Yash : ಕೆಜಿಎಫ್ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹೇಗೆಲ್ಲಾ ವರ್ಕೌಟ್ ಮಾಡಿದ್ದಾರೆ ನೋಡಿ..
Updated:Sunday, May 29, 2022, 09:52[IST]

ರಾಕಿಂಗ್ ಸ್ಟಾರ್ ಯಶ್ ಈಗ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕಿರುತೆರೆ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಾಧಿಕಾ ಪಂಡಿತ್ ಕೆಲವೇ ಸಮಯದಲ್ಲಿ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದರು. ಎಷ್ಟೇ ಬ್ಯುಸಿ ಇದ್ದರೂ ಕೂಡ ಯಶ್ ಕುಟುಂಬಕ್ಕೆ ಸಮಯ ಕೊಡುವುದನ್ನು ಮಾತ್ರ ಮರೆಯುವುದಿಲ್ಲ. ಹೆಂಡತಿ, ಮಕ್ಕಳ ಜೊತೆಗೆ ಸಮಯ ಕನೆಯುತ್ತಾರೆ. ಆಗಾಗ ಸಂಬಂಧಿಕರ ಕಾರ್ಯಕ್ರಮಗಳಿಗೂ ತೆರಳುತ್ತಾರೆ. ಕುಟುಂಬ ಸಮೇತ ಪ್ರವಾಸ ಕೈಗೊಳ್ಳುತ್ತಾರೆ. ಏನೇ ಆದರೂ ಮನೆಗೆ ಮೊದಲ ಆದ್ಯತೆಯನ್ನು ಕೊಡುತ್ತಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಸಿನಿಮಾ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಚಿತ್ರ ನಿತ್ಯ ದಾಖಲೆಗಳನ್ನು ಮಾಡುತ್ತಲೇ ಇದೆ. ಇದುವರೆಗೂ ಕನ್ನಡ ಚಿತ್ರ ಮಾಡಿರದ ದಾಖಲೆಗಳನ್ನು ಕೆಜಿಎಫ್-2 ಸಿನಿಮಾ ಮಾಡಿದೆ. ಅದಾಗಲೇ ಬರೋಬ್ಬರಿ ಒಂದು ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ವಿಶ್ವದಾದ್ಯಂತ 6 ವಾರಗಳ ಕಾಲದ ಒಟ್ಟು ಕಲೆಕ್ಷನ್ 1230.37 ಗಳಿಸಿದೆ. ಈ ಚಿತ್ರ ಹೀಗೆ ಓಡುತ್ತಿದ್ದರೆ, ಇನ್ನೂ ಹೆಚ್ಚು ಹೆಚ್ಚು ಕಲೆಕ್ಷನ್ ಮಾಡುವುದರಲ್ಲಿ ಅನುಮಾನವೇ ಇಲ್ಲ.
ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರದಲ್ಲಿ ನಟಿಸಲು ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ತಿಂಗಳಾನುಗಟ್ಟಲೆ ಕಾದು ಚಿತ್ರಕ್ಕೆ ಬೇಕಾದಂತೆ ಗಡ್ಡ ಬಿಟ್ಟಿದ್ದಾರೆ. ಚಿತ್ರಕ್ಕೆ ಬೇಕಾದಂತೆಯೇ ತಮ್ಮ ಪರ್ಸನಾಲಿಟಿಯನ್ನೂ ಬದಲಾಯಿಸಿಕೊಂಡಿದ್ದಾರೆ. ನಿತ್ಯ ಕಸರತ್ತು ಮಾಡಿ ಬಾಡಿ ಬಿಲ್ಡ್ ಮಾಡಿದ್ದಾರೆ. ಇದೀಗ ಕಜಿಎಫ್ ಚಿತ್ರಕ್ಕಾಗಿ ಯಶ್ ಅವರು ಮಾಡಿದ ವರ್ಕೌಟ್ ನ ವೀಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಯಶ್ ಅವರು ವೈಟ್ ಲಿಫ್ಟ್ ಮಾಡಿರುವ ವೀಡಿಯೋ ಹರಿದಾಡುತ್ತಿದೆ.
ನಿಮ್ಮ ಅಭಿಪ್ರಾಯ ತಿಳಿಸಿ. ಇಷ್ಟವಾದಲ್ಲಿ ಶೇರ್ ಕೂಡ ಮಾಡಿ ಧನ್ಯವಾದಗಳು.. ( video credit : tejpal chavda )