ಕೊರೊನಾ ಓಡಿಸಲು ಗಿರಿಧರ್ ಕಜೆ ಸರಳ ಸೂತ್ರ ಇಲ್ಲಿದೆ ನೋಡಿ..

Updated: Monday, April 19, 2021, 13:31 [IST]

ಕೊರೊನಾ ಮಹಾಮಾರಿಯಿಂದ ಜನ ಬಳಲಿ ಹೋಗಿದ್ದು, ಆಯುರ್ವೇದ ತಜ್ಞರಾದ ಡಾ. ಗಿರಿಧರ್ ಕಜೆ ಅವರು ಮನೆಯಲ್ಲೇ ಔಷಧಿ ತಯಾರಿಸಿಕೊಳ್ಳುವುದು ಹೇಗೆಂದು ತಿಳಿಸಿದ್ದಾರೆ. 
ಕೊರೊನಾ ಜ್ವರ ಬಂದರೆ, ಮನೆಯಲ್ಲೇ ಕೆಲ ಪಾನೀಯ, ಗ್ರೀನ್ ಟೀ ಗಳನ್ನು ತಯಾರಿಸಿಕೊಂಡರೆ, ವೈರಸ್ ಗಳಿಂದ ದೂರ ಉಳಿಯಬಹುದು ಎಂದು ಹೇಳಿದ್ದಾರೆ. ಆಯುರ್ವೇದ ಪಾನೀಯ ತಯಾರಿಸಿಕೊಳ್ಳುವುದು ಹೇಗೆ, ಅದಕ್ಕೆ ಏನೆಲ್ಲಾ ಬೇಕು ಮಾಹಿತಿ ಇಲ್ಲಿದೆ ನೋಡಿ..

ಒಂದು ಲೀಟರ್ ನೀರಿಗೆ 5 ದಳ ತುಳಸಿ ಸೇರಿಸಿ ಕುದಿಸಿ ಕುಡಿಯುವುದು. ಇದು ವೈರಲ್ ನಿಂದ ಹೋರಾಡಲು ಸಹಾಯ ಮಾಡುತ್ತದೆ.  

ಬೆಟ್ಟದ ನಲ್ಲಿಕಾಯಿ ಅಥವಾ ಆಮಲಕ್ಕಿ ಚೂರ್ಣ ಬಾಯಿಗೆ ಹಾಕಿಕೊಳ್ಳುವುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

3 ಹಿಪ್ಪಲಿಯನ್ನು ಪೌಡರ್ ಮಾಡಿ ಜೇನು ತುಪ್ಪದೊಂದಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿಸೇರಿಸಿ ಸೇವಿಸುವುದು. ಇದನ್ನು 10 ದಿನ ತೆಗೆದುಕೊಳ್ಳಬೇಕು. ಬಳಿಕ 10 ದಿನ ಬ್ರೇಕ್ ಕೊಟ್ಟು ಮತ್ತೆ ತೆಗೆದುಕೊಳ್ಳಬೇಕು.   

ಷಡಾಂಗ ಪಾನಿ: ಭದ್ರ ಮುಷ್ಠಿ, ಪರ್ಪಟಕ ಪೌಡರ್, ಉಶೀರಾ ಅಥವಾ ಲಾವಂಚ, ಉದೀಚಾ, ಶುಂಠಿ, ಚಂದನ. ಇದಿಷ್ಟನ್ನು  2 ಗ್ರಾಂ ನಂತೆ ತೆಗೆದುಕೊಂಡು, 3 ಲೀಟರ್ ನೀರಿಗೆ ಹಾಕಿ ಕುದಿಸಬೇಕು. ಒಂದೂವರೆ ಲೀಟರ್ ಆಗುವವರೆಗೂ ಕುದಿಸಿ ತಣ್ಣಗಾದ ಮೇಲೆ ಇಡೀದುನ ಸೇವಿಸ ಬೇಕು. 

ನೆಲನೆಲ್ಲಿ, ಭದ್ರ ಮುಷ್ಠಿ ಅಥವಾ ಅಮೃತಬಳ್ಳಿ ಎಲೆ. ಈ ಮೂರರಲ್ಲಿ ಯಾವುದಾದರೂ ಒಂದರ ಗ್ರೀನ್ ಟೀ ಮಾಡಿಕೊಂಡು ಬಳಸಬಹುದು.