ಕೆಜಿಎಫ್​ ಚಾಪ್ಟರ್ 2 ಸಿನಿಮಾದಲ್ಲಿ ಅನಂತ್ ನಾಗ್ ಬದಲು ಪ್ರಕಾಶ್ ರಾಜ್​ ಏಕೆ  ಎಂದು ಉತ್ತರ ನೀಡಿದ ಯಶ್

By Infoflick Correspondent

Updated:Monday, April 11, 2022, 21:44[IST]

ಕೆಜಿಎಫ್​ ಚಾಪ್ಟರ್ 2 ಸಿನಿಮಾದಲ್ಲಿ ಅನಂತ್ ನಾಗ್ ಬದಲು ಪ್ರಕಾಶ್ ರಾಜ್​ ಏಕೆ  ಎಂದು ಉತ್ತರ ನೀಡಿದ ಯಶ್

ರಾಕಿಂಗ್ ಸ್ಟಾರ್ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್ 2 ಸಿನಿಮಾ ಏಪ್ರಿಲ್ 14 ರಂದು ವಿಶ್ವದಾದ್ಯಂತ ಭಾರೀ ನಿರೀಕ್ಷೆಗಳೊಂದಿಗೆ ತೆರೆಗೆ ಬರುತ್ತಿದೆ. ಹಲವು ವರ್ಷದಿಂದ ಅಭಿಮಾನಿಗಳಿಂದ ನಿರೀಕ್ಷೆಯಿಟ್ಟಿದ್ದ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಆದರೆ ಈ ಮದ್ಯೆ ಕೆಲವು ಅಪಸ್ವರ ಧ್ವನಿ ಕೇಳುತ್ತಿದೆ. 

ಕೆಜಿಎಫ್ 1 ರಲ್ಲಿ ಅನಂತನಾಗ್ ಸಂಭಾಷಣೆ ಅವರ ಧ್ವನಿ ಜನಮನ ಗೆದ್ದಿತ್ತು. ಕೆಜಿಎಫ್ 2 ಟೀಸರ್, ಟೇಲರ್ ಬಿಡುಗಡೆಯಾದಾಗಲೇ ಹಿರಿಯನಟ ಅನಂತನಾಗ್ ಇಲ್ಲ. ಅವರ ಧ್ವನಿ ಈ ಸಿನಿಮಾದಲ್ಲಿ ದೊಡ್ಡ ಕೊರತೆ‌ ಎಂದು ಜನ ಮಾತನಾಡುತ್ತಿದ್ದರು. ಈ ಬಗ್ಗೆ ಅನಂತನಾಗ್ ಆಗಲಿ ಯಶ್ ಆಗಲಿ ಯಾವುದೇ ಉತ್ತರ ನೀಡಿರಲಿಲ್ಲ. ಈ ಕುರಿತು ಇದೀಗ ಯಶ್ ಮಾತನಾಡಿದ್ದಾರೆ.  

ಕೆಜಿಎಫ್​ ಚಾಪ್ಟರ್ 2 ಸಿನಿಮಾದಲ್ಲಿ ಅನಂತ್ ನಾಗ್ ಬದಲು ಪ್ರಕಾಶ್ ರಾಜ್​ ಏಕೆ..? ಎಂಬ ಪ್ರಶ್ನೆಗೆ ಉತ್ತರಿಸಿದ ಯಶ್ ಅವರು, ಅನಂತ್​​ ನಾಗ್​ ಸರ್ ಅವರು ನನಗೆ ತಂದೆಯ ಸಮಾನ. ಕರ್ನಾಟಕದ ಲೆಜೆಂಡ್​​​ ಅವ್ರು. ಅವರು ನಮ್ಮನ್ನು ಬೆರಳು ಹಿಡಿದುಕೊಂಡು ನಡೆಸಿಕೊಂಡು ಬಂದಿದ್ದಾರೆ. ಈಗಲೂ ಈ ಸಿನಿಮಾ ಕುರಿತು ಅವರು ನನಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಕೆ.ಜಿ.ಎಫ್ 1 ಸಿನಿಮಾದ ದೊಡ್ಡ ಶಕ್ತಿಯಾಗಿದ್ದರು ಅವರು. 

ಅವರ ನನ್ನ ಸಂಬಂಧ ಸದಾ ಶಾಶ್ವತ ನಾನು ಅವರಿಗೆ ಅಪಾರ ಗೌರವ ಕೊಡುತ್ತೇನೆ‌. ಈ ಪ್ರಶ್ನೆಯನ್ನು ನೀವು ನಿರ್ದೇಶಕರಿಗೆ ಕೇಳಬೇಕು. ಇಲ್ಲಿ ಪ್ರಕಾಶ್​ ರಾಜ್ ಅವರನ್ನು ರಿಪ್ಲೇಸ್​ ಅಂದುಕೊಳ್ಳುವಂತಿಲ್ಲ. ಜನ ಸಿನಿಮಾ ನೋಡಿದ ಮೇಲೆ ಯಾಕೆ ಬದಲಾವಣೆ ಮಾಡಲಾಗಿದೆ ಎಂಬುವುದು ತಿಳಿಯುತ್ತದೆ.ಎಂದಿದ್ದಾರೆ ನಟ ನಾಯಕ ಯಶ್.