ನೀವು ಧರಿಸುವ ಒಳರವಿಕೆ ಯಾವುದು ತೋರಿಸಿ ಎಂದ ಕಿಡಿಗೇಡಿ..! ಯುವ ನಟಿ ಉತ್ತರ ಹೀಗಿತ್ತು..!
Updated:Saturday, June 18, 2022, 15:04[IST]

ಸಿನಿಮಾರಂಗ ಅಂದ್ರೆ ಹಾಗೇನೇ ಯಾವಾಗ ಯಾವ ರೀತಿಯ ಸಂದರ್ಭಗಳು ಎದುರಾಗುತ್ತವೆ, ಯಾವ ರೀತಿಯ ಪ್ರಶ್ನೆಗಳು ನಮ್ಮ ಎದುರಿಗೆ ಬರುತ್ತವೆ ಎಂದು ನಾವು ಹೇಳಲಿಕ್ಕಾಗದು. ಸಿನಿಮಾರಂಗದಲ್ಲಿ ಒಬ್ಬ ಸ್ಟಾರ್ ನಟ ಆಗಲಿ, ನಟಿ ಆಗಲಿ ಏನೇ ಮಾಡಿದರೂ ದೊಡ್ಡದಾಗಿಯೇ ಸುದ್ದಿ ಆಗುತ್ತಾರೆ. ಅಂತಹ ದೊಡ್ಡ ಸುದ್ದಿಗೆ ಇದೀಗ ತಮಿಳು ಬಾಲನಟಿ ಸದ್ದಿಗೆ ಬಂದಿದ್ದಾರೆ ಎನ್ನಬಹುದು. ಹೌದು ಸ್ಟಾರ್ ನಟ ನಟಿಯರು ಎಂದತಕ್ಷಣ ಅಭಿಮಾನಿಗಳ ಬಳಗದ ಹತ್ತಿರಕ್ಕೆ ತುಂಬಾ ಹತ್ತಿರವಾಗಿರಬೇಕು, ಅವರ ಪ್ರೀತಿಯ ಗಳಿಸಬೇಕು ಎಂದು ಆಗಾಗ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಾರೆ. ಕೆಲವರು ಲೈವ್ ನಲ್ಲಿ ಬಂದು ಅಭಿಮಾನಿಗಳ ಜೊತೆ ಅವರ ಆಗುಹೋಗು ವಿಚಾರಗಳನ್ನು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಜೊತೆಗೆ ಪ್ರೀತಿಯಿಂದ ಮಾತನಾಡುತ್ತಾರೆ.
ಹೌದು ಆಸ್ಕ್ ಮೀ ಎನಿಥಿಂಗ್ ಎನ್ನುವ ಟ್ರೆಂಡ್ ಕೆಲವು ದಿನಗಳ ಹಿಂದೆ ಭರ್ಜರಿಯಾಗಿ ನಡೆಯುತ್ತಿತ್ತು. ಅದೇ ರೀತಿ ಯುವನಟಿ ಅನಿಕಾ ಸುರೇಂದ್ರನ್ ಅವರು ಕೂಡ ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಗೆ ಬಂದು ಆಸ್ಕ್ ಮೀ ಎನಿಥಿಂಗ್ ಎಂದು ಆಪ್ಷನ್ ಕೊಟ್ಟು ಉತ್ತರ ನೀಡಲು ಬಂದಿದ್ದರು. ಆಗ ಕೆಲವರು ಅವರ ಸಿನಿಮಾ ವೃತ್ತಿಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಮಾಡಿದ್ದು, ಯುವನಟಿ ಅನಿಕಾ ಸಹ ಪ್ರೀತಿಯಿಂದಲೇ ಉತ್ತರಿಸಿದ್ದಾರೆ. ಅದೇ ಲೈವ್ ಸೆಕ್ಷನಲ್ಲಿ ಒಬ್ಬ ಕಿಡಿಗೇಡಿ ನನಗೆ ಬ್ರಾ ಬಗ್ಗೆ ಸಲಹೆ ಬೇಕಾಗಿದೆ ನೀವು ಯಾವ ಬ್ರಾವನ್ನು ಹಾಕಿಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಿದ್ದಾನೆ. ಆಗ ನಟಿ ಸಮಾಧಾನವಾಗಿಯೇ ಉತ್ತರ ನೀಡಿದ್ದು, ನಾನು ಹತ್ತಿಯ ಬ್ರಾಗಳನ್ನು ಉಪಯೋಗಿಸುತ್ತೇನೆ ನೀವು ಕೂಡ ಅದನ್ನೇ ಉಪಯೋಗಿಸಬಹುದು ಎಂದು ಮುಖದ ಮೇಲೆ ಹೊಡೆದ ಹಾಗೆ ಹೇಳಿದ್ದಾರೆ ಎನ್ನಲಾಗಿದೆ.
ಲೈವ್ ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುವಾಗ ಇಂತಹ ಪ್ರಶ್ನೆಗಳು ಕೆಲ ಕಿಡಿಗೇಡಿಗಳಿಂದ ಎದುರಾದಾಗ ಕೆಲ ಸ್ಟಾರ್ ನಟ ನಟಿಯರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಆದ್ರೆ ನಟಿ ಅನಿಕ ಯಾವುದೇ ಸಂಕೋಚವಿಲ್ಲದೆ ಹೀಗೆ ಪ್ರತಿಕ್ರಿಯೆ ನೀಡಿ ಉತ್ತರಿಸಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು....