ಕೊರೊನದ ಹೊಸ ಅಧ್ಯಾಯ ಮಾಡಿದ ಸಂಶೋಧಕರು ಈ 3 ವರ್ಗದ ಜನರಿಗೆ ವೈರಸ್ ಹಾವಳಿ ಕಮ್ಮಿಯಂತೆ..!

Updated: Wednesday, April 28, 2021, 19:17 [IST]

ಸ್ಪೇನ್, ಚೀನಾ, ಫ್ರಾನ್ಸ್, ಇಟೆಲಿ, ಅಮೆರಿಕ ಹಾಗೂ ನಮ್ಮ ಭಾರತ ದೇಶದ ವೈದ್ಯರು ಮತ್ತು ಸಂಶೋಧಕರು ಕೊರೊನಾ ವೈರಸ್ ವಿಷಯಕ್ಕೆ ಸಂಬಂಧಿಸಿದಂತೆ ಮೊನ್ನೆ ಅಧ್ಯಯನ ನಡೆಸಿದ್ದು ಬಳಿಕ ವರದಿಯನ್ನು ನೀಡಿದ್ದಾರೆ ಎಂದು ಕೇಳಿಬಂದಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ನಲ್ಲಿಯೇ ಈ ಅಧ್ಯಯನ ಮಾಡಿದ್ದು ಇದೀಗ ವರದಿ ಲಭ್ಯವಾಗಿದೆ. ಸುಮಾರು 140 ಜನರು ವೃತ್ತಿಪರ ವೈದ್ಯರು ಹಾಗೆ  ಸಂಶೋಧನಾ ವಿಜ್ಞಾನಿಗಳು ಸಹ ಈ ಅಧ್ಯಯನದಲ್ಲಿ ತೊಡಗಿದ್ದರು. ಹಾಗೆ ಒಟ್ಟು 10,427 ಜನರನ್ನು ಹಾಗೆ ಈ  ಜನರುಗಳ ಪೂರ್ತಿ ಕುಟುಂಬದ ಸದಸ್ಯರನ್ನ ಸಹ ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು..    

ಸಿ.ಎಸ್.ಐ.ಆರ್ ನೀಡಿದ ಅಧ್ಯಯನದ ರೀತಿಯೇ ಕೆಲ ದಿನಗಳ ಹಿಂದೆಯಷ್ಟೇ ಅತ್ತ ಅಮೆರಿಕಾ ಮೂಲದ ಸಂಸ್ಥೆ ಒಂದು ವರದಿಯನ್ನು ಕೊಟ್ಟಿತ್ತು. ಅಮೇರಿಕಾದ ಇದೆ ಅಧ್ಯಯನದಲ್ಲಿ ಒಟ್ಟು 7000 ಜನರು ಪಾಲ್ಗೊಂಡಿದ್ದರು ಎನ್ನಲಾಗಿ ತಿಳಿದುಬಂದಿದೆ.

ಯಾವ ರಕ್ತದ ಗ್ರೂಪ್‌ ಜನರಿಗೆ ಈ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತದೆ. ಹಾಗೆ ಯಾವ ಗ್ರೂಪ್ ವ್ಯಕ್ತಿಗೆ ವೈರಸ್ ಬಹು ಬೇಗನೆ ಅಂಟೋ ಸಾಧ್ಯತೆ ಇರುತ್ತದೆ. ಹಾಗೆ ಸಸ್ಯಾಹಾರವನ್ನ ಈ ಸಮಯದಲ್ಲಿ ಸೇವನೆ ಮಾಡಿದ್ರೆ ಉತ್ತಮನಾ ಅಥವಾ ಇಲ್ವಾ ಎಂಬುದರ ಬಗ್ಗೆ ಸಿ.ಎಸ್.ಐ.ಆರ್ ಸೆರೋ ಇದೀಗ  ಪೂರ್ತಿ ಅಧ್ಯಯನ ಮಾಡಿದ್ದು ಅದರ ವರದಿ ಹೀಗಿದೆ ನೋಡಿ...  

ಸಿ.ಎಸ್.ಐ.ಆರ್ ಸೆರೋ ನಡೆಸಿದ ಅಧ್ಯಯನದ ವರದಿ ಪ್ರಕಾರ, ವೈರಸ್ ಈ 2 ಗ್ರೂಪ್‌ನವರಿಗೆ ಬಹು ಬೇಗನೆ ಅಂಟಬಹುದಂತೆ. ಬಿ ಹಾಗೂ ಎಬಿ ರಕ್ತಕಣದವರಿಗೆ ಈ ವೈರಸ್ ಹೆಚ್ಚು ಬೇಗನೆ ಅಂಟುವ ಸಾಧ್ಯತೆ ಇದೆಯಂತೆ. ಸಿರೊ-ಪಾಸಿಟಿವಿಟಿ ಹೆಚ್ಚು ಇರುವುದಕ್ಕೆ ಈ ಎರಡು ಬ್ಲಡ್ ಗ್ರೂಪ್‌ನವರಿಗೆ ವೈರಸ್ ಪ್ರಭಾವ ಹೆಚ್ಚಾಗಿರುತ್ತದೆ. ಆ ಕಾರಣಕ್ಕೆ ಫ್ರಾನ್ಸ್ ಮತ್ತು ಇಟೆಲಿಯಲ್ಲಿ ನಡೆಸಲಾದ ಈ ರೀತಿಯ ಅಧ್ಯಯನದಲ್ಲೂ ಸಹ ಇದೇ ವರದಿ ಮೊನ್ನೆ ಬಂದಿದೆ ಎಂದು ಸಿ.ಎಸ್.ಐ.ಆರ್ ಹೇಳಿದೆ.

ಸಸ್ಯಾಹಾರಿಗಳಿಗೆ ಬಹು ವೇಗವೇ ವೈರಸ್ ಅಂಟೋದಿಲ್ಲ 
ಯಾಕೆಂದರೆ ಸಿರೊ ಪಾಸಿಟಿವಿಟಿ ತುಂಬಾ ಕಡಿಮೆ  ಇರುತ್ತದಂತೆ. ಹಾಗೆ ಸಾಮಾನ್ಯವಾಗಿ ಸಸ್ಯಾಹಾರಿಗಳು ಸೇವನೆ ಮಾಡುವ ಆಹಾರದಲ್ಲಿ ನಾರಿನ ಅಂಶವೆ ಹೆಚ್ಚು ಇರುವುದಕ್ಕೆ ಹಾಗೇ ಈ ರೋಗ ನಿರೋಧಕ ಅಂಶವೆ ಸಸ್ಯಾಹಾರಿ ಪದಾರ್ಥಗಳಲ್ಲಿ ಹೆಚ್ಚು ಇರುವುದಕ್ಕೆ ಈ ವೈರಸ್ ಅಷ್ಟಾಗಿ ಬಹು ಬೇಗ ಅಂಟಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ...

ಧೂಮಪಾನಿಗಳಿಗೂ ಸಹ ಈ ವೈರಸ್ ನಿಂದ ಸೇಫ್ ಎಂದು ಅಧ್ಯಯನದ ಮೂಲಕ ತಿಳಿದುಬಂದಿದೆ. ಹೌದು ಧೂಮಪಾನಿಗಳಿಗೂ ಧೂಮಪಾನ ಮಾಡುವಾಗ ಅವರ ಶ್ವಾಸಕೋಶದಲ್ಲಿ ತೊಂದರೆಯಾದ್ರೂ, ಈ ಕೊರೊನ ವೈರಸ್ ತಡೆಯುವ ಕಾರ್ಯವನ್ನು ಅದು ಮಾಡುತ್ತದೆ ಎಂದು ಕೇಳಿಬಂದಿದ್ದು, ಈ ಮುಂಚೆಯೇ ಅಮೆರಿಕದ ಸಂಸ್ಥೆ ಸಹ ತಮ್ಮ ಅಧ್ಯಯನದಲ್ಲಿ ಈ ವಿಚಾರವನ್ನ  ಪ್ರಸ್ತಾಪ ಮಾಡಿ ಹೇಳಿತ್ತು ಎಂದು ಕೇಳಿ ಬಂದಿದೆ...

ಹಾಗೆ ಇನ್ನ ಈ ಒ (O) ರಕ್ತದ ಗ್ರೂಪಿನವರೂ ಖುಷಿ ಪಡುವ ವಿಚಾರ ಏನು ಅಂದ್ರೆ,  ಈ ಬ್ಲಡ್  ಗ್ರೂಪ್‌ ಹೊಂದಿರುವವರಿಗೆ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಇರುತ್ತದಂತೆ. ಸಿರೊ ಪಾಸಿಟಿವಿಟಿ ಕಮ್ಮಿ ಇರುವುದು  ಇದಕ್ಕೆ ಕಾರಣವೆಂದು ಅಧ್ಯಯನ ಮಾಡಿದ ಬಳಿಕ ಈ  ವರದಿಯಲ್ಲಿ ಉಲ್ಲೇಖವಾಗಿದೆ....