ನಾನು ಕರ್ನಾಟಕದವನು, ಕನ್ನಡದ ಆಸ್ತಿ ಎಂದ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದ್ಯೇಕೆ

By Infoflick Correspondent

Updated:Monday, April 11, 2022, 21:09[IST]

ನಾನು ಕರ್ನಾಟಕದವನು, ಕನ್ನಡದ ಆಸ್ತಿ ಎಂದ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದ್ಯೇಕೆ

ವಿಶ್ವದ ಮೂಲೆ ಮೂಲೆಯಲ್ಲೂ ರಾಕಿಂಗ್ ಸ್ಟಾರ್ ನದ್ದೇ ಹವಾ. ಕೆಜಿಎಫ್ ಚಿತ್ರದ ಮೂಲಕ ಇಂಟರ್ ನ್ಯಾಷನಲ್ ಹೀರೋ ಆಗಿದ್ದಾರೆ. ಆದರೆ ಯಶ್ ಈ ಮಟ್ಟದ ಯಶಸ್ಸನ್ನು ಕಾಣಲು ತುಂಬಾ ಕಷ್ಟ ಪಟ್ಟಿದ್ದಾರೆ. ಸತತ 8 ವರ್ಷಗಳ ಕಾಲ ಕೆಜಿಎಫ್ ಸಿನಿಮಾಗಾಗಿ ಮೀಸಲಿಟ್ಟ ಯಶ್ ಅವರು ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ನಾನು ಕರ್ನಾಟಕದವನು, ಕನ್ನಡದ ಆಸ್ತಿ ಎಂದು ಕೂಡ ರಾಕಿಂಗ್ ಸ್ಟಾರ್ ಯಶ್ ಅವರು ಹೇಳಿದ್ದಾರೆ. ಹಾಗಾದರೆ, ಯಶ್ ಅವರು ಇನ್ನೂ ಏನೇನು ಹೇಳಿದ್ದಾರೆ ಎಂದು ನೋಡೋಣ ಬನ್ನಿ.. 

ಯಶ್ ಈಗ ಕೇವಲ ಸ್ಯಾಂಡಲ್ ವುಡ್  ಹೀರೋ ಅಲ್ಲ. ಬಾಲಿವುಡ್, ಕಾಲಿವುಡ್, ಟಾಲಿವುಡ್ ಹಾಗೂ ಹಾಲಿವುಡ್ ನಲ್ಲೂ ಫೇಮಸ್ ಆಗಿದ್ದಾರೆ. ಕೆಜಿಎಫ್ ಚಿತ್ರದ ಬಳಿಕ ಯಶ್ ಅವರ ಅಭಿಮಾನಿ ಬಳಗ ಹೆಚ್ಚಾಗಿದೆ. ಯಶ್ ಅವರ ನೇಮ್ ಹಾಗೂ ಫೇಮ್ ಕೂಡ ಹೆಚ್ಚಾಗಿದೆ. ಯಶ್ ಅವರು ಕೆಜಿಎಫ್ ಗಾಗಿ ಸಾಕಷ್ಟು ಡೆಡಿಕೇಟೆಡ್ ಆಗಿ ಸಿನಿಮಾ ಮಾಡಿದ್ದಾರೆ. ಹಾಗಾಗಿ ಈ ಚಿತ್ರಕ್ಕೆ ಒಳ್ಳೆಯ ರಿಸಲ್ಟ್ ಸಿಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಯಶ್ ಅವರು ನಂಬಿದ್ದಾರಂತೆ. ಅದರ ಪ್ರಕಾರ ಸಾಗುತ್ತಿದ್ದೇನೆ ಎಂದು ಹೇಳಿದ್ದಾರೆ.    

ಇನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಯಶ್ ಅವರು ಇನ್ಮುಂದೆ ಇಂತಹದ್ದೇ ಸಿನಿಮಾ ಮಾಡುವುದಾ ಎಂಬ ಬಗ್ಗೆ ಕೇಳಿದ್ದಕ್ಕೆ, ಯಶ್ ಅವರು ಹಾಗಂತ ಅಲ್ಲ. ನಾನು ಎಲ್ಲಿ ಹೋದರೂ ಮೊದಲು ಕರ್ನಾಟಕದವನು. ಕನ್ನಡದ ಆಸ್ತಿ. ನಂತರ ಇತರ ವಿಚಾರಗಳು ಎಂದು ಹೇಳಿದ್ದಾರೆ. ಈ ಮಾತು ಕೇಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.