ನಿಮ್ಮ ಜೀವನದಲ್ಲಿ ಕಷ್ಟಗಳೇ ಹೆಚ್ಚಾಗಿವೆಯಾ..? ಮಂಗಳವಾರ ಹನುಮಂತನಿಗೆ ಹೀಗೆ ಮಾಡಿ ಸಾಕು..!

Updated: Tuesday, February 16, 2021, 11:54 [IST]

ಹೌದು ಗೆಳೆಯರೇ ಭಗವಾನ್ ಹನುಮಂತನು ಜೀವನದ ಪ್ರತಿಯೊಂದು ಬಿಕ್ಕಟ್ಟಿಗೆ ಅಥವಾ ಸಮಸ್ಯೆಗೆ ಒಂದಲ್ಲ ಒಂದು ಪರಿಹಾರವನ್ನು ಹೊಂದಿದ್ದಾರೆ ಎಂದು ನಂಬಲಾಗಿದೆ. ಈ ಭೂಮಿ ಮೇಲೆ ಹನುಮಂತ  ನಿವಾರಣೆ ಮಾಡಲಾಗದಿರುವ ಯಾವುದೇ ದುಃಖ ಇಲ್ಲ ಎಂದು ನಂಬಲಾಗಿದೆ. ಇನ್ನು ಮಂಗಳವಾರವನ್ನ ಭಗವಾನ್ ಹನುಮಂತನ ದಿನ ಎನ್ನಲಾಗಿದೆ. ಅದೇ ಕಾರಣಕ್ಕಾಗಿ ಮಂಗಳವಾರವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಭಗವಾನ್ ಹನುಮಂತ ಈ ದಿನ ತನ್ನ ಭಕ್ತರ ಪ್ರತಿ ಪ್ರಾರ್ಥನೆಯನ್ನು ಆಲಿಸುತ್ತಾನಂತೆ. ಹೌದು ಮಂಗಳವಾರ ದಿನ ಹನುಮಂತನ ಆಶೀರ್ವಾದ ಪಡೆಯಬೇಕು ಎಂದಲ್ಲಿ, ಈ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೇನೇ ನೀವು ಇದನ್ನ  ಮಾಡುವುದರಿಂದ ಹನುಮಂತನ ಕೃಪೆಯಿಂದ, ನಿಮ್ಮ ಕಷ್ಟದ ಸಮಯ ದೂರವಾಗಿ ಮುಗಿಯುತ್ತದೆ...   

Advertisement

 
ನಿಮ್ಮ ಜೀವನದಲ್ಲಿ ಎಂದಿಗೂ ಕೂಡ ಹಣದ ಕೊರತೆ ಬರಬಾರದು ಎಂದು ನೀವು ಬಯಸಿದ್ದೇ ಆದಲ್ಲಿ, ಈ ಕ್ರಮಗಳನ್ನು ಅನುಸರಿಸಿ ನೋಡಿ. ಮಂಗಳವಾರ ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿದ ಬಳಿಕ, ಆಲದ ಮರಗಳ  ಎಲೆಯನ್ನ  ಮುರಿಯಿರಿ ನಂತರ ನೀರಿನಿಂದ ತೊಳೆದು ಸ್ವಚ್ಚ ಮಾಡಿ. ಈ ಎಲೆಯನ್ನು ಸ್ವಲ್ಪ ವೇಳೆಯವರೆಗೆ ಭಗವಾನ್ ಹನುಮಂತನ ಮುಂದೆ ಇರಿಸಿ, ತದನಂತರ  ಶ್ರೀ ರಾಮನ ಹೆಸರನ್ನ ಅದೇ ಎಲೆಯ ಮೇಲೆ ಕೇಸರಿ ಬಣ್ಣದೊಂದಿಗೆ ಬರೆಯಿರಿ. ಆಮೇಲೆ ಪೂಜೆ ಮುಗಿದ ಬಳಿಕ ನಿಮ್ಮ ಪರ್ಸಿನಲಿ ಆ ಎಲೆಯನ್ನು ಇಟ್ಟುಕೊಳ್ಳಿ, ಆಮೇಲೆ, ವರ್ಷದುದ್ದಕ್ಕೂ ಹಣದ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ..  
Advertisement

ಮಂಗಳವಾರ ಹನುಮಂತ ದೇವರನ್ನ ಮೆಚ್ಚಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗ ಇದೆ. ಅದು ಬೆಳಿಗ್ಗೆ ಎದ್ದು ಸ್ನಾನ ಮಾಡಿದ ಮೇಲೆ, ಸ್ವಚ್ಚ ಬಟ್ಟೆಯನ್ನು ಧರಿಸಿಕೊಂಡು, ಸಾಸಿವೆ ಎಣ್ಣೆ ದೀಪವನ್ನ ಅರಳಿ ಮರದ ಕೆಳಗೆನೆ ಬೆಳಗಿಸಿ, ಬಳಿಕ ಪೂರ್ವ ದಿಕ್ಕಿಗೆ ಎದುರಾಗಿ ಕುಳಿತುಕೊಂಡು ಶ್ರೀ ರಾಮನ ಹೆಸರಿನ 11 ಹೂಮಾಲೆಯನ್ನ ತುಳಸಿ ಹಾರದಿಂದ ಜಪಿಸಿ..  

Advertisement

ಮಂಗಳವಾರ ಸಾಯಂಕಾಲ ಭಗವಂತ ಹನುಮಾನ್ ದೇವಸ್ಥಾನಕ್ಕೆ ಭೇಟಿ ಕೊಡಿ. ದೇವಾಲಯದಲ್ಲಿ ಸಾಸಿವೆ ಎಣ್ಣೆ ದೀಪ ಹಚ್ಚಿ ನಂತರ ಅಲ್ಲಿಯೇ ಕುಳಿತುಕೊಂಡು ಹನುಮಾನ್ ಚಾಲೀಸಾ ಪಠಿಸಬೇಕು. ರಾಮನ ಭಕ್ತ ಹನುಮಂತನನ್ನ ಮೆಚ್ಚಿಸಲು ಇದು ಕೂಡ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿ ಪರಿಗಣಿಸಲಾಗಿದೆ. ಇನ್ನು ಮಂಗಳವಾರ ದಿನ ಹನುಮಾನ್ ಯಂತ್ರವನ್ನು, ಸ್ಥಾಪಿಸುವುದು ಬಹಳ ಶುಭವೆಂದು ಪರಿಗಣಿನೆ ಮಾಡಲಾಗಿದೆ. ಹನುಮಾನ್ ಯಂತ್ರವನ್ನು ಸ್ಥಾಪಿಸಿದ ನಂತರ ಅದನ್ನು ಪ್ರತಿದಿನ ಪೂಜೆ ಮಾಡಬೇಕು. ಇದರಿಂದ ನಿಮ್ಮ ಎಂಥಾ ಸಮಸ್ಯೆ ಇದ್ದರೂ ಶೀಘ್ರದಲ್ಲೇ ದೂರವಾಗುತ್ತವೆ....