Yash : ಹೊಸ ಪ್ರಯಾಣದ ವಿಡಿಯೋ ಹರಿಬಿಟ್ಟ ಯಶ್..! ಮಕ್ಕಳ ಜೊತೆ ಮಕ್ಕಳಾದ ಯಶ್ ದಂಪತಿ..

By Infoflick Correspondent

Updated:Sunday, June 19, 2022, 15:42[IST]

Yash :  ಹೊಸ ಪ್ರಯಾಣದ ವಿಡಿಯೋ ಹರಿಬಿಟ್ಟ ಯಶ್..! ಮಕ್ಕಳ ಜೊತೆ ಮಕ್ಕಳಾದ ಯಶ್ ದಂಪತಿ..

ಕೆಜಿಎಫ್ ಸಿನಿಮಾ ಮೂಲಕ ವಿಶ್ವಮಟ್ಟಕ್ಕೆ ತಲುಪಿದ ಯಶ್ ಅವರು ಕೆಜಿಎಫ್ ಸಿನಿಮಾ ಮೂಲಕ ಅಭಿಮಾನಿ ಬಳಗವ ಮತ್ತಷ್ಟು ಹೆಚ್ಚು ಮಾಡಿಕೊಂಡು ಇದೀಗ ತುಂಬಾನೇ ಸುದ್ದಿ ಆಗುತ್ತಿದ್ದಾರೆ. ಏನೇ ಮಾಡಿದರೂ ಯಶ್ ಹೆಚ್ಚು ವೈರಲ್ ಆಗುತ್ತಾರೆ ಎನ್ನಬಹುದು. ನಟ ಯಶ್ ಅಭಿನಯದ ನಮ್ಮ ಹೆಮ್ಮೆಯ ಕೆಜಿಎಫ್ ಭಾಗ 2 ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿತು. ಜೊತೆಗೆ ನಟ ಯಶ್ ಅವರು ಕೂಡ ನ್ಯಾಷನಲ್ ಸ್ಟಾರ್ ಆಗಿದ್ದು ಹೊರದೇಶದಲ್ಲಯೂ ಸಹ ಯಶ್ ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಯಶ್ ಅವರು ಕೆಜಿಎಫ್ ಸಿನಿಮಾ ಸಕ್ಸಸ್ ಬಳಿಕ ಗೋವಾದಲ್ಲಿ ಕಾಣಿಸಿದ್ದರು...   

ಆನಂತರ ಚಿತ್ರತಂಡದ ಜೊತೆ ಸಕ್ಸಸ್ ಕೇಕ್ ಸಹ ಕತ್ತರಿಸಿ ಇದು ಇನ್ನೂ ಆರಂಭ ಎಂದು ಖುಷಿ ವ್ಯಕ್ತಪಡಿಸಿದ್ದರು. ಹೌದು ಇದೀಗ ಅವರ ಕುಟುಂಬಕ್ಕೆ ಹೆಚ್ಚು ಸಮಯವನ್ನೇ ನೀಡುತ್ತಿರುವ ಯಶ್ ಇತ್ತೀಚೆಗಷ್ಟೇ ತಮ್ಮ ಹೆಂಡತಿ ಮಕ್ಕಳ ಜೊತೆ ಪ್ರಯಾಣ ನಡೆಸಿದ್ದಾರೆ. ಯಶ್ ಅವರ ತಂಗಿ ಕೂಡ ಜೊತೆಗೆ ರಾಧಿಕಾ ಪಂಡಿತ್ ಅವರ ಅಣ್ಣ ಕೂಡ ಯಶ್ ಕೈಗೊಂಡ ಈ ಟ್ರಿಪ್ನಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಹೌದು ಕನಕಪುರ ರಸ್ತೆಯಲ್ಲಿ ಬರುವ ಅನಿಮಲ್ಸ್ ಪಾರ್ಕ್ ಇದು ತುಂಬಾನೇ ಖ್ಯಾತಿ ಪಡೆದಿದೆ. ಈ ಪಾರ್ಕ್ ಅನ್ನು ಅನಿಲ್ ಎಂಬವರು ನಡೆಸುತ್ತಿದ್ದಾರೆ. ಯಶ್ ಅವರು ತಮ್ಮ ಮತ್ತು ರಾಧಿಕಾ ಪಂಡಿತ್ ಜೊತೆಗೆ ಅವರ ಮಕ್ಕಳನ್ನು ಸಹ ಅನಿಮಲ್ಸ್ ಪಾರ್ಕ್ ನ ವಿಹಾರದಲ್ಲಿ ತೊಡಗಿಸಿದ್ದಾರೆ.

ಅಲ್ಲಿಯ ಪ್ರಾಣಿ-ಪಕ್ಷಿಗಳ ಜೊತೆ ಪ್ರೀತಿಯಿಂದ ಸಮಯ ಕಳೆದಿದ್ದಾರೆ. ಅದರ ವಿಡೀಯೋ ಬಳಿಕ ಹಂಚಿಕೊಂಡಿದ್ದಾರೆ ನಟ ಯಶ್. ಹೌದು ಅದೇ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಯಶ್ ಅವರು ಅನಿಲ್ ನಡೆಸಿಕೊಂಡು ಬರುತ್ತಿರುವ ಈ ಅನಿಮಲ್ಸ್ ಪಾರ್ಕ್ ಬಗ್ಗೆ ಮತ್ತು ಅನಿಲ್ ಅವರ ಬಗ್ಗೆ ಕೆಲವೊಂದಿಷ್ಟು ಸಾಲುಗಳನ್ನು ಬರೆದುಕೊಂಡು ಅವರ ಇಷ್ಟದ ಕೆಲಸವನ್ನು ಮತ್ತು ಅವರ ಬಗ್ಗೆ ಇರುವ ಹೆಮ್ಮೆಯನ್ನು ಶ್ಲಾಘಿಸಿದ್ದಾರೆ. ಇಲ್ಲಿದೆ ನೋಡಿ ವಿಡೀಯೋ. ನೋಡಿ ಶೇರ್ ಮಾಡಿ....

 
 
 
 
 
 
 
 
 
 
 
 
 
 
 

A post shared by Yash (@thenameisyash)