Tejaswi Madivada : ಕುಡಿದ ಮತ್ತಿನಲ್ಲಿ 30 ಜನ ನಟಿ ತೇಜಸ್ವಿ ಮಡಿವಾಡರೂಮಿಗೆ ಬಂದಾಗ ಏನಾಯ್ತು ಗೊತ್ತಾ..?

By Infoflick Correspondent

Updated:Sunday, August 28, 2022, 15:26[IST]

Tejaswi Madivada :  ಕುಡಿದ ಮತ್ತಿನಲ್ಲಿ 30 ಜನ ನಟಿ ತೇಜಸ್ವಿ ಮಡಿವಾಡರೂಮಿಗೆ ಬಂದಾಗ ಏನಾಯ್ತು ಗೊತ್ತಾ..?

ನಟಿ ತೇಜಸ್ವಿ ಮಡಿವಾಡ  ತೆಲುಗು ಚಿತ್ರರಂಗದ ಬ್ಯೂಟಿಫುಲ್‌ ಹುಡುಗಿ. ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್‌ ಆಗಿರುವ ಬೆಡಗಿ. ಗ್ಲಾಮರಸ್‌ ಗೆ ಒತ್ತು ಕೊಡುವ ಈ ಬ್ಯೂಟಿ ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಮೂಲಕ ಹೆಚ್ಚು ಫಾಲೋವರ್ಸ್ ಪಡೆಯುತ್ತಿದ್ದಾರೆ. ತೆಲುಗು ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡು ಹವಾ ಕ್ರಿಯೇಟ್ ಮಾಡಿದ್ದರು. ಈದೀಗ ಇವರು ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. 

ಇದೀಗ ಭಯಾನಕ ವಿಚಾರವೊಂದನ್ನು ತೇಜಸ್ವಿ ಅವರು ಹೇಳಿಕೊಂಡಿದ್ದು, ಇಡೀ ಚಿತ್ರರಂಗವೇ ದಂಗಾಗಿದೆ. ಕಮಿಟ್ ಮೆಂಟ್ ಚಿತ್ರದಲ್ಲಿ ನಟಿಸಿರುವ ಇವರು ಸಿನಿಮಾ ಪ್ರಚಾರದ ವೇಳೆ ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಾಗ ತೇಜಸ್ವಿ ಮಡಿವಾಡ ಅವರು ಅನುಭವಿಸಿದ ಕೆಲ ಕೆಟ್ಟ ಅನುಭವಗಳನ್ನು ಹೇಳಿಕೊಂಡಿದ್ದಾರೆ. ತೇಜಸ್ವಿ ಮಡಿವಾಡ ಮೇಲೆ ಸುಮಾರು 30 ಕುಡುಕರು ಹಲ್ಲೆ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ಈ ಮಾತುಗಳು ಈಗ ವೈರಲ್ ಆಗಿವೆ.   

ಕಾರ್ಯಕ್ರಮವೊಂದಕ್ಕೆ ತೇಜಸ್ವಿ ಮಡಿವಾಡ ಅವರು ಹೋದಾಗ ಕುಡಿದ ಮತ್ತಿನಲ್ಲಿದ್ದ 30 ಮಂದಿ ಬಂದಿದ್ದರಂತೆ. ರಾತ್ರಿ ಹೊತ್ತಿನಲ್ಲಿ ಬಂದವರು ತೇಜಸ್ವಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ದಿನ ತೇಜಸ್ವಿ ಅವರು ಅದೂ  ಹೇಗೋ ತಪ್ಪಿಸಿಕೊಂಡು ಮನೆ ತಲುಪಿದರಂತೆ. ಆದರೂ ನಿದ್ದೆ ಬರದೇ ಭಯದಿಂದ ಆ ರಾತ್ರಿ ಇಡೀ ತೇಜಸ್ವಿ ಅವರು ಅಳುತ್ತಿದ್ದರಂತೆ. ಆ ಘಟನೆಯನ್ನು ಜೀವನ ಪರ್ಯಂತ ಮರೆಯುವುದಿಲ್ಲ ಎಂದು ನೊಂದುಕೊಂಡು ಹೇಳಿದ್ದಾರೆ. ಈ ಕಾಸ್ಟಿಂಗ್ ಅನ್ನೋದು ಎಲ್ಲಾ ಕ್ಷೇತ್ರದಲ್ಲೂ ಇದೆ. ನೆನಪಿಸಿಕೊಂಡರೆ ಆ ದಿನ ತುಂಬಾ ಭಯವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.