Yash : ಕನ್ನಡಿಗರ ಆಸೆ ಮೊದಲಾ ಅಥವಾ ಮರಾಠಿಗರ ಆಸೆ ಮೊದಲಾ..? ಯಶ್ ಹೊಸ ಪೋಸ್ಟರ್ ವೈರಲ್

By Infoflick Correspondent

Updated:Thursday, June 2, 2022, 10:56[IST]

Yash :  ಕನ್ನಡಿಗರ ಆಸೆ ಮೊದಲಾ ಅಥವಾ ಮರಾಠಿಗರ ಆಸೆ ಮೊದಲಾ..? ಯಶ್ ಹೊಸ ಪೋಸ್ಟರ್ ವೈರಲ್

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಇದೀಗ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇಡೀ ಇಂಡಿಯಾ ಅಭಿಮಾನಿಗಳ ಬಳಗಕ್ಕೆ ಸೀಮಿತವಾಗಿದ್ದಾರೆ ಎಂದು ಹೇಳಬಹುದು. ಯಶ್ ಅವರು, ಅವರ ನಟನೆಯ ಕೆಜಿಎಫ್ 2 ಸಿನಿಮಾ ಮೂಲಕ ವಿಶ್ವಮಟ್ಟಕ್ಕೆ ತಲುಪಿದ್ದಾರೆ. ಅವರು ಮಾತ್ರ ತಲುಪುವುದಿಲ್ಲದೆ ಕನ್ನಡ ಸಿನಿಮಾರಂಗವನ್ನು ಸಹ ಅತಿದೊಡ್ಡ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರೆ ನಿಜಕ್ಕೂ ತಪ್ಪಾಗಲಾರದು. ಹೌದು ಕೆಜಿಎಫ್ ಸಿನಿಮಾ ಭಾಗ-2 ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ನಟ ಯಶ್ ಅವರ ಆ ರೇಂಜ್ ಬದಲಾಗಿದೆಯೆಂದು ಹೇಳಬಹುದು. ಯಶ್ ಮುಂದಿನ ಸಿನಿಮಾ ಹೇಗಿರಬಹುದು ಯಾವ ರೀತಿಯ ಸಿನೆಮಾ ಆಗಿರಬಹುದು, ಯಶ್ ಅವರು ಎಂತಹ ಸಿನಿಮಾದಲ್ಲಿ ಮುಂದೆ ಅಭಿನಯ ಮಾಡಬಹುದು ಎಂದು ತುಂಬಾನೇ ಚರ್ಚೆ ನಡೆಸುತ್ತಿದ್ದಾರೆ.

ಹೌದು ಗಾಂಧಿನಗರದಲ್ಲಿ ಇದರ ಬಗ್ಗೆ ಈಗಾಗಲೇ ಹೆಚ್ಚು ಚರ್ಚೆ ನಡೆಯುತ್ತಿದ್ದು, ಯಶ್ ಮಾಡಿದರೆ ಮುಂದಿನ ಸಿನಿಮಾ ಇದೇ ರೀತಿ ಇರಬೇಕು ಎಂಬುದಾಗಿ ಲೆಕ್ಕಾಚಾರ ಹಾಕುತ್ತಿದ್ದಾರೆ ಸಿನಿಮಾ ಪ್ರಿಯರು. ಹೀಗಿರುವಾಗ ನಟ ಯಶ್ ಅವರು ಇದೀಗ ಕೇವಲ ಕನ್ನಡ ಅಭಿಮಾನಿಗಳಿಗೆ ಮಾತ್ರ ಸೀಮಿತ ಆಗಿಲ್ಲದೆ, ಬದಲಿಗೆ ನಮ್ಮ ದೇಶದ ಎಲ್ಲಾ ಅಭಿಮಾನಿ ಬಳಗಕ್ಕೂ ಸೀಮಿತವಾಗಿದ್ದಾರೆ ಎನ್ನಬಹುದು. ಹೌದು ನಟ ಯಶ್ ಅವರ ಬಳಿ ಇದೀಗ ಮಹಾರಾಷ್ಟ್ರದ ಅಭಿಮಾನಿಗಳು ಮುಂದಿನ ನಿಮ್ಮ ಸಿನಿಮಾ ಛತ್ರಪತಿ ಶಿವಾಜಿಯವರ ಬಯೋಪಿಕ್ ಸಿನಿಮಾ ಆಗಿರಲಿ ಎಂದು ಮನವಿ ಮಾಡಿದ್ದಾರೆ. ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಫ್ಯಾನ್ ಮೇಡ್ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದಾರೆ. ಇನ್ನೊಂದು ಕಡೆ ಕನ್ನಡಿಗರು ಕೂಡ ಯಶ್ ಮುಂದೆ ಇಮ್ಮಡಿ ಪುಲಕೇಶಿ ಪಾತ್ರ ಮಾಡಿ ಎಂದು ಹೇಳುತ್ತಿದ್ದಾರೆ.

ಮಹಾರಾಷ್ಟ್ರದ ಮರಾಠಿಗರು ಅವರ ನಾಯಕ ಚಿತ್ರಪತಿ ಶಿವಾಜಿ ಸಿನಿಮಾ ಮಾಡುವಂತೆ ಮನವಿ ಮಾಡಿದ್ದು ಇದೀಗ ಈ ವಿಚಾರ ಚರ್ಚೆಯಾಗುತ್ತಿದೆ. ಮೊದಲು ಯಶ್ ಯಾರ ಆಸೆ ತೀರಿಸುತ್ತಾರೆಂದು ಕಾದುನೋಡಬೇಕು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...