ಯುರೋಪ್ ನಲ್ಲಿ ಕೆಜಿಎಫ್ 2 ಹಾವಳಿ ಬಗ್ಗೆ ಯಶ್ ಜೊತೆ ಮಾತಾಡಿದ ಈ ಕ್ಯೂಟ್ ಜೋಡಿ..!

By Infoflick Correspondent

Updated:Friday, April 15, 2022, 18:47[IST]

ಯುರೋಪ್ ನಲ್ಲಿ ಕೆಜಿಎಫ್ 2 ಹಾವಳಿ ಬಗ್ಗೆ ಯಶ್ ಜೊತೆ ಮಾತಾಡಿದ ಈ ಕ್ಯೂಟ್ ಜೋಡಿ..!

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ ಟು ಸಿನಿಮಾ ನಿನ್ನೆ ವಿಶ್ವದಾದ್ಯಂತ ಭರ್ಜರಿಯಾಗಿ ತೆರೆಮೇಲೆ ಬಂದಿದೆ. ಇಡೀ ದೇಶದ ಅಭಿಮಾನಿಗಳು ಮಾತ್ರವಲ್ಲದೆ ಇಡೀ ವಿಶ್ವವೇ ಕೆಜಿಎಫ್ ಚಾಪ್ಟರ್ ಟು ಸಿನಿಮಾಗಾಗಿ ಕಳೆದ ಮೂರು ವರ್ಷದಿಂದ ತುಂಬಾ ಕಾತರದಿಂದ ಕಾಯುತ್ತಿತ್ತು. ಕೆಜಿಎಫ್ ಟು ಸಿನಿಮಾ ಯಾವ ರೀತಿ ಇರುತ್ತದೆ, ಯಾವ ರೀತಿ ಕತೆಯನ್ನು ಹೆಣೆದಿರುತ್ತಾರೆ, ಹೇಗೆ ರಾಕಿ ಬಾಯ್ ಅದನ್ನೆಲ್ಲಾ ಕಂಟ್ರೋಲ್ ಮಾಡುತ್ತಾರೆ ಎಂಬುದಾಗಿ ತುಂಬಾ ಕುತೂಹಲದಿಂದ ಇದ್ದರು, ಅದಕ್ಕೆ ತಕ್ಕಂತೆ ನಿನ್ನೆ ಉತ್ತರ ಸಿಕ್ಕಿದೆ. ಹೌದು ಕೆಜಿಎಫ್ ಚಾಪ್ಟರ್ ಟು ನಿರೀಕ್ಷೆಗೂ ಮೀರಿ ಮೂಡಿಬಂದಿದೆ..ಕೆಜಿಎಫ್ ಟು ಸಿನಿಮಾ ನೋಡಿದ ಪ್ರತಿಯೊಬ್ಬರು ಇದೊಂದು ಬ್ಲಾಕ್ಬಸ್ಟರ್ ಹಿಟ್ ಆಗುವುದು ಖಚಿತ ಎಂದು ಹೇಳುತ್ತಿದ್ದಾರೆ.

ಹೀಗಿರುವಾಗ ನಟ ಯಶ್ ಅವರು ಕಳೆದ ಎರಡು ದಿನಗಳ ಹಿಂದೆ ವಿದೇಶಿ ಅಭಿಮಾನಿಗಳ ಜೊತೆ ಮಾತನಾಡಿದ್ದರು.. ಅವರು ಕನ್ನಡದವರೆ ಆಗಿದ್ದು, ನಟ ಯಶ್ ಅವರ ಜೊತೆ ತುಂಬಾ ಪ್ರೀತಿಯಿಂದ ಮಾತನಾಡಿದ್ದರು.. ಹೌದು ಕೆಜಿಎಫ್ ಒಂದು ಕನ್ನಡ ಸಿನಿಮಾ, ನಮ್ಮ ಕನ್ನಡ ಸಿನಿಮಾ ಬೇರೆ ದೇಶಗಳಲ್ಲಿ ಬಿಡುಗಡೆಯಾಗುವುದು ತುಂಬಾ ವಿರಳ. ಅದು ಕನ್ನಡ ಭಾಷೆಯಲ್ಲಿಯೇ ಇದೀಗ ಕೆಜಿಎಫ್ ಚಾಪ್ಟರ್ ಟು ಸಿನಿಮಾ ಬರುತ್ತಿದೆ. ಯುಎಸ್ ಗೆ ಕಂಪೇರ್ ಮಾಡಿದರೆ ಯುರೋಪ್ ನಲ್ಲಿ ಕನ್ನಡಿಗರು ತುಂಬಾ ಕಡಿಮೆ ಇದ್ದಾರೆ. ಆದರೂ ಕೂಡ ನಾವು ಮೊದಲ ಬಾರಿಗೆ ಇಲ್ಲಿ ರಂಗಿತರಂಗ ಸಿನಿಮಾವನ್ನು ಪ್ರಸಾರ ಮಾಡಿಸಿದ್ದೆವು.  

ಇದೀಗ ಕನ್ನಡದ ಕೆಜಿಎಫ್ 2 ಅದು ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ತುಂಬಾ ಖುಷಿ ತಂದಿದೆ ಎಂದು ಮಾತನಾಡಿದ್ದಾರೆ. ಹೌದು ಈ ಜೋಡಿ ಹೆಸರು ಆಶಾ ಕಿರಣ ಎಂದು, ಯಶ್ ಜೊತೆ ಮಾತುಕತೆ ನಡೆಸಿದ ಈ ಜೋಡಿ ಸಿನಿಮಾ ಬಗ್ಗೆ ಹಾಗೆ ಅಲ್ಲಿರುವ ಕೆಜಿಎಫ್ ಚಾಪ್ಟರ್ ಟು ಸಿನಿಮಾದ ಕ್ರೇಜ್ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಯಶ್ ಸಹ ಅಲ್ಲಿರುವ ಈ ಕನ್ನಡಿಗರಿಗೆ ಇನ್ನೊಂದು ಮಾತನ್ನು ಕೂಡ ಕೊಟ್ಟಿದ್ದಾರೆ. ಅದು ಏನು ಎಂಬುದಾಗಿ ತಿಳಿಯಲು ಈ ಲೇಖನದಲ್ಲಿರುವ ವಿಡಿಯೋ ನೋಡಿ. ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ ಧನ್ಯವಾದಗಳು..