ಚಳಿಗಾಲದಲ್ಲಿ ಮೀನು ಸೇವನೆಯಿಂದ 8 ಆರೋಗ್ಯಕರ ಲಾಭಗಳೇನು?

By Shivaraj

Updated:Thursday, December 9, 2021, 21:00[IST]

ಚಳಿಗಾಲದಲ್ಲಿ ಮೀನು ಸೇವನೆಯಿಂದ 8 ಆರೋಗ್ಯಕರ ಲಾಭಗಳೇನು?

ಎಲ್ಲಾ ಕಾಲಕ್ಕೂ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಆದರೆ ಚಳಿಗಾಲದ ಆರಂಭವಾಗುತ್ತಿದ್ದಂತೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ, ಗಾಳಿಯಲ್ಲಿ ತೇವಾಂಶವು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಅನುಕೂಲವಾಗಿರುತ್ತವೆ. ಆದ್ದರಿಂದ ಬ್ಯಾಕ್ಟೀರಿಯಾದ ಕಾಯಿಲೆಗಳು ಹೆಚ್ಚಾಗಿ ಹರಡುತ್ತವೆ.

ಇದಕ್ಕಾಗಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ಮುಖ್ಯವಾಗುತ್ತದೆ. ಅಂತಹ ಎಲ್ಲಾ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುವ ಒಂದು ಆಹಾರವೆಂದರೆ ಮೀನು. ಮಾಂಸಹಾರ ಪ್ರಿಯರಿಗೆ ಮೀನು ಫೇವರೆಟ್ ಆದರೂ, ಇದರಿಂದ ಸಿಗುವ ಪ್ರಯೋಜನ ಕೇಳಿದ್ರೆ ಪ್ರತಿಯೊಬ್ಬರೂ ಅಚ್ಚರಿ ಪಡುತ್ತಾರೆ. ಹಾಗಾದರೆ ನೀವು ಚಳಿಗಾಲದಲ್ಲಿ ಏಕೆ ಮೀನು ಸೇವಿಸಬೇಕು ಎಂಬುದನ್ನು ಇಲ್ಲಿ ನೋಡೋಣ.

ಚಳಿಗಾಲದಲ್ಲಿ ಮೀನು ಸೇವನೆಯಿಂದ ಸಿಗುವ ಆರೋಗ್ಯ ಲಾಭಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಆರೋಗ್ಯಕರ ಹೃದಯ:

ಮೀನಿನಲ್ಲಿ ಶೂನ್ಯ ಸ್ಯಾಚುರೇಟೆಡ್ ಕೊಬ್ಬು ಇದೆ ಎಂದು ಸಾಬೀತಾಗಿದೆ. ಅದಕ್ಕಾಗಿಯೇ ಇದು ಹೃದಯಕ್ಕೆ ಒಳ್ಳೆಯದು. ತಜ್ಞರ ಪ್ರಕಾರ ವಾರಕ್ಕೊಮ್ಮೆ ಮೀನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡಬಹುದು. ಆದ್ದರಿಂದ ಹೃದಯ ಸಮಸ್ಯೆಯಿದ್ದರೆ, ವೈದ್ಯರ ಬಳಿ ಮಾತನಾಡಿ, ಮೀನು ಸೇವನೆ ಮಾಡಬಹುದು. 

ಜೀವಸತ್ವಗಳ ಮೂಲ:

ಮೀನಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್-ಡಿ ಇದೆ. ಇದು ಇತರ ಪೋಷಕಾಂಶಗಳನ್ನು ದೇಹದಿಂದ ಹೀರಿಕೊಳ್ಳಲು ಸಹಾಯ ಮಾಡುವುದಲ್ಲದೇ, ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರಿಸುತ್ತದೆ. ಜೊತೆಗೆ ಇತರ ರೋಗಗಳಿಂದ ರಕ್ಷಣೆ ನೀಡುತ್ತದೆ.

ಕಣ್ಣುಗಳಿಗೆ ಪ್ರಯೋಜನಕಾರಿ:

ಇದು ಬಹಳ ಹಿಂದಿನಿಂದಲೂ ಕೇಳಿಕೊಂಡು ಬಂದ ವಿಚಾರ. ಮೀನು ಕಣ್ಣು ಹಾಗೂ ದೃಷ್ಟಿ ಸುಧಾರಣೆಗೆ ಉತ್ತಮವೆಂಬುದು. ಆರೋಗ್ಯಕರ ಕಣ್ಣುಗಳಿಗೆ ಸಾಕಷ್ಟು ಒಮೆಗಾ -3 ಕೊಬ್ಬಿನಾಮ್ಲಗಳು ಬೇಕಾಗುತ್ತವೆ. ಏಜೆನ್ಸಿ ಫಾರ್ ಹೆಲ್ತ್ಕೇರ್ ರಿಸರ್ಚ್ ಅಂಡ್ ಕ್ವಾಲಿಟಿ ಪ್ರಕಾರ, ಮೀನುಗಳು ಹೆಚ್ಚಿನ ಪ್ರಮಾಣದ ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ. ಈ ಮೂಲಕ ಕಣ್ಣುಗಳನ್ನು ಆರೋಗ್ಯಕರವಾಗಿಡುತ್ತದೆ.

ಒತ್ತಡವನ್ನು ಕಡಿಮೆಮಾಡುವುದು:

ಸೂರ್ಯ ಕಡಿಮೆಯಿರುವ ಚಳಿಗಾಲದ ದಿನಗಳು ನಿಮಗೆ ದುಃಖವನ್ನುಂಟುಮಾಡುತ್ತಿದ್ದರೆ, ಮೀನುಗಳನ್ನು ತಿನ್ನಲು ಪ್ರಾರಂಭಿಸಿ. ದಿ ಜರ್ನಲ್ ಆಫ್ ಸೈಕಿಯಾಟ್ರಿ ಅಂಡ್ ನ್ಯೂರೋಸೈನ್ಸ್ ಪ್ರಕಾರ, ಮೀನು ಮತ್ತು ಮೀನಿನ ಎಣ್ಣೆಯ ನಿಯಮಿತ ಸೇವನೆಯು ಖಿನ್ನತೆಯ ಲಕ್ಷಣಗಳನ್ನು ಸುಧಾರಿಸುತ್ತದೆ.

ಒಮೆಗಾ 3 ಕೊಬ್ಬಿನಂಶ

ತಜ್ಞರ ಪ್ರಕಾರ, ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಉತ್ತಮ ಕೊಬ್ಬುಗಳು ಸಮೃದ್ಧವಾಗಿವೆ. ಇವು ಮೆದುಳು ಮತ್ತು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ.

ಸಂಧಿವಾತದ ವಿರುದ್ಧ ಹೋರಾಡುವುದು:

ಚಳಿಗಾಲದ ದಿನಗಳು ಮತ್ತು ಸಂಧಿವಾತ ನೋವಿನ ನಡುವೆ ದೀರ್ಘಾವಧಿಯ ಸಂಬಂಧವಿದೆ. ಈ ನೋವಿನ ಬಂಧವನ್ನು ಮುರಿಯಲು ಉತ್ತಮ ಮಾರ್ಗವೆಂದರೆ ಮೀನುಗಳನ್ನು ಸೇವಿಸುವುದು. ಒಮೆಗಾ -3 ಕೊಬ್ಬಿನಾಮ್ಲಗಳು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮತ್ತು ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡುವ ಮೂಲಕ ಅಂತಹ ಪರಿಸ್ಥಿತಿಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಕೆಮ್ಮು ಮತ್ತು ಶೀತಗಳ ವಿರುದ್ಧ ಹೋರಾಡುವುದು:

ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಶ್ವಾಸಕೋಶಕ್ಕೆ ಗಾಳಿಯ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಮೂಲಕ ನಿಮ್ಮ ಶ್ವಾಸಕೋಶವನ್ನು ಸೋಂಕಿನಿಂದ ಮುಕ್ತವಾಗಿಡುತ್ತದೆ ಮತ್ತು ಶೀತ ವಾತಾವರಣದಲ್ಲಿ ಶೀತ ಮತ್ತು ಜ್ವರದ ವಿರುದ್ಧ ಹೋರಾಡುತ್ತದೆ.

ಚರ್ಮಕ್ಕೆ ಒಳ್ಳೆಯದು:

ಚಳಿಗಾಲದಲ್ಲಿ ನಾವು ಸಾಮಾನ್ಯವಾಗಿ ಒಣ ತ್ವಚೆಯ ಬಗ್ಗೆ ದೂರು ನೀಡುತ್ತೇವೆ. ಮೀನಿನಲ್ಲಿ ಕಂಡುಬರುವ ಒಮೆಗಾ -3 ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ನಿಮ್ಮ ಚರ್ಮದ ಮೇಲಿನ ಪದರ ಮತ್ತು ಪರಿಸರದ ನಡುವೆ ತಡೆಗೋಡೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಶುಷ್ಕತೆಯನ್ನು ತಡೆಯುತ್ತದೆ.