ದರ್ಶನ್ ಸಾರ್ ಸಿನಿಮಾಗಳೇ ನಮಗೆ ಸ್ಪೂರ್ತಿ ಎಂದಿದ್ದ ಯಶ್..! ಇಬ್ಬರ ಮಾತುಕತೆ ವಿಡಿಯೋ ವೈರಲ್
Updated:Tuesday, April 19, 2022, 22:12[IST]

ಕನ್ನಡದ ಬಹುನಿರೀಕ್ಷಿತ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್ 2 ಈಗ ವಿಶ್ವದಾದ್ಯಂತ ರಾರಾಜಿಸುತ್ತಿದೆ. ಹೌದು ಬಾಲಿವುಡ್ ಅಂಗಳದಲ್ಲಿ ರಾಕಿ ಬಾಯ್ ಕೆಜಿಎಫ್ ಭಾಗ ಎರಡರ ಎಂಟ್ರಿ ನೋಡಿ ಸಖತ್ ಫಿದಾ ಆಗಿದ್ದಾರೆ. ರಾಕಿ ಬಾಯ್ ಗರ್ಜನೆಗೆ ಹಾಗೂ ಅಭಿನಯಕ್ಕೆ ಬಾಲಿವುಡ್ ಮಂದಿ ನಿಂತು ಚಪ್ಪಾಳೆ ಹೊಡೆದು ಶಿಳ್ಳೆ ಹೊಡೆಯುತ್ತಿದ್ದಾರೆ. ಹೌದು ಒಂದು ನಮ್ಮ ಕನ್ನಡದ ಸಿನಿಮಾ ಈ ಮಟ್ಟಕ್ಕೆ ಇಂದು ಬೆಳೆದಿದೆ ಎಂದರೆ ಹೆಮ್ಮೆಯ ವಿಷಯ. ಕೆಜಿಎಫ್ ಚಿತ್ರತಂಡ ಇದರ ಸೂತ್ರಧಾರ ಆಗಿದ್ದು ತುಂಬಾ ಕಷ್ಟ ಪಟ್ಟಿದೆ ಎಂದು ನಾವು ಹೇಳಬಹುದು. ಕೆಜಿಎಫ್ ಚಿತ್ರದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇಂಡಿಯಾದ ಟಾಪ್ ನಿರ್ದೇಶಕ ಹಾಗೂ ಎಲಿವೇಶನ್ ಕ ಬಾಪ್ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಚಳಕ ಇದರಲ್ಲಿ ಎದ್ದುಕಾಣುತ್ತಿದೆ. ಒಂದು ಹಾಲಿವುಡ್ ಸಿನಿಮಾ ನೋಡಿದ ಹಾಗೇನೇ ಸಿನಿಮಾ ಮೂಡಿ ಬಂದಿದೆ. ಹೌದು ಇದು ಸೌತ್ ಇಂಡಿಯಾ ಸಿನಿಮಾ ಆಗಿದ್ದು, ಹೊರದೇಶಗಳಲ್ಲಿ ಸಹ ಹೆಚ್ಚು ಪ್ರದರ್ಶನ ಕಾಣುತ್ತಿದೆ. ನಾಲ್ಕೇ ದಿನಕ್ಕೆ 540 ಕೋಟಿ ಕಲೆಕ್ಷನ್ ಮಾಡಿರುವ ಕೆಜಿಎಫ್ ಚಾಪ್ಟರ್ 2 ಇನ್ನು ಒಂದು ವಾರದಲ್ಲಿ ಸಾವಿರ ಕೋಟಿ ದಾಟುವುದು ಪಕ್ಕಾ ಎನ್ನಬಹುದು. ಹೌದು ಯಶಸ್ಸು ಹೀಗೆ ಮುಂದುವರೆಯಲಿ. ನಟ ಯಶ್ ಅವರ ಈ ಹಿಂದಿನ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರಿ ವೈರಲ್ ಆಗುತ್ತಿದೆ. ಒಂದು ಸಂದರ್ಶನದಲ್ಲಿ ಹೇಳಿದ ಮಾತುಗಳನ್ನು ಕೇಳುತ್ತಿದ್ದರೆ ನಿಜಕ್ಕೂ ನಟ ಯಶ್ ಅವರು ಯಾರನ್ನ ಸ್ಪೂರ್ತಿಯಾಗಿ ತೆಗೆದುಕೊಂಡಿದ್ದರು. ಹಾಗೆ ಸೀನಿಯರ್ ಕಲಾವಿದರ ಜೊತೆ ಮಾತನಾಡುವಾಗ ಎಂತಹ ಸರಳತೆಯ ವ್ಯಕ್ತಿತ್ವ ಇವರದು ಎಂದೆನಿಸುತ್ತದೆ.
ಜೊತೆಗೆ ದರ್ಶನ್ ಅವರು ಸಹ ಎಷ್ಟು ಸರಳತೆಯಿಂದ ಮಾತನಾಡುತ್ತಾರಪ್ಪ ಎಂದೆನಿಸುತ್ತದೆ. ಹೌದು ಯಶ್ ಅವರು ದರ್ಶನ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು, ಸರಸ್ವತಿಯ ಮೈಸೂರಿನ ಥಿಯೇಟರ್ ನಲ್ಲಿ ನಟ ದರ್ಶನ್ ಅವರ ಸಿನಿಮಾಗಳನ್ನು ನೋಡಿಯೇ ಸ್ಪೂರ್ತಿ ತೆಗೆದುಕೊಂಡು ಸಿನಿಮಾರಂಗಕ್ಕೆ ಬಂದಿದ್ದರಂತೆ. ದರ್ಶನ್ ಅವರ ಜೊತೆ ಯಶ್ ಅವರು ಮಾತನಾಡಿದ ಈ ವಿಡಿಯೋ ಈಗ ಅಧಿಕ ವೈರಲ್ ಆಗುತ್ತಿದೆ. ಯಶ್, ದರ್ಶನ್, ಅವರ ಅಭಿಮಾನಿಗಳು ಮಾತ್ರ ಹೆಚ್ಚು ಕಿತ್ತಾಡುತ್ತಾರೆ. ಇವರಿಬ್ಬರು ತುಂಬಾ ಚೆನ್ನಾಗಿಯೇ ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಈ ವಿಡಿಯೋ ಎನ್ನಬಹುದು. ಈ ವಿಡಿಯೋ ನೋಡಿ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...(video credit : rz studio kannada )