Yash : ಯಶ್ ಇನ್ನೂ ಐದು ವರ್ಷ ಬ್ಯುಸಿ, ಯಾಕೆ ಗೊತ್ತಾ..? ಕಾರಣ ಇಲ್ಲಿದೆ..!

By Infoflick Correspondent

Updated:Sunday, July 10, 2022, 16:35[IST]

Yash :  ಯಶ್ ಇನ್ನೂ ಐದು ವರ್ಷ ಬ್ಯುಸಿ, ಯಾಕೆ ಗೊತ್ತಾ..? ಕಾರಣ ಇಲ್ಲಿದೆ..!

ಸ್ಯಾಂಡಲ್ವುಡ್ ಮೂಲಕ ಜನಪ್ರಿಯತೆ ಪಡೆದುಕೊಂಡ ರಾಕಿಂಗ್ ಸ್ಟಾರ್ ಯಶ್ ಇದೀಗ ಇಡೀ ಜಗತ್ತಿಗೆ ದೊಡ್ಡ ಸ್ಟಾರ್ ನಟ ಆಗಿ ಹೊರ ಹೊಮ್ಮಿದ್ದಾರೆ. ಹೌದು, ನಟ ಯಶ್ ಅವರು ಕೆಜಿಎಫ್ ಸಿನಿಮಾ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಚಳತನಕದಿಂದ ಎಲ್ಲೆಡೆ ರಾಖಿ ಬಾಯ್ ಸಿನಿಮಾ ಹವಾ ಮಾಡಿತು. ಸಾವಿರ ಕೋಟಿ ಕಲೆಕ್ಷನ್ ಮಾಡಿ ದೊಡ್ಡ ದಾಖಲೆ ಮಾಡಿತು. ರಾಕಿ ಭಾಯ್ ಹವಾ ತುಂಬಾನೇ ಜೋರಾಗಿದೆ ಎಂದು ಹೇಳಬಹುದು. ಹೌದು ಕೆಜಿಎಫ್ ಭಾಗ ಒಂದು ಭಾಗ ಎರಡರ ಮೂಲಕ ಇಡೀ ವಿಶ್ವಕ್ಕೆ ಪರಿಚಯ ಆಗಿರುವ ಯಶ್ ಅವರು ಇದೀಗ ಕನ್ನಡ ಚಿತ್ರರಂಗಕ್ಕೆ  ಮಾತ್ರವಲ್ಲದೆ ಬೇರೆ ಬೇರೆ ಚಿತ್ರರಂಗದಲ್ಲೂ ಕೂಡ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.    

ಹೌದು, ರಾಕಿ ಬಾಯ್ ಮುಂದಿನ ಐದು ವರ್ಷ ತುಂಬಾ ಬಿಜಿಯಾಗಿರಲಿದ್ದಾರಂತೆ. ಹಾಗಂತ ಅತ್ತ ಟಾಲಿವುಡ್ ಅಂಗಳದಲ್ಲಿ ಒಂದು ಮಾತು ಕೇಳಿ ಬಂದಿದೆ. ನಟ ಯಶ್ ಮೇಲೆ ಸಾವಿರ ಸಾವಿರ ಕೋಟಿ ಹಣ ಹಾಕಲು, ಬಂಡವಾಳ ಹೂಡಲು ಪ್ರೊಡ್ಯೂಸರ್ಸ್ ರೆಡಿ ಇದ್ದಾರಂತೆ. ಮುಂದಿನ ಐದು ವರ್ಷ ಯಶ್ ಈಗಾಗಲೇ ಸಿನಿಮಾಗಾಗಿ ಸಮಯ ನೀಡಿದ್ದು ಹೆಚ್ಚು ಬಿಜಿ ಇರಲಿದ್ದಾರೆ. ಐದು ವರ್ಷದಲ್ಲಿ ಒಂದೇ ಸಿನಿಮಾ ಬರುವುದಿಲ್ಲ, ಬದಲಿಗೆ ಒಟ್ಟು ಐದು ಸಿನಿಮಾಗಳು ಬರುತ್ತವೆ. ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಜೊತೆ ಯಶ್ ಅವರ ಮುಂದಿನ ಸಿನಿಮಾ ಈಗಾಗಲೆ ಕನ್ಫರ್ಮ್ ಆಗಿದ್ದು, ಕೆವಿ ಎನ್ ಸಂಸ್ಥೆ ಬಂಡವಾಳ ಹೂಡಲು ಎಲ್ಲಾ ಸಿದ್ಧತೆ ನಡೆಸಿದೆ. ಆದರೆ ಇನ್ನು ಅದು ಪಕ್ಕಾ ಆಗಿಲ್ಲ ಎಂದು ಹೇಳಲಾಗಿದ್ದು ಅದೊಂದೇ ಬಾಕಿ ಇದೆಯಂತೆ..ಹಾಗೂ ರಾಕಿ ಭಾಯ್ ಗೆ ನಟಿ ಪೂಜಾ ಹೆಗಡೆ ಬರುವುದು ಕಂಫರ್ಮ್ ಆಗಿದೆ...

ಹಾಗೆ ದಿಲ್ ರಾಜು ಅವರು ಯಶ್ ಅವರಿಗೆ ನೂರು ಕೋಟಿ ಕೊಟ್ಟು ಸಿನಿಮಾವನ್ನು ಮಾಡುತ್ತಿದ್ದಾರೆ. ಯಶ್ ಅವರು ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದು ಚಿತ್ರಕಥೆ ಯಾವುದು ಏನು ಎತ್ತ ಎನ್ನುವ ಯಾವ ಮಾಹಿತಿಯೂ ಸಹ ತಿಳಿದು ಬಂದಿಲ್ಲ. ಜೊತೆಗೆ ಪುಷ್ಪ ಖ್ಯಾತಿಯ ಸುಕುಮಾರ್ ಕೂಡ ಯಶ್ ಗೆ ಸಿನಿಮಾ ಮಾಡಲಿದ್ದಾರೆ ಎಂದು ಕೇಳಿ ಬಂದಿದೆ. ಇದರ ಮದ್ಯೆ ಕೆ ಜಿ ಫ್  ಭಾಗ ೩ ಹೊಂಬಾಳೆ ಫಿಲಂಸ್ ಜೊತೆ ಮಾಡಲಿದ್ದಾರೆ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...