ವರ್ಕ್ ಔಟ್ ಮಾಡುತ್ತ ಎಂಥಾ ಕೆಲಸ ಮಾಡಿದ್ದಾಳೆ ಗೊತ್ತಾ ಸಮಂತಾ..!! ಇಲ್ನೋಡಿ ಬೆರಗಾಗುತ್ತೆ

By Infoflick Correspondent

Updated:Saturday, January 15, 2022, 12:09[IST]

ವರ್ಕ್ ಔಟ್ ಮಾಡುತ್ತ ಎಂಥಾ ಕೆಲಸ ಮಾಡಿದ್ದಾಳೆ ಗೊತ್ತಾ ಸಮಂತಾ..!! ಇಲ್ನೋಡಿ ಬೆರಗಾಗುತ್ತೆ

ನಟಿ ಸಮಂತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಅವರ ಮತ್ತು ನಾಗಚೈತನ್ಯ ಅವರ ಡಿವರ್ಸ್ ವಿಚಾರ ಹೆಚ್ಚು ಸದ್ದು ಮಾಡಿತ್ತು. ಬಳಿಕ ಎಲ್ಲಿಯೂ ಕಾಣದ ನಟಿ ಸಮಂತಾ ಈಗೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಅಲ್ಲೂ ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ಒಂದು ಐಟಂ ಹಾಡಿಗೆ ಹೆಜ್ಜೆ ಹಾಕಿ ಎಲ್ಲರೂ ಬೆರಗಾಗುವಂತೆ ಕುಣಿದಿದ್ದರು. ಈಗ ಡ್ಯಾನ್ಸ್, ಹಾಗೂ ಹೆಚ್ಚು ವರ್ಕೌಟ್ ವಿಡಿಯೋಗಳನ್ನ ಅವರ ಅಭಿಮಾನಿಗಳಲ್ಲಿ ಶೇರ್ ಮಾಡುತ್ತಾ ದೈನಂದಿನ ಕೆಲವು ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ನಟಿ ಸಮಂತಾ ಅವರು ಅವರದೇ ಆದ ಅಭಿನಯದ ಮೂಲಕ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಿಗೆ ವರ್ಕೌಟ್ ವಿಡಿಯೋಗಳನ್ನು ಅಭಿಮಾನಿಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ವರ್ಕೌಟ್ ಮಾಡುತ್ತಾ ನಾಗಚೈತನ್ಯ ಅವರಿಂದ ದೂರ ಆದ ಬಳಿಕ ಹೆಚ್ಚು ಸಮಯವನ್ನು ಜಿಮ್ ನಲ್ಲಿಯೇ ಕಳೆಯುತ್ತಿದ್ದಾರೆ. ಹೊಸ ವರ್ಷಕ್ಕೆ ಗೆಳತಿಯರ ಜೊತೆ ಸಮಂತ ಅವರು ಸಖತ್ ಎಂಜಾಯ್ ಮಾಡಿದ್ದು, ಇದೀಗ ಜಿಮ್ ನಲ್ಲಿ ಮತ್ತೊಂದು ಲೆವೆಲ್ ಕಂಪ್ಲೀಟ್ ಮಾಡಿದ್ದಾರೆ. ಸಮಂತ ಅವರು ಅವರ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಂತೆ, ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಅವರ ಕೆಲಸಗಳಲ್ಲಿ ನಟಿ ಸಮಂತಾ ಬಿಜಿಯಾಗಿದ್ದಾರೆ.  

ವರ್ಕೌಟ್ ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ಇದೀಗ ಶೇರ್ ಮಾಡಿಕೊಂಡಿರುವ ಈ ವರ್ಕೌಟ್ ವಿಡಿಯೋದಲ್ಲಿ ಹೊಸದೊಂದು ಚಾಲೆಂಜ್ ಮಾಡಿ ಅದನ್ನು ಕಂಪ್ಲೀಟ್ ಮಾಡಿದ್ದೇನೆ ಎಂಬುದಾಗಿ ಬರೆದುಕೊಂಡಿದ್ದಾರೆ. ಅಸಲಿಗೆ ಸಮಂತಾ ವರ್ಕೌಟ್ ಮಾಡುವ ವೇಳೆ ಈ ಸಾಹಸ ಕೆಲಸಕ್ಕೆ ಕೈಹಾಕಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅಭಿಮಾನಿಗಳು ಸಮಂತಾ ಅವರ ವರ್ಕೌಟ್ ವಿಡಿಯೋ ನೋಡಿ ಹೆಚ್ಚು ಬೆರಗಾಗಿದ್ದಾರೆ. ಈ ವಿಡಿಯೋ ನೋಡಿ ಸಮಂತ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.