ನಾವೆಲ್ಲರೂ ಕನ್ನಡ ಚಿತ್ರರಂಗವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಸೋಣ ಎಂದಿದ್ದ ಯಶ್..! ಸುದೀಪ್ ಮಾಡಿದ್ದೇನು

By Infoflick Correspondent

Updated:Thursday, April 28, 2022, 16:20[IST]

ನಾವೆಲ್ಲರೂ ಕನ್ನಡ ಚಿತ್ರರಂಗವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಸೋಣ ಎಂದಿದ್ದ ಯಶ್..! ಸುದೀಪ್ ಮಾಡಿದ್ದೇನು

ಕನ್ನಡ ಸಿನಿಮಾರಂಗದ ಸಾಕಷ್ಟು ನಟ-ನಟಿಯರು ಈಗ ದೊಡ್ಡ ಮಟ್ಟದಲ್ಲಿ ಕನ್ನಡ ಚಿತ್ರಗಳನ್ನು ಬೆಳೆಸಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಅವರದೇ ಆದ ಅಭಿಮಾನದ ಅಪಾರ ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ. ಹೌದು ಬರಿ ಕಲೆಯ ಮೂಲಕವೆ ಇಡೀ ಕರ್ನಾಟಕ ಮನೆಮಾತಾಗಿರುವ ಸಾಕಷ್ಟು ನಟ-ನಟಿಯರು ಕೂಡ ತುಂಬಾ ಚೆನ್ನಾಗಿಯೇ ಅನ್ಯೋನ್ಯತೆಯಿಂದ ಯಾವ ವೈಮನಸ್ಸು ಇಲ್ಲದೇನೆ ಜೊತೆಗೆ ಇದ್ದಾರೆ. ಆದರೆ ಕೆಲವು ಕಿಡಗೇಡಿಗಳು ಅವರವರ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹಂಚುತ್ತ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಉದಾಹರಣೆಗೆ ಯಶ್ ಅಭಿಮಾನಿಗಳು ಸುದೀಪ್ ಅಭಿಮಾನಿಗಳು ನಟ ದರ್ಶನ್ ಅಭಿಮಾನಿಗಳು ಶಿವರಾಜಕುಮಾರ್ ಹೀಗೆ ಸಾಕಷ್ಟು ನಟರ ಅಭಿಮಾನಿ ಬಳಗದವರು ಒಂದು ವಿಚಾರವನ್ನು ಸದಾ ಗಮನದಲ್ಲಿ ಇಟ್ಟುಕೊಳ್ಳಬೇಕು.

ನಾವಿರುವುದು ಕರ್ನಾಟಕದಲ್ಲಿ ಹಾಗೆ ನಾವು ಹುಟ್ಟಿರುವುದು ಕರ್ನಾಟಕದಲ್ಲಿ, ಅದಕ್ಕೆ ಹೆಮ್ಮೆಪಡಬೇಕು. ನಮ್ಮ ಕನ್ನಡದ ವಿಷಯಕ್ಕೆ ಹಾಗೂ ಕನ್ನಡದ ಯಾವ ವಿಚಾರಕ್ಕೆ ಆದರೂ ಕೂಡ ಹೆಮ್ಮೆಯಿಂದ ಮಾತನಾಡಬೇಕು. ಖುಷಿಪಡಬೇಕು. ಅದನ್ನು ಬಿಟ್ಟು ಕೆಲ ಅಂದ ಅಭಿಮಾನಿ ಬಳಗದವರು ನಮ್ಮ ಹೀರೋ ದೊಡ್ಡವ, ನಿಮ್ಮ ಹೀರೋ ಚಿಕ್ಕವ, ನಮ್ಮ ಹೀರೋ ಸಾಧನೆ ಮಾಡಿದ್ದಾನೆ. ಹೀಗೆ ಬೇರೆ ನಟರ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತ ಸುಮ್ಮನೆ ಕಿತ್ತಾಡುತ್ತಾರೆ. ನಮ್ಮ ನಟರು ಎಲ್ಲರೂ ಒಂದೇ. ಕನ್ನಡ ಸಿನಿಮಾರಂಗವನ್ನು ಬೆಳೆಸುತ್ತಿದ್ದಾರೆ. ಅದು ಹೆಮ್ಮೆಯ ವಿಷಯ ಎಂಬುದಾಗಿ ಅವರವರ ಅಭಿಮಾನಿ ಬಳಗದವ್ರು ಅರ್ಥೈಸಿಕೊಳ್ಳಬೇಕು.   

 

 

ಇತ್ತೀಚಿಗೆ ನಟ ಯಶ್ ಅವರ ಮತ್ತು ಸುದೀಪ್ ಅವರ ಅಭಿಮಾನಿಗಳ ನಡುವೆ ಒಂದು ಚರ್ಚೆಯಾಗಿತ್ತು. ನಟ ಸುದೀಪ್ ಅವರಿಗೆ ಕೆಜಿಎಫ್ ಸಿನಿಮಾ ಬಗ್ಗೆ ಕೇಳಿದಾಗ ಅವರು ನೀಡಿದ ಪ್ರತಿಕ್ರಿಯೆ ಚೆನ್ನಾಗಿರಲಿಲ್ಲ ಎಂದು ಅವರ ವಿಡಿಯೋವನ್ನು ಹೆಚ್ಚು ವೈರಲ್ ಮಾಡಿದ್ದರು. ತದನಂತರ ಸತ್ಯ ತಿಳಿದು ಎಲ್ಲರೂ ಸುಮ್ಮನಾದರು. ಹೌದು ಈ ಹಿಂದೆ ಯಶ್ ಅವರು ಒಂದು ವೇದಿಕೆಯಲ್ಲಿ ಆಡಿದ ಮಾತುಗಳನ್ನು ಕೇಳಿದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಈ ಚಿತ್ರರಂಗ ಹಾಗೂ ಸುದೀಪ್ ಹಾಗೂ ಹಿರಿಯ ನಟರ ಬಗ್ಗೆ ಯಶ್ ಹೇಳಿದ್ದು ಕೇಳಿ. ಎಲ್ಲಾ ಅಭಿಮಾನಿಗಳು ತಪ್ಪದೇ ಕೇಳಿ. ವಿಡಿಯೋ ನೋಡಿ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.. ( video credit : rx studio kannada )