Anasuya : ಒಂದು ದಿನಕ್ಕೆ ನಿನ್ನ ರೇಟ್ ಎಷ್ಟು ಎಂದು ಕೇಳಿದವನಿಗೆ ನಿರೂಪಕಿ ಅನಸೂಯಾ ಕೊಟ್ಟ ಉತ್ತರವೇನು..?

By Infoflick Correspondent

Updated:Thursday, September 1, 2022, 15:03[IST]

Anasuya : ಒಂದು ದಿನಕ್ಕೆ ನಿನ್ನ ರೇಟ್ ಎಷ್ಟು ಎಂದು ಕೇಳಿದವನಿಗೆ ನಿರೂಪಕಿ ಅನಸೂಯಾ ಕೊಟ್ಟ ಉತ್ತರವೇನು..?


ಟಾಲಿವುಡ್ ನ ಮೋಸ್ಟ್‌ ಫೇಮಸ್ ನಿರೂಪಕಿ ಅನಸೂಯಾ ಅವರು ಆಗಾಗ ಟ್ರೋಲ್‌ ಆಗುತ್ತಿರುತ್ತಾರೆ. ಇದೀಗ ಮತ್ತೆ ಟ್ರೋಲ್‌ ಆಗಿದ್ದು, ಟ್ರೋಲಿಗರ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಅನಸೂಯಾ ಅವರು ಟಾಲಿವುಡ್‌ ನಲ್ಲಿ ಬಹು ಬೇಡಿಕೆಯ ನಿರೂಪಕಿ. ತೆಲುಗು ಕಿರುತೆರೆಯ ಎಲ್ಲಾ ಕಾರ್ಯಕ್ರಮಗಳಿಗೂ, ಹಲವು ಸಿನಿಮಾಗಳ ಪ್ರಮೋಷನ್‌ ನಿರೂಪಣೆಗಳಲ್ಲೂ ಅನಸೂಯಾ ಅವರು ಇದ್ದೇ ಇರುತ್ತಾರೆ. ಆದರೆ, ಕೆಲ ಬಾರಿ ಕಿರಿಕ್‌ ಮಾಡಿಕೊಂಡು ಟ್ರೋಲ್‌ ಕೂಡ ಆಗುತ್ತಾರೆ. 

ಕಳೆದ ಕೆಲ ವರ್ಷಗಳ ಹಿಂದೆ ಅನಸೂಯಾ ಹಾಗೂ ನಟ ವಿಜಯ್‌ ದೇವರಕೊಂಡ ನಡುವೆ ವಾರ್‌ ನಡೆದಿತ್ತು. ಅದಕ್ಕೆ ಕಾರಣವಾಗಿದ್ದು, ಮೋಸ್ಟ್‌ ಹಿಟ್‌ ಮೂವಿ ಅರ್ಜುನ್‌ ರೆಡ್ಡಿ ಸಿನಿಮಾ. ಈ ಸಿನಿಮಾದಲ್ಲಿ ವಿಜಯ್‌ ದೇವರಕೊಂಡ ಅವರು ತಾಯಿಯನ್ನು ಬಯುವ ಸೀನ್‌ ಇತ್ತು. ಅದರಲ್ಲಿ ಕೆಟ್ಟ ಪದಗಳನ್ನು ಬಳಸಲಾಗಿತ್ತು. ನಂತರ ಸಿನಿಮಾ ರಿಲೀಸ್‌ ಗೂ ಮುನ್ನವೆ ಈ ಸೀನ್‌ ಅನ್ನು ಕಟ್‌ ಮಾಡಲಾಗಿತ್ತು. ಆದರೆ ಪ್ರೀ ರಿಲೀಸ್‌ ನಲ್ಲಿ ಪ್ರಸಾರವಾಗಿತ್ತು. ಇದನ್ನು ನೋಡಿದ್ದ ಅನಸೂಯಾ ಅವರು ಅಂದೇ ವಿಜಯ್‌ ದೇವರಕೊಂಡ ಅವರ ಜೊತೆಗೆ ಕಿರಿಕ್‌ ಮಾಡಿಕೊಂಡಿದ್ದರು.     

ಅಂದಿನಿಂದ ಇಂದಿನವರೆಗೂ ವಿಜಯ್‌ ದೇವರಕೊಂಡ ಅವರ ಯಾವುದೇ ಕಾರ್ಯಕ್ರಮಕ್ಕೂ ಅನಸೂಯಾ ಅವರು ಹೋಗುತ್ತಿರಲಿಲ್ಲ. ಅವರ ಯಾವುದೇ ಪ್ರಾಜೆಕ್ಟ್‌ ನಲ್ಲೂ ಕೆಲಸ ಮಾಡುತ್ತಿರಲಿಲ್ಲ. ಇದೀಗ ನಡೆದಿರುವುದೇನೆಂದರೆ, ವಿಜಯ್‌ ದೇವರಕೊಂಡ ಅವರ ಬಾಲಿವುಡ್‌ ಚಿತ್ರ ಲೈಗರ್‌ ರಿಲೀಸ್‌ ಆಗಿದೆ. ಆದರೆ ನಿರೀಕ್ಷಿಸಿದಷ್ಟು ಯಶಸ್ಸನ್ನು ಕಂಡಿಲ್ಲ. ಇದಕ್ಕೆ ಅನಸೂಯಾ ಅವರು ಟ್ವೀಟ್‌ ಮಾಡಿದ್ದಾರೆ. ತಾಯಿಯನ್ನು ಬೈದರೆ ಹೀಗೆ ಆಗುವುದು. ಮಾಡಿದ್ದನ್ನು ಅನುಭವಿಸಲೇ ಬೇಕು ಎಂಬ ಅರ್ಥದಲ್ಲಿ ಟ್ವೀಟ್‌ ಮಾಡಿದ್ದಾರೆ. 
ಈ ಟ್ವೀಟ್‌ ನೋಡಿದ ವಿಜಯ್‌ ದೇವರಕೊಂಡ ಅವರ ಅಭಿಮಾನಿಗಳು ಅನಸೂಯ ವಿರುದ್ಧ ಕಿಡಿ ಕಾರಿದ್ದಾರೆ. ಅನಸೂಯಾ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅನಸೂಯಾ ಕಮೆಂಟ್ಗಳಿಗೆ ಖಡಕ್‌ ಉತ್ತರ ನೀಡುತ್ತಿದ್ದಾಳೆ. ಅದರಲ್ಲೊಬ್ಬ ದಿನಕ್ಕೆ ನಿನ್ನ ರೇಟ್‌ ಎಷ್ಟು ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಅನಸೂಯಾ ಉತ್ತರಿಸಿದ್ದು, ನಿನ್ನ ತಾಯಿ, ಅಕ್ಕ-ತಂಗಿಯರಿಗೆ ಇದೇ ಪ್ರಶ್ನೆ ಕೇಳಿದರೆ ಎಷ್ಟಿರುತ್ತದೋ ಅಷ್ಟು ಎಂಬಂತೆ ಖಡಕ್‌ ಆಗಿ ಉತ್ತರ ನೀಡಿದ್ದಾರೆ. ಇನ್ನು ಟ್ರೋಲಿಗರ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.