ತೆಲಗು ಕಾರ್ಯಕ್ರಮಕ್ಕೆ ವಿಶೇಷ ರೀತಿಯಲ್ಲಿ ಬಂದ ರಶ್ಮಿಕಾ ಮಂದಣ್ಣ ; ಜನರು ಫುಲ್ ಫಿದಾ
Updated:Tuesday, March 8, 2022, 07:30[IST]

ನಟಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾದಲ್ಲಿ ಮಿಂಚುತ್ತು, ತೆಲುಗಿನ ಸಿನಿಪ್ರಿಯರ ಮನ ಗೆದ್ದಿದ್ದಾರೆ. ತೆಲುಗಿನಲ್ಲಿ ಅಪಾರ ಹೆಸರು ಮಾಡಿದ ಕೊಡಗಿನ ಬೆಡಗಿ ತೆಲುಗು ಕಾರ್ಯಕ್ರಮವೊಂದರಲ್ಲಿ ಬಂದ ರೀತಿ ಅಪಾರ ಮೆಚ್ಚುಗೆ ಗಳಿಸಿದೆ.
ರಶ್ಮಿಕಾ ಕನ್ನಡವನ್ನು ನಿರ್ಲಕ್ಷ ಮಾಡುತ್ತಿದ್ದಾರೆ ಎಂಬ ಅಪಸ್ವರ ಕೇಳಿಬರುತ್ತಿದೆ ಆದರೆ ಕರ್ನಾಟಕದ ತನ್ನ ಕೊಡಗಿನ ಸಂಪ್ರದಾಯ ರಶ್ಮಿಕಾ ಮರೆತಿಲ್ಲ ಎನ್ನುವುದು ವಿಶೇಷ. ನಾನು ಸದಾ ಕೊಡಗಿನ ಹುಡುಗಿ ಎಂಬುದನ್ನು ರಶ್ಮಿಕಾ ಮಂದಣ್ಣ ಉಡುಗೊರೆ ಮೂಲಕ ಜನತೆಗೆ ಹೇಳಿದ್ದಾರೆ.
ತೆಲುಗು ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ರಶ್ಮಿಕಾ ಪಕ್ಕಾ ಕೊಡವ ಸಂಸ್ಕ್ರತಿಯ ರೀತಿಯಲ್ಲಿ, ಕೊಡವ ಸೀರೆ ಧರಿಸಿ, ಕೊಡಗಿನ ಬೆಡಗಿಯಾಗಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ.
ಕೊಡವ ಸೀರೆ ಉಟ್ಟ ರಶ್ಮಿಕಾ ಕೊಡವ ಸೀರೆ ಮೇಲಿನ ಪ್ರೀತಿಯಿಂದ ಈ ಉಡುಪಿನಲ್ಲಿ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಇವರ ಕೊಡಗಿನ ಪ್ರೀತಿಗೆ , ಕೊಡಗಿನ ಬೆಡಗಿಯ ಲುಕ್ ಗೆ ಕಾರ್ಯಕ್ರಮದಲ್ಲಿ ನೆರೆದ ಜನರು ಮತ್ತು ಅಭಿಮಾನಿಗಲು, ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.