ಅರ್ಧಕ್ಕೆ ಮುಕ್ತಾಯಗೊಂಡಿತು ಟಾಪ್ ರೇಟಿಂಗ್ ನಲ್ಲಿರೋ ಧಾರಾವಾಹಿ: ಅದಕ್ಕೆ ಕಾರಣ ಏನ್ ಗೊತ್ತಾ..?

By Infoflick Correspondent

Updated:Sunday, April 24, 2022, 09:24[IST]

ಅರ್ಧಕ್ಕೆ ಮುಕ್ತಾಯಗೊಂಡಿತು ಟಾಪ್ ರೇಟಿಂಗ್ ನಲ್ಲಿರೋ ಧಾರಾವಾಹಿ: ಅದಕ್ಕೆ ಕಾರಣ ಏನ್ ಗೊತ್ತಾ..?

ಕಳೆದ ಎರಡು ವರ್ಷಗಳಿಂದ ಮಕಾಡೆ ಮಲಗಿದ್ದ ಕಲರ್ಸ್ ಕನ್ನಡ ವಾಹಿನಿ, ಈಗ ಹೊಸ ಹೊಸ ಧಾರಾವಾಹಿಗಳನ್ನು ಶುರು ಮಾಡಿ, ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಈಗ ಮತ್ತೆ ಮೊದಲನೇ ಸ್ಥಾನಕ್ಕೆ ಪೈ ಪೋಟಿ ನಡೆಸುತ್ತಿದೆ. ಇದರಲ್ಲಿ ಬರುವ ಎಲ್ಲಾ ಧಾರಾವಾಹಿಗಳ ನಡುವೆ ಸದಾ ಪೈಪೋಟಿಯಿದ್ದು, ಒಂದಕ್ಕಿಂತ ಒಂದು ಸೀರಿಯಲ್ ಗಳು ಚೆನ್ನಾಗಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಹೊಸ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋ ಗಳು ಆರಂಭವಾಗಿದೆ. 

ಹೊಸ ಧಾರಾವಾಹಿಗಳು ಸಾಲು ಸಾಲಾಗಿ ಆರಂಭವಾಗಿದ್ದು, ಅದರಲ್ಲಿ ದೊರೆಸಾನಿ, ಲಕ್ಷಣ, ಕನ್ಯಾಕುಮಾರಿ, ರಾಮಾಚಾರಿ ಧಾರಾವಾಹಿಗಳು ಮೂಡಿ ಬರುತ್ತಿವೆ. ಈ ಧಾರಾವಾಹಿಗಳಲ್ಲೂ ದೊಡ್ಡ ತಾರಾ ಬಳಗವೇ ಇದ್ದು, ಹಿರಿಯ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕಲರ್ಸ್ ಕನ್ನಡದಲ್ಲಿ ಆರಂಭವಾಗಿರುವ ಧಾರಾವಾಹಿಗಳೂ ಜೀ ಕನ್ನಡ ವಾಹಿನಿ ಜೊತೆಗೆ ಪೈಪೋಟಿ ನಡೆಸುತ್ತಿವೆ. ಕಳೆದೆ ನಾಲ್ಕು ತಿಂಗಳಲ್ಲಂತೂ ಸುಮಾರು ಸೀರಿಯಲ್ ಗಳು ಶುರುವಾಗಿವೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಂತೂ ಮತ್ತೆ ನಂಬರ್ ಒನ್ ಸ್ಥಾನಕ್ಕೇರಲು ಮುಂದಾಗಿದೆ. 

ಮೊದಲ ಬಾರಿಗೆ ಲಾಕ್ ಡೌನ್ ಆದಾಗಿನಿಂದ ಕೊಂಚ ಇಳಿಮುಖ ಕಂಡಿದ್ದ ಕಲರ್ಸ್ ಕನ್ನಡ ವಾಹಿನಿ ಈಗ ಹೊಸ ಹೊಸ ಸೀರಿಯಲ್, ರಿಯಾಲಿಟಿ ಶೋ ಗಳ ಮೂಲಕ ಮತ್ತೆ ಮುನ್ನೆಲೆಗೆ ಬರುತ್ತಿದೆ. ರಾಜಾ-ರಾಣಿ, ನಮ್ಮಮ್ಮ ಸೂಪರ್ ಸ್ಟಾರ್ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋಗಳು ಫೇಮಸ್ ಆಗಿವೆ. ಇನ್ನು ದೊರೆಸಾನಿ, ಕನ್ನಡತಿ, ರಾಮಾಚಾರಿ ಧಾರಾವಾಹಿಗಳು ಅದ್ಭುತವಾಗಿ ಮೂಡಿ ಬರುತ್ತಿದೆ. ಆದರೆ ಜೀ ಕನ್ನಡದ ತನ್ನ ಸ್ಥಾನ ಬಿಟ್ಟು ಕೊಡಲು ಇಚ್ಚಿಸದೇ, ಹೊಸ ರಿಯಾಲಿಟಿ ಶೋ ಅನ್ನು ಆರಂಬಿಸಿತ್ತು. 

ಅದೇ ಗೋಲ್ಡನ್ ಗ್ಯಾಂಗ್ ನಂತರ ಸೂಪರ್ ಡೂಪರ್ ಆಗಿ ಈ ಹಿಂದೆ ಹಿಟ್ ಆಗಿದ್ದ ಡ್ರಾಮಾ ಜ್ಯೂನಿಯರ್ಸ್ ಅನ್ನು ಕೂಡ ಪ್ರಾರಂಬಿಸಿತು. ಇದೀಗ ಟಿಆರ್ಪಿ ರೇಟಿಂಗ್ ಬಂದಿದ್ದು, ಮತ್ತೆ ಜೀ ಕನ್ನಡ ತನ್ನ ಸ್ಥಾನಕ್ಕೆ ಚ್ಯುತಿ ಬರದಂತೆ ನೋಡಿಕೊಂಡಿದೆ. ಡ್ರಾಮಾ ಜೂನಿಯರ್ ರಿಯಾಲಿಟಿ ಶೋ ಕಮಾಲ್ ಮಾಡಿದೆ. 7.3 ರೇಟಿಂಗ್ ಪಡೆದು ಮೊದಲ ಸ್ಥಾನವನ್ನು ಡ್ರಾಮಾ ಜ್ಯೂನಿಯರ್ ತನ್ನದಾಗಿಸಿಕೊಂಡಿದೆ. ಹೀಗೆ ಸಾಲು ಸಾಲಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ 9.4, ಗಟ್ಟಿಮೇಳ ಧಾರಾವಾಹಿ 8.2, ಹಿಟ್ಲರ್ ಕಲ್ಯಾಣ 7.8,  5.4 ಸತ್ಯ, 5.3 ಜೊತೆ ಜೊತೆಯಲಿ ಧಾರಾವಾಹಿಗಳು ಮೊದಲ ಐದು ಸ್ಥಾನಗಳನ್ನೂ ಅಲಂಕರಿಸಿವೆ. ಹೀಗಾಗಿ ಮತ್ತೆ ಕಲರ್ಸ್ ಕನ್ನಡ ಹಿಮ್ಮುಖ ಮಾಡಿದೆ.