ಒಟಿಟಿಗೆ ಬರಲು ಸಜ್ಜಾಗಿದೆ RRR ಚಿತ್ರ: ಬಿಡುಗಡೆ ಯಾವತ್ತು ಗೊತ್ತಾ..?

By Infoflick Correspondent

Updated:Thursday, May 5, 2022, 18:22[IST]

ಒಟಿಟಿಗೆ ಬರಲು ಸಜ್ಜಾಗಿದೆ RRR ಚಿತ್ರ: ಬಿಡುಗಡೆ ಯಾವತ್ತು ಗೊತ್ತಾ..?

ವಿಶ್ವಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ ಚಿತ್ರ RRR. ಸಿನಿಮಾ ನೋಡಿದವರು ರಾಮ್ ಚರಣ್ ಹಾಗೂ ಜೂ. ಎನ್ ಟಿಆರ್ ನಟನೆಗೆ ಫಿದಾ ಆಗಿದ್ದಾರೆ. ಎಲ್ಲೆಡೆ ಹೌಸ್ ಫುಲ್ ಆಗಿ ಚಿತ್ರ ಓಡಿತ್ತು. ಬಾಕ್ಸ್ ಆಫೀಸ್ ನಲ್ಲಿ 1123 ಕೋಟಿ ರೂಪಾಯಿ ಹಣವನ್ನು ಬಾಚಿಕೊಂಡಿದೆ. ಇದೀಗ ಈ ಚಿತ್ರ ಓಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದ್ದು, ಅಭಿಮಾನಿಗಳು ಮನೆಯಲ್ಲೇ ಕೂತು ನೋಡಲು ಕಾತುರರಾಗಿದ್ದಾರೆ.  

 

ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ತೇಜ್ ಈ ಚಿತ್ರದಲ್ಲಿ ನಾಯಕರಾಗಿ ಮಿಂಚಿದ್ದಾರೆ. ನಟಿ ಆಲಿಯಾ ಭಟ್, ನಟ ಅಜಯ್ ದೇವಗನ್ , ಒಲಿವಿಯಾ ಮೊರಿಸ್, ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ತ್ರಿಬಲ್ ಆರ್ ಸಿನಿಮಾ ಟೆಕೆಟ್ ದರವೂ ಹೆಚ್ಚಾಗಿತ್ತು. ಈ ಚಿತ್ರ ಬರೋಬ್ಬರಿ 5 ಭಾಷೆಗಳಲ್ಲಿ ರಿಲೀಸ್ ಆಗಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಸಿನಿಮಾದಲ್ಲಿ ಉತ್ತಮ ಹಾಡುಗಳಿದ್ದು, ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಅವರ ಕಥೆ ಇದ್ದು, ಶ್ರೀಕರ್ ಪ್ರಸಾದ್ ಸಂಕಲನ ಆರ್ಆರ್ಆರ್ ಚಿತ್ರಕ್ಕಿದೆ.  

ಇನ್ನು ತ್ರಿಬಲ್ ಆರ್ ಸಿನಿಮಾ ಟೆಕೆಟ್ ದರವೂ ಹೆಚ್ಚಾಗಿದ್ದರಿಂದ ಕೆಲವರು ಸಿನಿಮಾ ನೋಡುವ ಆಸೆ ಇದ್ದರೂ ಥಿಯೇಟರ್ ಗೆ ಹೋಗಲಾಗದೇ, ಒಟಿಟಿಯಲ್ಲಿ ನೋಡಲು ಕಾಯುತ್ತಿದ್ದಾರೆ. ಮೇ 20ರಂದು Zee5, NetFlixನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಇನ್ನು ಕೆಲವರ ಪ್ರಕಾರ ಜೂನ್ 3 ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ. ಒಟ್ನಲ್ಲಿ ಇನ್ನು ಕೆಲವೇ ದಿನಗಳಲ್ಲಿ RRR ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದ್ದು, ಅಭಿಮಾನಿಗಳು ನೋಡಬಹುದಾಗಿದೆ.