ಮೋಡ ಅಡ್ಡ ಬಂದಿದ್ದಕ್ಕೆ ಯುದ್ಧಕಾಂಡ ನಡೆಯುವ ಸಾಧ್ಯತೆ ಇದೆಯೆಂದ ಅರ್ಚಕ ದೀಕ್ಷಿತ್ ಗುರೂಜಿ..!

Updated: Thursday, January 14, 2021, 20:58 [IST]

ಗವಿಗಂಗಾಧರೇಶ್ವರನ ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾಗಿದೆ. ಹಾಗೂ ಭಾಸ್ಕರನು ಅಗೋಚರವಾಗಿ ಲಿಂಗ ಸ್ಪರ್ಶ ಮಾಡಿ ಹಾದು ಹೋಗಿದ್ದಾನೆ ಎಂಬುದಾಗಿ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕರಾದ, ಸೋಮಸುಂದರ್ ದೀಕ್ಷಿತ್ ಅವರು ಇದರ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಈಗಷ್ಟೇ ಮಾಧ್ಯಮ ಮೂಲಕ ಸುದ್ದಿ  ಕೇಳಿಬಂದಿದೆ..

ಕಳೆದ ವರ್ಷ ಕೊರೊನ ಬಂದ ಕಾರಣಕ್ಕಾಗಿ ಇದೆ ಹಿನ್ನೆಲೆಯಲ್ಲಿ ಇದೀಗ ದೀಕ್ಷಿತ್ ಅರ್ಚಕರು ಹೇಳಿದ್ದು ಎನ್ ಗೊತ್ತಾ..? ಹೌದು 'ದೈವ ನಿರ್ಣಯ, ದೇವರಿಗೆ ಮಾತ್ರ ಗೊತ್ತು ಇರುತ್ತದೆ. ನನ್ನ 53 ವರ್ಷಗಳ ಅನುಭವದಲ್ಲಿ ಇದೇ ಮೊದಲ ಬಾರಿಗೆ ಹೀಗಾಗುತ್ತಿದೆ. ಹೋದ ವರ್ಷ ಈಶ್ವರನ ಮೇಲೆ ಸೂರ್ಯ ಕಿರಣ 2.36 ನಿಮಿಷವಿತ್ತು. ಹಾಗಾಗಿ, ಹೋದ ವರ್ಷ ಕರೊನಾ ಕಾಯಿಲೆ ಇಡೀ ವಿಶ್ವವನ್ನೆ ಕಾಡಿತ್ತು. ಕಳೆದ 2020 ರ ವರ್ಷ, ಇಡೀ ವಿಶ್ವಕ್ಕೆ ಹೆಚ್ಚು ಸಂಕಷ್ಟದ ವರ್ಷವಾಗಿತ್ತು.. ಆದ್ರೆ ಈ ವರ್ಷ ಅಗೋಚರವಾಗಿ ಸೂರ್ಯ ಪೂಜೆ ಮಾಡಿದ್ದಾನೆ. ಅಗೋಚರ ಸ್ಪರ್ಶವಾದ ಕಾರಣದಿಂದ ಜಗತ್ತಿಗೆ ಯಾವುದೇ ಸಮಸ್ಯೆಯಿಲ್ಲ.   

Advertisement

ಈ ಹಿಂದೆಯ 2019ರ ವರ್ಷದ ಪ್ರಕಾರವೇ, 2021ರ ವರ್ಷ ಹೆಚ್ಚು ಶುಭಮಯವಾಗಿರುತ್ತದೆ. ಮತ್ತು ಇಡೀ ಪ್ರಕೃತಿಗೆ ಬಂದೊದಗಿದ್ದ ಕರೊನಾ ಮಾರಿ ದೂರವಾಗಲಿದೆ. ಸೂರ್ಯನು 20 ನಿಮಿಷಗಳ ಮುಂಚೆ ದಕ್ಷಿಣಾಯಣದಲ್ಲಿದ್ದನು. ಈಗ ಉತ್ತರಾಯಣ ಕಾಲ ಪ್ರಾರಂಭವಾಗಿದೆ' ಎಂದು ದೇವಾಲಯದ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ...

'ಗಂಗಾಧರನಿಗೆ ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾಗಿ ನಿಂತಿದೆ. ಮೋಡ ಅಡ್ಡ ಬಂದ ಕಾರಣದಿಂದ, ಯುದ್ಧಕಾಂಡ ನಡೆಯಬಹುದು..ಶಿವನ ಕ್ಷೇತ್ರಗಳಲ್ಲಿ ಮೃತ್ಯುಂಜಯ ಪೂಜೆಯಿಂದ ಮೋಕ್ಷ ಲಭಿಸುತ್ತದೆ, ಹಾಗೆ ಮಾಘಮಾಸದಲ್ಲಿ ಅತಿರುದ್ರ ಮಹಾಯಾಗ ಕೂಡ ಮಾಡುತ್ತವೆ. ಮತ್ತು ಸ್ವಾಮಿಯ ಸನ್ನಿಧಿಯಲ್ಲಿ ಮಹಾಯಾಗದಿಂದ ಹೆಚ್ಚು ಒಳ್ಳೆಯದು ಆಗಲಿದೆ,  ಹಾಗೇನೇ ಜಗದೋದ್ಧಾರಕ ಶಿವನು ಎಲ್ಲರನ್ನ ಸಂತುಷ್ಟಗೊಳಿಸುತ್ತಾನೆ. ಆಲಯದ ಅರ್ಧದವರೆಗೆ ಸೂರ್ಯ ರಶ್ಮಿ ಪ್ರವೇಶ ಮಾಡಿತ್ತು.  

Advertisement

ಅದೇ ಹಿನ್ನೆಲೆಯಲ್ಲಿ ಅಗೋಚರವಾಗಿ ಸೂರ್ಯನು ಪೂಜೆ ಸಲ್ಲಿಸಿದ್ದಾನೆ. ಆ ಪರಮೇಶ್ವರನ ಕೃಪೆ ಎಲ್ಲರ ಮೇಲೆಯೂ ಇರಲಿದೆ', ಎಂಬುದನ್ನ  ದೇವಾಲಯದ ಪ್ರಧಾನ ಅರ್ಚಕರಾದಂತ, ಸೋಮಸುಂದರ್ ದೀಕ್ಷಿತ್ ಅವರು ಮಾತನಾಡಿ ಸ್ಪಷ್ಟನೆ ಕೊಟ್ಟರು.. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನ ನಮಗೆ ಕಾಮೆಂಟ್ ಮಾಡಿ, ಎಲ್ಲರೂ ತಪ್ಪದೆ ಈ ಮಾಹಿತಿಯನ್ನು ಶೇರ್ ಮಾಡಿ, ಮೇಲಿನ ಎಲ್ಲಾ ಮಾಹಿತಿ ನಮಗೆ ಮಾಧ್ಯಮ ಒಂದರಿಂದ ತಿಳಿದುಬಂದಿದೆ..