Amala Paul : ಅಮಲಾ ಪೌಲ್ ಮದುವೆಯಾಗಿ ಎರಡೇ ವರ್ಷಕ್ಕೆ ಡಿವೋರ್ಸ್ ಪಡೆಯಲು ಕಾರಣವೇನು ಗೊತ್ತಾ..?
Updated:Tuesday, June 21, 2022, 14:13[IST]

ಸೌತ್ ಚಿತ್ರರಂಗಕ್ಕೆ ನಟಿ ಅಮಲಾ ಪೌಲ್ 17ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಮೊದ ಮೊದಲು ನಟಿಸಿದ ಸಿನಿಮಾಗಳು ಹಿಟ್ ಆಗಲಿಲ್ಲವಾದರೂ, ಕೆಲ ಸಿನಿಮಾಗಳಲ್ಲಿ ನಟಿಸಿದ ಬಳಿಕ, ಬೋಲ್ಡ್ ಆಗಿ ಆಕ್ಟ್ ಮಾಡಲು ಶುರು ಮಾಡಿದರು. ಅಲ್ಲಿಂದ ಅಮಲಾ ಪೌಲ್ ಅವರ ಅದೃಷ್ಟ ಬದಲಾಯ್ತು. ಅಮಲಾ ಪೌಲ್ ನಟಿಸಿದ ಚಿತ್ರಗಳೆಲ್ಲವೂ ಹಿಟ್ ಆಯ್ತು. ಕಿಚ್ಚ ಸುದೀಪ್ ಅವರ ನಟನೆಯ ಹೆಬ್ಬುಲಿ ಚಿತ್ರದಲ್ಲೂ ಮಿಂಚಿದರು. ಅಮಲಾ ಪೌಲ್ ಹಾಗೂ ಧನುಷ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ನಂತರ ಕೇವಲ 23 ವರ್ಷಕ್ಕೆ ನಿರ್ದೇಶಕ ಎಎಲ್ ವಿಜಯ್ ಅವರನ್ನು ಪ್ರೀತಿಸಿ ಇಬ್ಬರೂ ಮದುವೆಯಾದರು.
ಆದರೆ ವಿಜಯ್ ಅವರು ಮದುವೆಗೂ ಮುನ್ನ ಒಂದಷ್ಟು ಕಂಡಿಷನ್ ಗಳನ್ನು ಹಾಕಿದರು. ಅದರಲ್ಲಿ ಮೊದಲನೇಯ ಕಂಡಿಷನ್ನೇ ಮತ್ತೆ ಸಿನಿಮಾಗಳಲ್ಲಿ ನಟಿಸಬಾರದು ಎಂಬುದಾಗಿತ್ತು. ಇದಕ್ಕೊಪ್ಪಿ ಮದುವೆಯಾದ ಅಮಲಾ ಪೌಲ್ ಅವರು ಚಿತ್ರರಂಗದಿಂದ ಬ್ರೇಕ್ ಪಡೆದಿದ್ದರು. ಮದುವೆಯಾದ ಸ್ವಲ್ಪ ದಿನಗಳ ಬಳಿಕ ಮತ್ತೆ ಅಮಲಾ ಪೌಲ್ ಹಾಗೂ ಧನುಷ್ ಭೇಟಿಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ವಿಜಯ್ ಜೊತೆಗೆ ಮದುವೆಯಾದ ಎರಡೇ ವರ್ಷಕ್ಕೆ ಇಬ್ಬರೂ ವಿಚ್ಛೇಧನ ಪಡೆದರು. ಆಗ ವಿಜಯ್ ಅವರ ತಂದೆ ಮಾತನಾಡಿ, ಧನುಷ್ ರಿಂದ ನಮ್ಮ ಮಗ ಹಾಗೂ ಸೊಸೆ ಬೇರೆಯಾಗಿದ್ದಾರೆ ಎಂಬ ಮಾತನ್ನು ಹೇಳಿದ್ದರು.
ಈ ವೇಳೆ ಅಮಲಾ ಪೌಲ್ ಮಾತನಾಡಿ, ನಮ್ಮ ಮದುವೆ ಮುರಿದು ಬೀಳಲು ಧನುಷ್ ಕಾರಣರಲ್ಲ. ವಯಕ್ತಿಕ ವಿಚಾರದಿಂದ, ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು. ಡಿವೋರ್ಸ್ ಪಡೆದ ಕಾರಣಕ್ಕೆ ಅಮಲಾ ಪೌಲ್ ಅವರನ್ನು ಕಾಲಿವುಡ್ ಬಹಿಷ್ಕರಿಸಿತ್ತು. ಕೆಲ ಚಿತ್ರಗಳಿಂದ ಅಮಲಾ ಪೌಲ್ ಅವರನ್ನು ಕೈ ಬಿಡಲಾಗಿತ್ತು. ಒಂದಷ್ಟು ಬೋಲ್ಡ್ ಫೋಟೋ ಶೂಟ್ ಗಳನ್ನು ಮಾಡಿಸಿ, ಮತ್ತೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ ಭವಿಂಧರ್ ಸಿಂಗ್, ಜೊತೆಗೆ ಹೆಸರು ಕೇಳಿ ಬಂದಿತ್ತು. ಇವರಿಬ್ಬರ ಖಾಸಗಿ ಫೋಟೋಗಳು ಲೀಕ್ ಆಗಿತ್ತು. ಆಗ ಅಮಲಾ ಪೌಲ್ ಮಾತನಾಡಿ ಈ ಫೋಟೋಸ್ ಗಳನ್ನು ಭವಿಂಧರ್ ಸಿಂಗ್ ಮಿಸ್ ಯೂಸ್ ಮಾಡಿಕೊಂಡಿದ್ದಾನೆ ಎಂದು ಹೇಳಿ, ಇಬ್ಬರೂ ದೂರಾದರು.( video credit : tamil english )