ಅಂದು ಹೇಳಿದ ಮಾತು ನಿಜ ಮಾಡಿ ತೋರಿಸಿದ ರಾಕಿ ಭಾಯ್..! ಏನೆಂದು ನೋಡಿ...!

By Infoflick Correspondent

Updated:Saturday, April 16, 2022, 11:21[IST]

ಅಂದು ಹೇಳಿದ ಮಾತು ನಿಜ ಮಾಡಿ ತೋರಿಸಿದ ರಾಕಿ ಭಾಯ್..! ಏನೆಂದು ನೋಡಿ...!

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ ಟು ಮೊನ್ನೆ ಇಡೀ ವಿಶ್ವದಾದ್ಯಂತ ಭರ್ಜರಿಯಾಗಿ ತೆರೆಯ ಮೇಲೆ ಬಂದಿದೆ. ಹೌದು ತೆರೆಗೆ ಬಂದ ಮೊದಲ ದಿನವೇ ಪ್ರೇಕ್ಷಕರು ಹುಚ್ಚೆದ್ದು ಥೇಟರ್ನಲ್ಲಿ ಕುಣಿಯುತ್ತಿರುವ ದೃಶ್ಯಗಳು ಕಣ್ಣಿಗೆ ಕಾಣಿಸುವ ಮೂಲಕ ಕೆಜಿಎಫ್ 2 ಎಷ್ಟು ಅದ್ಭುತವಾಗಿದೆ ಎಂಬುದಾಗಿ ನಿರೂಪಿಸಿದ್ದಾರೆ. ಬಿಡುಗಡೆ ಆದ ಮೊದಲ ದಿನವೇ ದಾಖಲೆ ಕಲೆಕ್ಷನ್ ಮಾಡಿದ್ದು ಎಲ್ಲಾ ರೆಕಾರ್ಡ್ ಅನ್ನು ಮುರಿದಿದೆ ಎನ್ನಬಹುದು. ಹೌದು ಕೆಜಿಎಫ್ ಚಾಪ್ಟರ್ ಟು ಸಿನಿಮಾ ಒಂದು ಅದ್ಭುತವಾದ ಚಿತ್ರ ಆಗಿತ್ತು. ಕೆಜಿಎಫ್ ಚಾಪ್ಟರ್ 1 ವೀಕ್ಷಿಸಿದ ಎಲ್ಲಾ ವೀಕ್ಷಕರು ಕೆಜಿಎಫ್ ಟು ಯಾವಾಗ ಬರುತ್ತದೆ ಎಂದು ತುಂಬಾನೇ ಕಾತುರದಿಂದ ಕಾಯುತ್ತಿದ್ದರು. ಅದಕ್ಕೆ ತಕ್ಕಂತೆ ಎಂಟ್ರಿಕೊಟ್ಟಿದ್ದಾರೆ ರಾಕಿ ಭೈ. ಅವರ ನಿರೀಕ್ಷೆಯನ್ನು ರಾಕಿ ಬಾಯ್ ಹುಸಿ ಮಾಡಿಲ್ಲ ಎಂದು ಹೇಳಬಹುದು.

ಹಾಗೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಚಳಕ ತುಂಬಾ ಅದ್ಭುತವಾಗಿದ್ದು, ಪ್ರಶಾಂತ್ ನೀಲ್ ಅವರೆಂತಹ ಶಕ್ತಿವಂತ ಡೈರೆಕ್ಟರ್ ಎಂದು ಮತ್ತೊಮ್ಮೆ ನಿರೂಪಿತವಾಗಿದೆ. ಇಂಡಿಯಾದಲ್ಲಿ ಮಾತ್ರವಲ್ಲದೆ ಪ್ರಶಾಂತ್ ನೀಲ್ ಅವರ ನಿರ್ದೇಶನಕ್ಕೆ ಇಡಿ ವಿಶ್ವವೇ ಬೆರಗಾಗಿ ಶಭಾಷ್ ಎಂದು ಕೇಕೆ ಹಾಕುತ್ತಿದೆ. ರವಿ ಬಸ್ರುರು ಅವರ ಮ್ಯೂಸಿಕ್, ಭುವನ್ ಗೌಡ ಅವರ ಕ್ಯಾಮೆರಾ ವರ್ಕ್ ಎಲ್ಲಾ ಔಟ್ ಸ್ಟ್ಯಾಂಡಿಂಗ್ ಎಂದು ಹೇಳಬಹುದು. ಪ್ರತಿಯೊಂದು ಸಿನ್ಸ್ ಗೂಸ್ ಬಂಬ್ಸ್. ಹೌದು ಕೆಜಿಎಫ್ ಚಾಪ್ಟರ್ 2 ಚಿತ್ರ ಇಷ್ಟು ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣುತ್ತಿರುವುದರಿಂದ ಎಲ್ಲಾ ಅಭಿಮಾನಿಗಳು ಪದೇ ಪದೇ ಸಿನಿಮಾವನ್ನು ನೋಡುತ್ತಿದ್ದಾರೆ. ನಟ ಯಶ್ ಅವರು ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮಾಡುತ್ತಿದ್ದಾಗ ಕೆಲವೊಂದಿಷ್ಟು ವಿಚಾರಗಳನ್ನು ಬಹಿರಂಗವಾಗಿ ಎಲ್ಲರ ಎದುರು ಹಂಚಿಕೊಂಡಿದ್ದರು.

ವೇದಿಕೆ ಮೇಲೆ ಅಂದು ಯಶ್ ಮಾತನಾಡಿ ಒಂದು ಮಾತನ್ನ ಕೊಟ್ಟಿದ್ದರು. ಬೇರೆಯವರು ಕನ್ನಡ ಚಿತ್ರರಂಗವನ್ನು ತುಂಬಾ ಸಣ್ಣದಾಗಿ ನೋಡುತ್ತಿದ್ದಾರೆ. ಕನ್ನಡ ಚಿತ್ರ, ಕನ್ನಡ ಚಿತ್ರರಂಗ ಎಂದ ತಕ್ಷಣವೇ ಬೆರಯವರು ಏನೋ ಒಂದು ತರಹವಾಗಿ ಮಾತನಾಡುತ್ತಿದ್ದರು, ಅವರಿಗೆಲ್ಲ ಇದೀಗ ಯಶ್ ಉತ್ತರ ನೀಡಿದ್ದಾರೆ.  

ಅಂದು ಹೇಳಿದ ಹಾಗೆ ನಟ ಯಶ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಬೇರೆ ಲೆವೆಲ್ ಗೆ ಹೋಗುತ್ತದೆ ಎಂದಿದ್ದರು. ಹಾಗೆ ಅದಕ್ಕೆ ತಕ್ಕಂತೆ ನಾವು ಸಿನಿಮಾವನ್ನು ಮಾಡುತ್ತೇವೆ ಎನ್ನುವ ಮಾತನ್ನು ಕೂಡ ಕೊಟ್ಟಿದ್ದರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಪ್ರತಿಯೊಂದು ರಾಜ್ಯಕ್ಕೆ ಇತ್ತೀಚಿಗೆ ನಟ ಯಶ್ ಹೋದಾಗ ಅಲ್ಲಿಯ ಜನ ಸಾಗರ ನೋಡಬೇಕು, ನಮ್ಮ ಕನ್ನಡ ಚಿತ್ರರಂಗದ ಗತ್ತು ಏನೆಂದು ಎಲ್ಲರಿಗೂ ಈಗ ನಿರೂಪಿತವಾಗಿದೆ. ಈ ವಿಡಿಯೋ ನೋಡಿ ಹಾಗೆ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಕೆಜಿಎಫ್ ಚಿತ್ರವನ್ನು ಈಗಾಗಲೇ ನೀವು ನೋಡಿದ್ದರೆ ಸಿನಿಮಾ ಹೇಗಿದೆ ಎಂದು ಕಮೆಂಟ್ ಮಾಡಿ ಧನ್ಯವಾದಗಳು...