Yash : ಯಾರು ಯಶ್ ಆಗಲಿಕ್ಕೆ ಪ್ರಯತ್ನಿಸಬೇಡಿ ಎಂದು ಯಶ್ ಹೇಳಿದ್ದ್ಯಾಕೆ : ಕಾರಣ ಏನು ಗೊತ್ತೇ ?

By Infoflick Correspondent

Updated:Wednesday, May 4, 2022, 15:07[IST]

Yash  : ಯಾರು ಯಶ್ ಆಗಲಿಕ್ಕೆ ಪ್ರಯತ್ನಿಸಬೇಡಿ ಎಂದು ಯಶ್ ಹೇಳಿದ್ದ್ಯಾಕೆ :  ಕಾರಣ ಏನು ಗೊತ್ತೇ ?

ಕನ್ನಡದ ನಿರೀಕ್ಷಿತ ಚಿತ್ರ ಕೆಜಿಎಫ್ ಭಾಗ-2 ಇದೀಗ ವಿಶ್ವದಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಹೌದು ಕೆಜಿಎಫ್ ಭಾಗ-2 ಒಂದು ಕಮರ್ಷಿಯಲ್ ಮತ್ತು ಆಕ್ಷನ್ ಪ್ಯಾಕ್ ಸಿನಿಮಾ ಎಂದು ಹೇಳಬಹುದು. ಕೆಜಿಎಫ್ ಸಿನಿಮಾ ನೋಡಿದ ಪ್ರತಿಯೊಬ್ಬರೂ ತುಂಬಾ ಥ್ರಿಲ್ಲಾಗಿದ್ದಾರೆ. ಬಹಳ ವರ್ಷಗಳ ಬಳಿಕ ಸಕತ್ ಮಜಾ ನೀಡುವ ಸಿನಿಮಾ ನೋಡಿದೆವು, ಇಂತಹ ಸಿನಿಮಾ ಮತ್ತೆ ಬರಲು ಸಾಧ್ಯವಿಲ್ಲ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಚಳಕತನಕೆ ಫಿದಾ ಆಗಿದ್ದಾರೆ ಸಿನಿಪ್ರಿಯರು ಹಾಗೂ ಅಭಿಮಾನಿಗಳು. ಹೌದು ಪ್ರಶಾಂತ್ ನೀಲ್ ಅವರು ಒಬ್ಬ ಪ್ರತಿಭಾವಂತ ನಿರ್ದೇಶಕ ಎನ್ನಬಹುದು. ಕೆಜಿಎಫ್ ಮುಖಾಂತರ ಇಡಿ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ಮುಖಮಾಡಿ ಚಪ್ಪಾಳೆ ಹೊಡೆಯುವಂತೆ ಮಾಡಿದ್ದಾರೆ.

ಕೇವಲ ಯಶ್ ಅವರು ಮಾತ್ರವಲ್ಲದೆ ಇಡೀ ಕೆಜಿಎಫ್ ಚಿತ್ರತಂಡ ಕೆಜಿಎಫ್ ಸಿನಿಮಾಗಾಗಿ ದೊಡ್ಡ ದೊಡ್ಡ ಕನಸು ಕಂಡಿದ್ದು ಇಂದು ನನಸು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಸಂದರ್ಶನ ನೀಡುವ ವೇಳೆ ಯಶ್ ಅವ್ರು ಕೆಲವೊಂದಿಷ್ಟು ವಿಚಾರಗಳನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಕನ್ನಡ ಸಿನಿಮಾರಂಗ ಹೇಗೆ ಇರುತ್ತದೆ, ಹಾಗೆ ಹೇಗಿರಬೇಕು ಎನ್ನುವುದು ಯಶ್ ಅವರ ಅಭಿಪ್ರಾಯ ಎಂಬುದಾಗಿ ಪ್ರಶ್ನೆ ಮಾಡಿದಾಗ, ಯಶ್ ಹೊಸ ಹೊಸ ಟೆಕ್ನಿಷಿಯನ್ ಗಳು ಬರುತ್ತಾರೆ, ಹೊಸ ಪ್ರತಿಭಾವಂತ ನಾಯಕ ನಟರುಗಳು ಬರಬೇಕು, ಹೊಸ ಕಲಾವಿದರಿಗೆ ಅವಕಾಶ ಸಿಗಬೇಕು, ಹೆಚ್ಚು ತೇಟರ್ಗಳು ಕನ್ನಡಮಯವಾಗಿ ಕನ್ನಡ ಚಿತ್ರಕ್ಕೆ ಹೆಚ್ಚು ಪ್ರೋತ್ಸಾಹ ನೀಡುವಂತಾಗಬೇಕು ಎಂದರು.

ಕೊನೆಗೆ ಯಶ್ ಅವರನ್ನು ನೋಡಿ ಸಾಕಷ್ಟು ಕಲಾವಿದರು ಯಶ್ ಅವರಂತೆ ಆಗಬೇಕು ಎನ್ನುವ ಪ್ರಶ್ನೆಗೆ, ಉತ್ತರವು ಹೀಗಿತ್ತು. ಹೌದು, ಯಶ್ ಹೇಳಿದ ಹಾಗೆ, ಯಶ್ ಆಗಬೇಡಿ ಬೇಕಾದರೆ ಸ್ಪೂರ್ತಿ ತೆಗೆದುಕೊಂಡು ಸಾಧನೆ ಮಾಡಲಿ, ಯಶ್ ಅವರು ಆಗದೆ ಅವರು ಅವರಾಗೆ ಇದ್ದು ಗೆದ್ದರೆ, ಅವರ ಹೆಸರಿನಲ್ಲಿ ಗುರುತಿಸಿಕೊಂಡರೆ, ಅದು ಅವರಿಗೆ ದೊಡ್ಡ ಸಾಧನೆ. ನನಗಿಂತಲೂ ಅತಿದೊಡ್ಡ ಪ್ರತಿಭಾವಂತ ಕಲಾವಿದರಿದ್ದಾರೆ. ನನ್ನ ಸಿನಿಮಾ ದಾರಿಯನ್ನು ಸ್ಪೂರ್ತಿ ತೆಗೆದುಕೊಳ್ಳಲಿ ಆದ್ರೆ ಯಶ್ ಆಗುವುದು ಬೇಡ ಎಂದಿದ್ದಾರೆ ನಟ ಯಶ್.. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ...