ವಿಚ್ಛೇದನ ನೀಡಿದ ಪತಿಯ ವಿಚಾರಕ್ಕೆ ಮತ್ತೆ ನೆಟ್ಟಿಗರ ಪಿತ್ತ ನೆತ್ತಿಗೇರಿಸಿದ ಸಮಂತಾ..! ಗರಂ ಆಗಲು ಕಾರಣವೇನು..?

By Infoflick Correspondent

Updated:Thursday, March 24, 2022, 16:49[IST]

ವಿಚ್ಛೇದನ ನೀಡಿದ ಪತಿಯ ವಿಚಾರಕ್ಕೆ ಮತ್ತೆ ನೆಟ್ಟಿಗರ ಪಿತ್ತ ನೆತ್ತಿಗೇರಿಸಿದ ಸಮಂತಾ..! ಗರಂ ಆಗಲು ಕಾರಣವೇನು..?

ನಟಿ ಸಮಂತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಮಂತಾ ಅವರು ಈಗಲೂ ಕೂಡ ಪಡ್ಡೆ ಹುಡುಗರ ಮನಸ್ಸಿಗೆ ಕೈಹಾಕಿ ರಾತ್ರಿಯಿಡೀ ನಿದ್ದೆ ಕೆಡಿಸುವಂತಹ ಚೆಲುವೆ. ನಟಿ ಸಮಂತಾ ಅವರ ನಿಜ ಜೀವನದಲ್ಲಿ ಈಗಾಗಲೇ ಸಾಕಷ್ಟು ನಡೆದಿದೆ. ಮೊದಲಿಗೆ ಚೆನ್ನೈನಲ್ಲಿ ಹುಟ್ಟಿ ಬೆಳೆದ ಸಮಂತ ತಮಿಳು ಸಿನಿಮಾರಂಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ನಂತರ ತೆಲುಗು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸುತ್ತ ನಟಿ ಸಮಂತಾ ಅವರು ಬಳಿಕ ನಾಗಚೈತನ್ಯ ಅವರೊಟ್ಟಿಗೆ ದಾಂಪತ್ಯ ಜೀವನವನ್ನು ಕೂಡ ಆರಂಭಿಸಿದ್ದರು. ಆದರೆ ಇವರಿಬ್ಬರ ನಡುವೆ ಅದೇನಾಯಿತೋ ಗೊತ್ತಿಲ್ಲ, ಇತ್ತೀಚಿಗೆ ಕೆಲವು ತಿಂಗಳುಗಳ ಹಿಂದೆ ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ.

ಹೌದು ಆರಂಭದಲ್ಲಿ ಪತಿ ನಾಗಚೈತನ್ಯ ಅವರ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಸಮಂತಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತಿಯ ಜೊತೆಗಿನ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳಿಗಾಗಿ ಪತಿಯೊಂದಿಗಿನ ಫೊಟೋಸ್ ಗಳನ್ನ ಹಂಚಿಕೊಂಡು ಕ್ಯಾಪ್ಶನ್ ನೀಡಿ ಪ್ರೀತಿಯ ಹಂಚುತ್ತಿದ್ದರು. ಆದರೆ ಇದೀಗ ನಾಗಚೈತನ್ಯ ಅವರಿಗೆ ವಿಚ್ಛೇದನ ನೀಡಿದ ಬಳಿಕ ತುಂಬಾನೇ ಬದಲಾವಣೆ ಕಂಡು ಕೊಂಡಿದ್ದಾರೆ ಎಂದು ಹೇಳಬಹುದು. ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಸಮಂತಾ ಮೊನ್ನೆಯಷ್ಟೇ ಒಂದು ಬಿಕಿನಿ ಗೌನ್ ವಿಚಾರಕ್ಕಾಗಿ ತುಂಬಾನೇ ಟ್ರೋಲ್ ಆಗಿದ್ದರು. ಹೌದು ಇನ್ಸ್ಟಾಗ್ರಾಂ ಖಾತೆಯಲ್ಲಿ ನಾಗಚೈತನ್ಯ ಅವರೊಟ್ಟಿಗಿನ ಫೋಟೋಗಳನ್ನು ಮೊದಲಿಗೆ ಡಿಲೀಟ್ ಮಾಡಿದ್ದ ಸಮಂತ ಇದೀಗ ಅವರನ್ನು ಅನ್ ಫಾಲೋ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಸಮಂತಾ ಅವರ ವೈಯಕ್ತಿಕ ವಿಚಾರಗಳನ್ನು ಹಾಗೆ ಸಿನಿಮಾ ವಿಚಾರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಎಲ್ಲವನ್ನೂ ಅವ್ರ ಅಭಿಮಾನಿಗಳಿಗಾಗಿ ಫೋಟೋ ಮೂಲಕ, ವಿಡಿಯೋ ಮೂಲಕ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಅಷ್ಟೇ ಆಕ್ಟಿವ್ ಇದ್ದಾರೆ. ಆದರೆ ನಟ ನಾಗಚೈತನ್ಯ ಅವರನ್ನು ಅನ್ ಫಾಲೋ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರ ಪಿತ್ತ ನೆತ್ತಿಗೇರಿದೆಯಂತೆ. ಕಾರಣ ಇನ್ನೂ ಕೂಡ ನಾಗಚೈತನ್ಯ ಅವರು ಸಮಂತ ಅವರನ್ನೇ ಫಾಲೋ ಮಾಡುತ್ತಿದ್ದು ಇವರ ಎಲ್ಲ ವಿಷಯಗಳನ್ನು ಗಮನಿಸುತ್ತಿದ್ದಾರೆ. ಹೀಗಿರುವಾಗ ಸಮಂತಾಗೆ ಅದೆಷ್ಟು ಅಟಿಟ್ಯುಡ್ ಇರಬೇಕು ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...