Darshan : ದರ್ಶನ್ ಮಾಡಿದ ಸಹಾಯ ನೆನೆದು ಭಾವುಕರಾದ ನಟ..! ಹೇಳಿದ್ದು ಕೇಳಿ ಕಣ್ಣೀರು ಬರುತ್ತೆ

By Infoflick Correspondent

Updated:Sunday, May 1, 2022, 11:45[IST]

Darshan :  ದರ್ಶನ್ ಮಾಡಿದ ಸಹಾಯ ನೆನೆದು ಭಾವುಕರಾದ ನಟ..! ಹೇಳಿದ್ದು ಕೇಳಿ ಕಣ್ಣೀರು ಬರುತ್ತೆ

ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ಅವರು ತುಂಬಾ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದಾರೆ. ಅವರಿಗೆ ಇರುವ ಮಾಸ್ ಫಾಲೋಯಿಂಗ್ ಬೇರೆ ನಟರಿಗೆ ಕನ್ನಡದಲ್ಲಿ ಇಲ್ಲ ಎಂದು ಹೇಳಬಹುದು. ಅವರ ಒಳ್ಳೆಯತನ ಅವರನ್ನ ಹೆಚ್ಚು ಬಾರಿ ಕೊಂಡಾಡುವಂತೆ ಮಾಡಿದೆ. ಇತ್ತೀಚಿಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಹ ದರ್ಶನ್ ಅವ್ರು ಮಾಡಿದ್ದ ಸಹಾಯ ನೆನೆದು ಧನ್ಯವಾದ ತಿಳಿಸಿದ್ದರು. ಹಾಗೆ  ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ದರ್ಶನ್ ಅವರನ್ನು ಕರೆಯುತ್ತಾರೆ. ಹೌದು ಕೇವಲ ಅಭಿಮಾನಿಗಳು ಮಾತ್ರ ನಟ ದರ್ಶನ್ ಅವರನ್ನು ಇಷ್ಟು ಪ್ರೀತಿಯಿಂದ ನೋಡುವುದಲ್ಲದೆ, ಕನ್ನಡ ಸಿನಿರಂಗದ ಯುವನಾಯಕ ನಟರು ನಟಿಯರು,, ಹಾಗೂ ಯುವ ಕಲಾವಿದರು ಎಲ್ಲರೂ ಕೂಡ ದರ್ಶನ್ ಅವರನ್ನು ಹೆಚ್ಚು ಪ್ರೀತಿ ಮಾಡುತ್ತಾರೆ. (video credit : kannada pichhar )

ನಟ ದರ್ಶನ್ ಅವರು ಸಾಕಷ್ಟು ನಟರಿಗೆ ಪ್ರೋತ್ಸಾಹ ನೀಡಿದ್ದಾರೆ. ಸಿನಿಮಾರಂಗದಲ್ಲಿ ಕಷ್ಟಪಟ್ಟು ಬೆಳೆಯುವ ವೇಳೆ ಅವರ ಕೈಲಾದ ಸಹಾಯ ಮಾಡಿ ಮೇಲೆತ್ತಿದ್ದಾರೆ ಎಂದು ಹೇಳಬಹುದು. ಅಂತಹ ಹೆಚ್ಚು ನಿದರ್ಶನಗಳನ್ನು ನೋಡಿಯೇ ಅವರ ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ದರ್ಶನ್ ಅವರನ್ನು ಕರೆಯುವುದುಂಟು.  ದರ್ಶನ್ ಅವರ ಜೊತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ ನಟ ಯಶಸ್ ಸೂರ್ಯ ಕೂಡ ಮಾಧ್ಯಮದ ಮುಂದೆ ಈಗ  ಮಾತನಾಡಿದ್ದು ಅವರ ಹೊಸ ಸಿನಿಮಾವಾದ ಗರಡಿ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಅವರ ಹತ್ತು ವರ್ಷದ ಹಿಂದೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಅದು ಆಗ ಆಗಿರಲಿಲ್ಲವಂತೆ.  

ಹೌದು ನಟ ಯಶಸ್ ಸೂರ್ಯ ಅವರು ಹೇಳುವ ಹಾಗೆ, ಅಂದು ಸಿನಿಮಾ ಬೇಡವೇ ಬೇಡ ಎನ್ನುವ ಮಟ್ಟಕ್ಕೆ ನಾನು ಬಂದುಬಿಟ್ಟಿದ್ದೆ, ಏನು ಆಗುತ್ತಿರಲಿಲ್ಲ ಎನ್ನುವ ಸಮಯಕ್ಕೆ ನನ್ನ ಕೈ ಹಿಡಿದಿದ್ದು ಮಾತ್ರ ದರ್ಶನ್ ಅವರು. ಡಿ ಬಾಸ್ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. ಥ್ಯಾಂಕ್ಸ್ ಹೇಳಿದ್ರೆ ಕಡಿಮೆಯಾಗುತ್ತದೆ ಎಂದು ನಟ ಯಶಸ್ ಅವರು ಭಾವುಕರಾಗಿದ್ದಾರೆ. ಅಸಲಿಗೆ ಗರಡಿ ಸಿನಿಮಾದ ಬಗ್ಗೆ ಮಾತನಾಡಿದ ನಟ, ಗರಡಿ ಸಿನಿಮಾದ ಕುರಿತು, ಹಾಗೇನೇ ನಿರ್ದೇಶಕರ ಕುರಿತು ಕಲಾವಿದರ ಕುರಿತು ಹಾಗೂ ದರ್ಶನ್ ಬಗ್ಗೆ ಯಶಸ್ ಅವರು ಹೇಳಿದ್ದು ಏನು ಗೊತ್ತಾ.? ಲೇಖನದ ಕೊನೆಯಲ್ಲಿರುವ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. ಹಾಗೆ ವಿಡಿಯೋವನ್ನು ತಪ್ಪದೇ ಶೇರ್ ಮಾಡಿ ಧನ್ಯವಾದಗಳು...