ಹೈ ಹೀಲ್ಡ್ ಚಪ್ಪಲಿ ಧರಿಸುತ್ತಿರಾ ? ನೀವು ಈ ಸಂಗತಿಗಳನ್ನು ತಿಳಿಯಲೇಬೇಕು..!

By Infoflick Correspondent

Updated:Monday, August 15, 2022, 13:36[IST]

ಹೈ ಹೀಲ್ಡ್ ಚಪ್ಪಲಿ ಧರಿಸುತ್ತಿರಾ ?  ನೀವು ಈ ಸಂಗತಿಗಳನ್ನು ತಿಳಿಯಲೇಬೇಕು..!

ಇತ್ತೀಚೆಗಿನ ದಿನಗಳಲ್ಲಿ ಹೆಣ್ಮಕ್ಕಳು ತನ್ನ ಬಳಿಯೊಂದು ಹೈಹೀಲ್ಡ್ ಚಪ್ಪಲಿ ಇರಲೆಂದು ಬಯಸುವುದು ಸಹಜವೇ. ಕೆಲವರಂತು ಹೆಚ್ಚಾಗಿ ಹೈಹೀಲ್ಡ್ ಚಪ್ಪಲಿಯನ್ನೇ ಬಳಸುತ್ತಾರೆ. ಹೈ ಹೀಲ್‌ ಧರಿಸಿ ಸ್ಟೈಲಾಗಿ ಹಲವಾರು ಯುವತಿಯರು ನಡೆಯುತ್ತಾರೆ‌.ಕೆಲವರಂತೂ ಪ್ರತಿದಿನ ಹೀಲ್ಡ್‌ ಚಪ್ಪಲಿ ಧರಿಸುತ್ತಾರೆ. ಸ್ವಲ್ಪ ಕುಳ್ಳಗೆ ಇರುವವರು ಎತ್ತರ ಕಾಣಲಿ ಎಂದು ಈ ರೀತಿಯ ಚಪ್ಪಲಿ ಹೆಚ್ಚಾಗಿ ಧರಿಸುತ್ತಾರೆ.

 ಹೈ ಹೀಲ್ಡ್‌ ಚಪ್ಪಲಿ ಧರಿಸುವುದರಿಂದ ನಾವು ಸ್ವಲ್ಪ ಎತ್ತರ ಕಾಣಬಹುದು, ಜೊತೆಗೆ ನಮಗೆ ಕಂಫರ್ಟ್‌ ಆಗಿಯೂ ಇರಬಹುದು, ಆದರೆ ಇದನ್ನು ಬಳಸುವುದರಿಂದ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಅಪಾಯಗಳಿವೆ ಗೊತ್ತಾ? ಹೈಹೀಲ್ಡ್ ಚಪ್ಪಲಿ ಧರಿಸುವವರು ಸ್ವಲ್ಪ ಎಚ್ಚರ ವಹಿಸುವುದು ಅಗತ್ಯ.

ಹೈ ಹೀಲ್ ಧರಿಸಿದಾಗ ದೇಹದ ಭಾರ ಕಾಲಿನ ಮುಂಬದಿ ಮೇಲೆ ಬೀಳುತ್ತದೆ. ಇದರಿಂದ ಪಾದಗಳಲ್ಲಿ ಉರಿಯೂತದ ಸಮಸ್ಯೆ ಉಂಟಾಗುವುದು. ಹೈ ಹೀಲ್ ನಡಿಗೆ ಬೆನ್ನು ಮೂಳೆಯ ಮೇಲೆ ಒತ್ತಡ ಬೀರುವುದು. ಇದರಿಂದ ಪಾದಗಳಲ್ಲಿ ನೋವು, ಬೆನ್ನು ಮೂಳೆಯಲ್ಲಿ ನೋವು ಕಂಡು ಬರುವುದು.

ಹೈ ಹೀಲ್ಡ್‌ ಧರಿಸುವುದರಿಂದ ಕಂಡು ಬರುವ ಮತ್ತೊಂದು ಸಮಸ್ಯೆಯೆಂದರೆ ಸೊಂಟ ಹಾಗೂ ಹಿಂಬದಿಯಲ್ಲಿ ನೋವು. ಹಿಂಬದಿಯ ಸ್ನಾಯುಗಳಲ್ಲಿ ಒತ್ತಡ ಉಂಟು ಮಾಡುವುದರಿಂದ ಹಿಂಬದಿಗೆ ಹಾನಿಯುಂಟಾಗುವುದು.
ಹೈ ಹೀಲ್ಡ್‌ ಧರಿಸುವವರಲ್ಲಿ ಸಂಧಿವಾತದ ಸಮಸ್ಯೆ ಕಂಡು ಬರುವುದು. ಹೈಹೀಲ್ಡ್ ಧರಿಸಿ ನಡೆಯುವಾಗ ಬೆರಳಿನ ಮೇಲೆ ಹೆಚ್ಚಿನ ಶಕ್ತಿ ಕೊಡಬೇಕಾಗುತ್ತದೆ. ಕೆಲವೊಮ್ಮೆ ಸಮತೋಲನ ತಪ್ಪಿ ಕಾಲುಗಳಿಗೆ ತೊಂದರೆಗಳು ಆಗುವುದು.

ಇನ್ನು ಗರ್ಭಿಣಿ ಮಹಿಳೆಯರು ಹೈಹೀಲ್ಡ್ ಚಪ್ಪಲಿ ಧರಿಸಿ ನಡೆದಾಡುವುದು ಸೂಕ್ತವಲ್ಲ. ಹೈ ಹೀಲ್ಡ್ ಹಾಕಿದ್ದೇ ಆದರೆ ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಇರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

 ಹೀಲ್ಡ್‌ ಧರಿಸುವವರಿಗೆ ಆರೋಗ್ಯ ಸಮಸ್ಯೆ ತಡೆಗಟ್ಟಲು ಕೆಲ ಟಿಪ್ಸ್ ; ತುಂಬಾ ಪಾಯಿಂಟ್ ಇರುವ ಹೀಲ್ಡ್‌ ಬಳಸಬೇಡಿ. 2 ಇಂಚಿಗಿಂತ ಎತ್ತರದ ಹೀಲ್ಡ್ ಧರಿಸುವುದನ್ನು ಕಡಿಮೆ ಮಾಡಿ. ಅವುಗಳನ್ನು ಧರಿಸುವ ಮುನ್ನ ಹಾಗೂ ಬಿಚ್ಚಿದ ನಂತರ ಪಾದಗಳನ್ನು ಸ್ಟ್ರೆಚ್ ಮಾಡಿ. ತುಂಬಾ ಹೊತ್ತು ಹೈ ಹೀಲ್ಡ್‌ ಧರಿಸಬೇಡಿ, ಕೂರುವಾಗ ಬಿಚ್ಚಿಡಿ.

VIDEO CREDIT : KANNADA STAR TV