Yash : ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟ ಯಶ್..! ಕನ್ನಡಿಗರಿಗೆ ಕೊಟ್ಟ ಮಾತು ನಿಜ ಆಯ್ತು ಡೈರೆಕ್ಟರ್ ಇವರೇ ನೋಡಿ..!

By Infoflick Correspondent

Updated:Thursday, May 5, 2022, 21:16[IST]

Yash : ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟ ಯಶ್..! ಕನ್ನಡಿಗರಿಗೆ ಕೊಟ್ಟ ಮಾತು ನಿಜ ಆಯ್ತು  ಡೈರೆಕ್ಟರ್ ಇವರೇ ನೋಡಿ..!

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಇದೀಗ ವಿಶ್ವದಾದ್ಯಂತ ಸಕತ್ತಾಗಿ ಕಲೆಕ್ಷನ್ ಮಾಡುತ್ತಿದೆ. ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯ ವಿಶ್ವಮಟ್ಟಕ್ಕೆ ತಲುಪಿದೆ ಎನ್ನಬಹುದು. ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಭಾಗ ಎರಡರಲ್ಲಿ ತುಂಬಾನೇ ಅತ್ಯದ್ಭುತ ಕಥೆಯನ್ನು ಮಾಡಿ ಎಲಿವೇಷನ್ ನೀಡಿ ಒಂದು ವಿಭಿನ್ನವಾದ ಅನುಭವ ಪ್ರೇಕ್ಷಕರಿಗೆ ನೀಡಿದ್ದಾರೆ ಎನ್ನಬಹುದು. ಹೌದು ಕೆಜಿಎಫ್ ಚಾಪ್ಟರ್ 2 ಸಿನಿಮಾ ಆಯಿತು, ಸಾವಿರ ಕೋಟಿ ಕಲೆಕ್ಷನ್ ಸಹ ಆಗಿಯೇ ಹೋಯಿತು. ಕೆಜಿಎಫ್ ಸಿನಿಮಾ ಮುಗಿದಮೇಲೆ ಯಶ್ ಅವರು ಯಾವ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಸಾಕಷ್ಟು ಬಾರಿ ಚರ್ಚೆ ಮಾಡಿದ್ದರು.

ಅದಕ್ಕೆ ಉತ್ತರವೆಂಬಂತೆ ಯಶ್ ಅವರ ಮುಂದಿನ ಸಿನಿಮಾ ಯಾವುದು..? ಯಾರು ನಿರ್ದೇಶನ ಮಾಡುತ್ತಿದ್ದಾರೆ ಯಾವ ಸಂಸ್ಥೆ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ ಹಾಗೆ ಎಂತಹ ಪಾತ್ರದಲ್ಲಿ ಯಶ್ ಅಭಿನಯ ಮಾಡುತ್ತಿದ್ದಾರೆ ಎಂದು ಈಗ ತಿಳಿದುಬಂದಿದೆ. ಹೌದು ಮಾಧ್ಯಮ ಮೂಲಕ ತಿಳಿದು ಬಂದಿರುವ ಮಾಹಿತಿ ಪ್ರಕಾರ, ನಿರ್ದೇಶಕ ನರ್ತನ್ ಅವರು ಯಶ್ ಅವರ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ. ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ ಎಂದು ತಿಳಿದುಬಂದಿದೆ. ಹೌದು ವೆಂಕಟ್ ಕೊನಂಕಿ ಅವರ ಸಂಸ್ಥೆ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಸುಮಾರು ಎರಡುವರೆ ವರ್ಷಗಳಿಂದ ಯಶ್ ಆವರಿಗಾಗಿ ಈ ಸಿನಿಮಾ ಕಥೆ ರೆಡಿ ಮಾಡಿ, ಸಿದ್ಧತೆಯ ಪಡಿಸಲಾಗುತ್ತಿದೆ ಎನ್ನಲಾಗಿದೆ.   

ಸುಮಾರು 50 ಲಕ್ಷ ಹಣವನ್ನು ಕೇವಲ ಸ್ಕ್ರಿಪ್ಟ್ ಗಾಗಿಯೇ ಖರ್ಚು ಮಾಡಿದ್ದಾರೆ ಎಂದು ತಿಳಿದು ಬರುತ್ತಿದೆ. ಇದು ಫ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಯಶ್ ಹೇಳಿದ ಹಾಗೆ  ಕನ್ನಡದಲ್ಲಿ ನಟಿಸುತ್ತಿದ್ದಾರೆ. ಅದರಂತೆ ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಕನ್ನಡ ಸಿನಿಮಾದಲ್ಲಿ ಯಶ್ ಅಭಿನಯ ಮಾಡುವವರಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಹಾಗೆ ಯಶ್ ಅವರು ಈ ಸಿನಿಮಾದಲ್ಲಿ ನಿವೃತ್ತ ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಗೋವಾದಲ್ಲಿ ಯಶ್ ಅವರ ಜೊತೆ ನಿರ್ಮಾಪಕ ವೆಂಕಟ್ ಕೊನಂಕಿ ಅವರು ಕಾಣಿಸಿಕೊಂಡಿದ್ದು ಈ ಮಾಹಿತಿ ನಿಜ ಎನ್ನುತ್ತಿದ್ದಾರೆ ಅಭಿಮಾನಿಗಳು. ಮುಂದೆ ಏನು ಅನೌನ್ಸ್ ಮಾಡುತ್ತಾರೋ ಕಾದು ನೋಡಬೇಕು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೇ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...