ನಟಿ ಶೃತಿ ಹಾಸನ್‌ ಅವರನ್ನು ಕಾಡುತ್ತಿದೆ ಈ ಖಾಯಿಲೆ..!!

By Infoflick Correspondent

Updated:Tuesday, August 2, 2022, 09:02[IST]

ನಟಿ ಶೃತಿ ಹಾಸನ್‌ ಅವರನ್ನು ಕಾಡುತ್ತಿದೆ ಈ ಖಾಯಿಲೆ..!!

ನಟ ಧನುಷ್ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶೃತಿ ಹಾಸನ್ ಇದ್ದಕ್ಕಿದ್ದ ಹಾಗೆ ಚಿತ್ರರಂಗದಿಂದ ದೂರ ಉಳಿದಿದ್ದರು. ಧನುಷ್‌ ಹಾಗೂ ಶೃತಿ ಹಾಸನ್‌ ಜೋಡಿ ನಟಿಸಿದ ಸಿನಿಮಾಗಳು ಹಿಟ್ ಕೂಡ ಆಯ್ತು. ಶೃತಿ ಹಾಸನ್ ಕಮಲ್‌ ಹಾಸನ್‌ ಅವರ ಮಗಳು ಆದರೆ ಇವರು ತಂದೆ-ತಾಯಿ ಜೊತೆಗೆ ಒಟ್ಟಿಗೆ ಜೀವನ ನಡೆಸಲಿಲ್ಲ. ಆದರೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ನಟನೆಗೆ ಬಂದ ಶೃತಿ ಹಾಸನ್ ಹಲವರ ಜೊತೆ ಅಫೇರ್ ಇಟ್ಟುಕೊಂಡಿದ್ದರು ಎಂದು ಕೂಡ ಸುದ್ದಿಯಾಗಿತ್ತು. 

ಮೊದಲಿಗೆ ಸಿದ್ಧಾರ್ಥ್ ಬಳಿಕ ಧನುಷ್ ಹೀಗೆ ನಾಲ್ಕು ಜನರೊಂದಿಗೆ ಅಫೇರ್ ಇಟ್ಟುಕೊಂಡಿದ್ದರು. ಇದರ ಜೊತೆಗೆ ಶೃತಿ ಹಾಸನ್ ಅವರು ಕುಡಿಯುವ ಚಟವನ್ನು ಸಹ ರೂಢಿಸಿಕೊಂಡರು. ಇದರಿಂದಾಗಿ ತಮ್ಮ ಬದುಕನ್ನೇ ಕಳೆದುಕೊಂಡರು ಎಂದರೂ ತಪ್ಪಾಗುವುದಿಲ್ಲ. 2019ರಲ್ಲಿ ಸ್ವತಃ ಶೃತಿ ಹಾಸನ್ ಅವರೇ ಸಂದರ್ಶನ ಒಂದರಲ್ಲಿ ಮಾತನಾಡುವಾಗ ತಾವು ಕುಡಿತದ ಚಟಕ್ಕೆ ಬಿದ್ದಿದ್ದರು ಎಂದು ಹೇಳಿಕೊಂಡಿದ್ದರು. ಸಿನಿಮಾಗಳಿಗೆ ಶೂಟಿಂಗ್ ಹೋದಾಗಲೂ ಆಕ್ಟಿಂಗ್ ಮಾಡುವ ಬದಲು ಕುಡಿದ ಮತ್ತಿನಲ್ಲೇ ಇರುತ್ತಿದ್ದರಂತೆ. ಸರಿಯಾದ ಸಮಯಕ್ಕೆ ಶೂಟಿಂಗ್ ಗೆ ಹೋಗುತ್ತಿರಲಿಲ್ಲವಂತೆ ನಿಧಾನವಾಗಿ ಚಿತ್ರಗಳಿಂದಲೂ ಶೃತಿ ಹಾಸನ್ ಅವರನ್ನು ಕೈ ಬಿಡಲಾಯ್ತು.  

ಇನ್ನು ತಮ್ಮ ಮದುವೆಯ ಬಗ್ಗೆ ಹೇಖಿರುವ ಶೃತಿ ಹಾಸನ್ ಅವರ ಮಾತು ಇನ್ನೂ ಶಾಕಿಂಗ್ ಆಗಿದೆ. ಯಾಕೆಂದರೆ, ಶೃತಿ ಹಾಸನ್ ಅವರಿಗೆ ಪ್ರೀತಿ, ಪ್ರೇಮ ಎನ್ನುವಾಗಲೆಲ್ಲಾ ಅರಾಮವಾಗಿರುತ್ತದೆಯಂತೆ. ಆದರೆ ಮದುವೆ ಎಂದರೆ ಭಯವಾಗುತ್ತದೆಯಂತೆ. ಯಾಕೆ ಎಂದು ಕೇಳಿದರೆ, ನನ್ನ ತಂದೆಯೂ ಕೂಡ ಮೂರು ಮದುವೆಯಾಗಿದ್ದಾರೆ. ಆದರೂ ಸಹ ಈಗ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಸದ್ಯ ಶೃತಿ ಹಾಸನ್‌ ಅವರು ಖಾಯಿಲೆಯೊಂದರಿಂದ ಬಳಲುತ್ತಿದ್ದಾರೆ.

 ನಟಿ ಶ್ರುತಿ ಹಾಸನ್ ಅವರು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಹಾಗೂ ಎಂಡೊಮೆಟ್ರಿಯೊಸಿಸ್ ಖಾಯಿಲೆಯಿಮದ ಬಳಲುತ್ತಿದ್ದಾರೆ. ಇದು ಸಾಮಾನ್ಯವಾಗಿ ಇಂದಿನ ಹೆಣ್ಣುಮಕ್ಕಳನ್ನು ಕಾಡುತ್ತಿರುವ ಖಾಯಿಲೆ. ಜೀವನ ಶೈಲಿ, ಒತ್ತಡದಿಂದ ಹೆಣ್ಣುಮಕ್ಕಳು ಪಿಸಿಓಎಸ್‌ ನಿಮದ ಬಳಲುತ್ತಿದ್ದಾರೆ. ಅದೇ ಖಾಯಿಲೆ ಶೃತಿ ಹಾಸನ್‌ ಅವರನ್ನು ಕೂಡ ಕಾಡುತ್ತಿದ್ದು, ವರ್ಕೌಟ್‌ ಮಾಡೋಣ ಬನ್ನಿ ಎಂದು ಇನ್‌ ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ. ಸದ್ಯ ಶೃತಿ ಹಾಸನ್ ಆಕ್ಷನ್ ಥ್ರಿಲ್ಲರ್ ಸಲಾರ್ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ಇದರೊಂದಿಗೆ ಪೃಥ್ವಿ ರಾಜ್​ ಜೊತೆ ಮಲಯಾಳಂ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.