Nayan tara : ನಯನತಾರಾ-ವಿಘ್ನೇಶ್ ದಂಪತಿಗೆ ಮತ್ತೊಂದು ಶಾಕ್..! ಕೋಟಿ ಕೋಟಿ ಹಣ ಲಾಸ್..!!

By Infoflick Correspondent

Updated:Friday, July 22, 2022, 08:12[IST]

Nayan tara : ನಯನತಾರಾ-ವಿಘ್ನೇಶ್ ದಂಪತಿಗೆ ಮತ್ತೊಂದು ಶಾಕ್..! ಕೋಟಿ ಕೋಟಿ ಹಣ ಲಾಸ್..!!

ಬಹುಭಾಷಾ ನಟಿ ನಯನತಾರಾ (Nayantara) ಮತ್ತು ವಿಘ್ನೇಶ್ ಶಿವನ್ (Vignesh) ಜೂನ್ 9ರಂದು ಬೆಳಿಗ್ಗೆ 8.10ಕ್ಕೆ ಹಸೆಮಣೆ ಏರಿದರು. ನವಜೋಡಿಗೆ ಶುಭ ಹಾಆಗಮಿಸಿದ್ದರು. ನಯನತಾರಾ ತಮ್ಮ ಮದುವೆಯನ್ನು ಅದ್ಧೂರಿಯಾಗಿ ಆಗಿದ್ದು, ಅವರು ಧರಿಸಿದ್ದ ಕಾಸ್ಟ್ಯೂಮ್ ನಿಂದ ಹಿಡಿದು ಎಲ್ಲವೂ ಕಾಸ್ಟ್ಲಿ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಇಬ್ಬರು ಸತತ 7 ವರ್ಷಗಳ ಕಾಲ ಪ್ರೀತಿಸಿದ್ದರು. ಸಪ್ತ ವರ್ಷಗಳ ಪ್ರೀತಿಗೆ ಈಗ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಮದುವೆಯಲ್ಲಿ ನಯನತಾರಾ (Nayantara) ಹಾಗೂ ವಿಘ್ನೇಶ್ ದುಬಾರಿ ಕಾಸ್ಟ್ಯೂಮ್ ಗಳನ್ನು ಧರಿಸಿದ್ದರು.  ಮದುವೆಗೆ ಆಗಮಿಸಿದ್ದವರಿಗೂ ಭಾರೀ ಬೆಲೆಬಾಳುವ ಉಡುಗೊರೆಗಳನ್ನು ನೀಡಲಾಗಿತ್ತು.

ನಯನತಾರಾ ತಮ್ಮ ಮದುವೆಯನ್ನು ಅದ್ಧೂರಿಯಾಗಿ ಆಗಿದ್ದು, ಇವರಿಬ್ಬರು ಮದುವೆಗೆ ಶಾರುಖ್ ಖಾನ್, ನಿರ್ದೇಶಕ ಅಟ್ಲಿ ದಂಪತಿ, ರಜನಿಕಾಂತ್, ವಿಜಯ್ ಸೇತುಪತಿ, ವಿಜಯ್, ಮಣಿರತ್ನಂ, ಶಿವಕಾರ್ತಿಕೇಯನ್ ಸೇರಿದಂತೆ ಮಿನಿಸ್ಟರ್ಸ್ ಗಳು ಕೂಡ ಸಾಕ್ಷಿಯಾಗಿದ್ದರು. ಇವರೆಲ್ಲರೂ ನವಜೋಡಿಗೆ ಶುಭ ಹಾರೈಸಿದ್ದರು.    

ಈ ಜೋಡಿಗಳ ಮದುವೆಯ ಜವಾಬ್ದಾರಿಯನ್ನು ನೆಟ್ಫ್ಲಿಕ್ಸ್ ಹೊತ್ತುಕೊಂಡಿತ್ತು. ಭಾರೀ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಮದುವೆ ಸಮಾರಂಭವನ್ನು ಆಯೋಜಿಸಿತ್ತು. ಈ  ಮದುವೆಯ ಸಮಾರಂಭವನ್ನು ಖ್ಯಾತ ನಿರ್ದೇಶಕ ಗೌತಮ್ ಮೆನನ್ ಅವರ ಮೇಲ್ವಿಚಾರಣೆಯಲ್ಲಿ ಚಿತ್ರೀಕರಿಸಲಾಗಿತ್ತು. ಈ ಜೋಡಿಗಳು ಮದುವೆಯಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಮೂಲಕ ನೆಟ್ ಫ್ಲಿಕ್ಸ್ ಒಪ್ಪಂದವನ್ನು ನಯನತಾರಾ ಅವರು ಬ್ರೇಕ್ ಮಾಡಿದಂತೆ ಆಯಿತು. ಹಾಗಾಗಿ ನೆಟ್ ಫ್ಲಿಕ್ಸ್ ಒಪ್ಪಂದವನ್ನು ರದ್ದುಗೊಳಿಸಲು ಮುಂದಾಗಿದೆ. ಇದರಿಂದ ಇದೀಗ ನಯನ ತಾರಾ ಹಾಗೂ ವಿಗ್ನೇಶ್ ಜೇಬಿಗೆ ಕತ್ತರಿ ಬಿದ್ದಂತಾಗಿದೆ.