ಅದೊಂದು ಕಾರಣಕ್ಕೆ ಯಶ್ ಅಪ್ಪ ಯಶ್ ಅವರನ್ನ ಹೊಡೆದಿದ್ದರಂತೆ..! ಅಸಲಿಗೆ ಅದೇನು ಗೊತ್ತಾ..?

By Infoflick Correspondent

Updated:Sunday, April 17, 2022, 11:33[IST]

ಅದೊಂದು ಕಾರಣಕ್ಕೆ ಯಶ್ ಅಪ್ಪ ಯಶ್ ಅವರನ್ನ ಹೊಡೆದಿದ್ದರಂತೆ..! ಅಸಲಿಗೆ ಅದೇನು ಗೊತ್ತಾ..?

ಸ್ಯಾಂಡಲ್ ವುಡ್ ನ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ ಟು ಸಿನಿಮಾ ನಮ್ಮ ರಾಜ್ಯಾದ್ಯಂತ ಸೇರಿ ಹೊರದೇಶದಲ್ಲೂ ಬಿಡುಗಡೆ ಆಗುವ ಮೂಲಕ ಇಡೀ ವಿಶ್ವವೇ ಬೆರಗಾಗುವಂತೆ ಸಿನಿಮಾ ಮೂಡಿಬಂದಿದೆ. ಹೌದು ರಾಕಿ ಬಾಯ್ ಅಭಿನಯ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಜೊತೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ ಎಂದು ಹೇಳಬಹುದು. ಕೆಜಿಎಫ್ 2 ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಚಳಕ ಇದರಲ್ಲಿ ಹೆಚ್ಚು ಎದ್ದು ಕಾಣುತ್ತಿದೆ. ಹಾಗೆ ಸಿನಿಮಾದ ಪ್ರತಿಯೊಂದು ದೃಶ್ಯ ನೋಡುತ್ತಿದ್ದರೆ ಎಲ್ಲರಿಗೂ ಥಿಯೇಟರ್ನಲ್ಲಿ ಗೂಸ್ ಬಂಬ್ಸ್ ಎನ್ನಬಹುದು. ಯಶ್ ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕೆಜಿಎಫ್ ಮುಖಾಂತರ ಇಡೀ ಪ್ರಪಂಚಕ್ಕೆ ಯಶ್ ಯಾರೆಂಬುದು ಗೊತ್ತಾಗಿದ್ದು ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ..

ಹೌದು ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಹಾಗೆ ಯಶ್ ಅವರ ನಿಜಜೀವನದ ಕೆಲವೊಂದಿಷ್ಟು ವಿಚಾರಗಳಿಗೆ ಬರುವುದಾದರೆ, ಯಶ್ ಅವರ ಅಪ್ಪ ಯಶ್ ಅವರನ್ನ ಕೆಲ ವಿಚಾರಗಳಿಗೆ ಸಣ್ಣ ವಯಸ್ಸಿನಲ್ಲಿದ್ದಾಗಲೆ ಹೊಡೆದಿದ್ದರಂತೆ. ಜೊತೆಗೆ ತುಂಬಾ ಸ್ಟ್ರಿಕ್ಟ್ ಕೂಡ ಆಗಿರುತ್ತಿದ್ದರಂತೆ. ಅದಕ್ಕೆ ಕಾರಣ ಇದೀಗ ಅವರ ತಂದೆಯೇ ತಿಳಿಸಿದ್ದು, ನಾನು ಅಷ್ಟು ಸ್ಟ್ರಿಕ್ಟ್ ಆಗಿರಲು ಮತ್ತು ಅವನನ್ನ ಕೆಲವು ವಿಚಾರಗಳಿಗೆ ಹೊಡೆಯಲು ಕಾರಣವೇನೆಂದರೆ, ನಾನು ಒಬ್ಬ ಡ್ರೈವರ್ ಅವನು ಸಿನಿಮಾ ಅದು ಇದು ಎಂದು ಹೆಚ್ಚು ಹುಡುಗರ ಜೊತೆ ಹೊರಗಡೆ ಹೋಗುತ್ತಿದ್ದ, ಏನಾದರೂ ಹೆಚ್ಚು ಕಮ್ಮಿ ಮಾಡಿ ತಪ್ಪು ಮಾಡಿಬಿಡುತ್ತಾನೋ, ಬೇರೆ ಏನಾದರೂ ಆಗುತ್ತದೆಯೋ ಎನ್ನುವ ಭಯ ನನ್ನಲ್ಲಿತ್ತು. 

ಜೊತೆಗೆ ನಾನೊಬ್ಬ ಡ್ರೈವರ್, ನಾಳೆ  ಏನಾದರೂ ನನಗೆ ಆದರೆ, ಇವನು ಸರಿಯಾದ ರೀತಿ ಬೆಳೆಯದೇ ಹೋದರೆ, ನನ್ನ ಕುಟುಂಬವ ಯಾರೂ ನೋಡಿಕೊಳ್ಳಬೇಕು, ಎನ್ನುವ ಒಂದು ಕಾಳಜಿಗೆ ಹಾಗೆ ಮಾಡಿದ್ದೆ. ಅದಕ್ಕೆ ಮಾತ್ರವೇ ನಾನು ತುಂಬಾ ಸ್ಟ್ರಿಕ್ಟ್ ಇದ್ದೆ ಎಂದಿದ್ದಾರೆ, ಅದು ಸಣ್ಣವಯಸ್ಸಿನಲ್ಲಿಯೇ ಮಾತ್ರ ಎಂದಿದ್ದಾರೆ. ಆದರೆ ಅವನು ಕಷ್ಟ ಪಟ್ಟು ಸಿನಿಮಾರಂಗದಲ್ಲಿ ಇಂದು ಬೆಳೆದಿದ್ದಾನೆ, ಕನ್ನಡಿಗರು ಅವನ ಪ್ರತಿಭೆಯನ್ನು ಗುರುತಿಸಿ ಪ್ರೀತಿಯನ್ನ ನೀಡಿ ಬೆಳೆಸಿದ್ದಿರಿ ಎಂದು ಈಗ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...