ಶನ್ ಕ್ಷಮೆ ಕೇಳಬೇಕು ಎಂದು ದೂರು ಕೊಟ್ಟಿದ್ದ ಇಂದ್ರಜಿತ್ ಮನವಿ ಮಾಡಿದರು. ಹೌದು ಇದಾದ ಬೆನ್ನಲ್ಲೇ ದರ್ಶನ್ ತಮ್ಮ ಆಕ್ರೋಶವನ್ನು ಹೊರಹಾಕಿ, ಇಂದ್ರಜಿತ್ ಅವರಪ್ಪನಿಗೆ ಹುಟ್ಟಿದರೆ, ಆಡಿಯೋ ರಿಲೀಸ್ ಮಾಡಲಿ ಎಂದು ಗುಡುಗಿದರು. ಇಬ್ಬರು ಮಾಧ್ಯಮದ ಮುಂದೆ ಅವರವರ ಹೇಳಿಕೆಯನ್ನ ಕೊಡುತ್ತಲೇ ಹೋದರು.

ಇದೀಗ ಇದೆ ಅಕಾಡಕ್ಕೆ ಕನ್ನಡ ಸಿನಿಮಾ ರಂಗದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರು ಎಂಟ್ರಿಕೊಟ್ಟಿದ್ದು, ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ ಎನ್ನಲಾಗಿ ಒಂದು ವಿಡಿಯೋ ಮೂಲಕ ತಿಳಿದು ಬಂದಿದೆ. ನಟ ದರ್ಶನ್ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಆದ್ರೂ ಅವರಿಗೆ ಇದೆಯಾ ಎಂಬುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಹಾಗೆ ವಾರ್ನಿಂಗ್ ನೀಡಿದ್ದಾರೆ ಎಂದು ಹೇಳಲಾಗಿರುವ ಈ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋ ನೋಡಿ ಮತ್ತು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಕಮೆಂಟ್ ಮಾಡಿ, ಧನ್ಯವಾದಗಳು...