ಪತ್ನಿ ರಾಧಿಕಾ ಪಂಡಿತ್ ಬಗ್ಗೆ ರಾಕಿಂಗ್ ಸ್ಟಾರ್ ಏನ್ ಹೇಳಿದ್ದಾರೆ ಗೊತ್ತಾ..?

By Infoflick Correspondent

Updated:Wednesday, May 4, 2022, 19:14[IST]

ಪತ್ನಿ ರಾಧಿಕಾ ಪಂಡಿತ್ ಬಗ್ಗೆ ರಾಕಿಂಗ್ ಸ್ಟಾರ್ ಏನ್ ಹೇಳಿದ್ದಾರೆ ಗೊತ್ತಾ..?

ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಸೆಲೆಬ್ರಿಟಿ ಜೋಡಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇವರಿಬ್ಬರು ಒಟ್ಟಿಗೆ ಕಿರುತೆರೆಗೆ ಎಂಟ್ರಿ ಕೊಟ್ಟ ಜೋಡಿಯೂ ಹೌದು. ಅಲ್ಲಿಂದ ಸಿನಿರಂಗಕ್ಕೂ ಕಾಲಿಟ್ಟು ಇಬ್ಬರೂ ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆದವು. ಹೀಗೆ ಇಬ್ಬರ ಪರಿಚಯ ಸ್ನೇಹದಿಂದ ಪ್ರೀತಿಗೆ ತಿರುಗಿ ಮನೆಯವರೆಲ್ಲರನ್ನು ಒಪ್ಪಿಸಿ 2016ರಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಯಾದರು. ರಾಧಿಕಾ ಪಂಡಿತ್ ಮನೆ, ಮಕ್ಕಳು ಅಂತ ತುಂಬಾ ಬ್ಯುಸಿಯಾಗಿ ಬಿಟ್ಟಿದ್ದಾರೆ. ಸಿನಿಮಾರಂಗದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸದಾ ಸಕ್ರಿಯರಾಗಿರುತ್ತಾರೆ.   

ಸದಾ ಪಾಸಿಟಿವ್ ವಿಚಾರಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿರುವ ರಾಧಿಕಾ ಪಂಡಿತ್, ಇದುವರೆಗೂ ಮತ್ತೆ ಸಿನಿರಂಗಕ್ಕೆ ಕಮ್ ಬ್ಯಾಕ್ ಮಾಡುವ ಬಗ್ಗೆ ಮಾತ್ರ ಎಲ್ಲೂ ಆಸೆ ವ್ಯಕ್ತಪಡಿಸಿಲ್ಲ. ಕಳೆದ ವರ್ಷ ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಕನಸಿನ ಮನೆಯನ್ನು ಖರೀದಿಸಿದರು. ಬೆಂಗಳೂರಿನ ವಿಂಡ್ಸನ್ ಮ್ಯಾನರ್ ಬಳಿ ಇರುವ ಪ್ರಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಯಶ್ ಹೊಸ ಮನೆಯಲ್ಲೇ ವಾಸವಿದ್ದಾರೆ. ತಮ್ಮ ಮಕ್ಕಳಾದ ಐರಾ ಹಾಗೂ ಯಥರ್ವ್ ಆಟ, ಪಾಠ, ತುಂಟಾಟಗಳ ಬಗ್ಗೆ ವೀಡಿಯೋ, ಫೋಟೋಗಳನ್ನು ರಾಧಿಕಾ ಪಂಡಿತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. 

ಇನ್ನು ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿ ಇರುತ್ತಾರೆ. ಆದರೆ, ಯಶ್ ಹಾಗಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಇಣುಕಿ ನೋಡುತ್ತಿರುತ್ತಾರೆ. ಇದೀಗ ಯಶ್ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ತಮ್ಮ ಪತ್ನಿ ರಾಧಿಕಾ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ರಾಧಿಕಾ ಅವರ ಜೊತೆಗಿನ ಫೋಟೋ ಅಪ್ ಲೋಡ್ ಮಾಡಿರುವ ಯಶ್ ಅವರು, ಎಲ್ಲರೂ ಹೇಳುತ್ತಾರೆ ಜಗತ್ತು ಸುಂದರವಾಗಿದೆ ಎಂದು. ಅದು ಸತ್ಯ ಎಂದು ಒಪ್ಪುತ್ತೇನೆ. ಆದರೆ ನನ್ನ ಜೊತೆಗೆ ನೀನಿರುವವರೆಗೂ. ನನ್ನ ಜಗತ್ತನ್ನು ಸುಂದರವಾಗಿಸಿದ್ದಕ್ಕೆ ಧನ್ಯವಾದಗಳು. ಎಂದೆಂದೂ ನಿನ್ನನ್ನು ಪ್ರೀತಿಸುವೆ ಎಂದು ಬರೆದುಕೊಂಡಿದ್ದಾರೆ. 

ಯಶ ಬರೆದಿರುವ ಸಾಲುಗಳು ಇಲ್ಲಿವೆ ನೋಡಿ.. They say world is beautiful… I totally agree but only when you are next to me  thank you for making my world beautiful… love you forever and ever