ರಂಜಾನ್ ತಿಂಗಳಲ್ಲಿ ನೀವು ಉಪವಾಸ ಮಾಡುತ್ತಿದ್ದೀರಾ!! ಹಾಗಾದರೆ ರೋಗನಿರೋಧಕ ಶಕ್ತಿಯನ್ನು ವೃದ್ದಿಸುವುದು ಹೇಗೆ?

By Infoflick Correspondent

Updated:Tuesday, April 5, 2022, 20:04[IST]

ರಂಜಾನ್ ತಿಂಗಳಲ್ಲಿ ನೀವು ಉಪವಾಸ ಮಾಡುತ್ತಿದ್ದೀರಾ!! ಹಾಗಾದರೆ ರೋಗನಿರೋಧಕ ಶಕ್ತಿಯನ್ನು ವೃದ್ದಿಸುವುದು ಹೇಗೆ?

ರಂಜಾನ್ ಮುಸ್ಲಿಂರ ಪವಿತ್ರ ತಿಂಗಳು. ಇಸ್ಲಾಮಿಕ್ ಕ್ಯಾಲೆಂಡರ್‌ನ 9ನೇ ತಿಂಗಳೇ ರಂಜಾನ್. ಈ ತಿಂಗಳಿನಲ್ಲಿ ಮುಸ್ಲಿಂರ ಪವಿತ್ರ ಗ್ರಂಥ ಕುರಾನ್ ಸ್ವರ್ಗ ಲೋಕದಿಂದ ಭೂಮಿಗೆ ಬಂದಿದ್ದು, ಅದನ್ನು ಪ್ರವಾದಿ ಮೊಹಮ್ಮದ್ ಮುಸ್ಲಿಂರಿಗೆ ಪರಿಚಯಿಸಿದ್ದು ಎಂಬ ನಂಬಿಕೆ ಇದೆ.

ಈ ಪವಿತ್ರ ತಿಂಗಳಿನಲ್ಲಿ ಮಾಡುವ ಉಪವಾಸಕ್ಕೆ ತುಂಬಾನೇ ಮಹತ್ವವಿದೆ. ಈ ತಿಂಗಳಿನಲ್ಲಿ ಸಹಾರ್‌ ಅಂದ್ರೆ ಸೂರ್ಯದಕ್ಕೆ ಮುನ್ನ ಆಹಾರ ಸೇವಿಸಿ ನಂತರ ದಿನಪೂರ್ತಿ ಉಪವಾಸವಿದ್ದು ಇಫ್ತಾರ್ ಅಂದ್ರೆ ಸಂಜೆ ಉಪವಾಸ ಮುರಿಯುತ್ತಾರೆ.

12 ಗಂಟೆಗಿಂತಲೂ ಅಧಿಕ ಕಾಲ ಒಂದು ಗುಟುಟಕು ನೀರು ಕುಡಿಯದೆ ಅಷ್ಟೇ ಏಕೆ ಎಂಜಲು ಕೂಡ ನುಂಗದೆ ಕಟ್ಟುನಿಟ್ಟಿನ ಉಪವಾಸ ಮಾಡಬೇಕು. ಈ ವರ್ಷದ ಸವಾಲೆಂದರೆ ಉಪವಾಸದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಈ ಕೋವಿಡ್ 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅಥವಾ ಕುಂದದಂತೆ ನೋಡುವುದು ತುಂಬಾನೇ ಮಹತ್ವದಾಗಿದೆ.

ಸಹರ್ ಮತ್ತು ಇಫ್ತಾರ್ ಸಮಯದಲ್ಲಿ:

ಉಪವಾಸ ಮಾಡುವಾಗ ಎರಡು ಹೊತ್ತು ಮಾತ್ರ ಆಹಾರ ಸೇವಿಸಲಾಗುವುದು. ಆಗ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಜೀರ್ಣಕ್ರಿಯೆಗೆ ಸಹಕಾರಿಯಾದ ಆಹಾರ ಸೇವಿಸಬೇಕು. ಸಹಾರ್ ಹಾಗೂ ಇಫ್ತಾರ್ ಸಮಯದಲ್ಲಿ ದೇಹದ ರೋಗ ನಿರೋಧಕ ವ್ಯವಸ್ಥೆ ತುಂಬಾ ಆ್ಯಕ್ಟಿವ್ ಆಗಿರುತ್ತದೆ. ಆದ್ದರಿಂದ ಸಹಾರ್ ಸಮಯದಲ್ಲಿ ಎದ್ದು ಆಹಾರ ಸೇವಿಸಬೇಕು, ಇಲ್ಲದಿದ್ದರೆ ತುಂಬಾ ಹೊತ್ತು ಹಸಿವಿನಿಂದ ಇರುವುದರಿಂದ ರೋಗ ನಿರೋಧಕ ಶಕ್ತಿ ಕುಗ್ಗುವುದು.

ಕರಿದ ಪದಾರ್ಥಗಳನ್ನು ಸೇವಿಸಬೇಡಿ:

ರಂಜಾನ್ ತಿಂಗಳಿನಲ್ಲಿ ವಿಶೇಷ ಪದಾರ್ಥಗಳನ್ನು ತಯಾರಿಸಲಾಗುವುದು. ಆದರೆ ಕರಿದ ಪದಾರ್ಥಗಳನ್ನು ಕಡಿಮೆ ತಿನ್ನುವುದು ಒಳ್ಳೆಯದು. ಅದರಲ್ಲೂ ಮಧುಮೇಹ, ಹೃದಯ ಸಮಸ್ಯೆ ಇರುವವರು ಕರಿದ ಪದರ್ಥಗಳನ್ನು ದೂರವಿಡುವುದು ಒಳ್ಳೆಯದು. ಇದು ನಿಮ್ಮ ತೂಕ ನಿಯಂತ್ರಣಕ್ಕೆ ತುಂಬಾನೇ ಸಹಕಾರಿಯಾಗಿದೆ.

ಅಧಿಕ ನಾರಿನಂಶವಿರುವ ಹಣ್ಣುಗಳನ್ನು ಸೇವಿಸಿ, ಇದು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಅಲ್ಲದೆ ಜೀರ್ಣಕ್ರಿಯೆಗೆ ಸಹಕಾರಿಯಾದ ಬ್ಯಾಕ್ಟಿರಿಯಾ ಚಟುವಟಿಕೆ ಉತ್ತಮವಾಗಿರುತ್ತದೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ

ರಂಜಾನ್ ತಿಂಗಳಿನಲ್ಲಿ ಇಫ್ತಾರ್ ಆಹಾರಕ್ಕೆ ವಿವಿಧ ಬಗೆಯ ಭಕ್ಷ್ಯಗಳಿರುತ್ತದೆ. ಈ ಸಮಯದಲ್ಲಿ ಆರೋಗ್ಯಕರ ಆಹಾರಕ್ಕೆ ಗಮನ ನೀಡುವುದು ಒಳ್ಳೆಯದು. ನೀವು ಉಪವಾಸ ಮುರಿದ ಬಳಿಕ ಸೂಪ್ ತೆಗೆದುಕೊಂಡು 15 ನಿಮಿಷ ಬಿಟ್ಟು ಆಹಾರ ಸೇವಿಸಬೇಕು. ಸೂಪ್ ತೆಗೆದುಕೊಂಡು ನಂತರ ಆಹಾರ ಸೇವಿಸಿದರೆ ಇದು ತೃಪ್ತಿಯ ಭಾವನೆ ನೀಡುವುದರ ಜೊತೆಗೆ ಇದ್ದಕ್ಕಿದ್ದಂತೆ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟುವಲ್ಲಿ ಸಹಕಾರಿ.

ಆಹಾರವನ್ನು ಆಯ್ಕೆ ಮಾಡಿ

ರಂಜಾನ್ ಉಪವಾಸ ಮಾಡುವವರು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಅಲ್ಲದೆ ದಿನಾ ಪೂರ್ತಿ ದೇಹಕ್ಕೆ ಅವಶ್ಯಕವಿರುವ ಪೋಷಕಾಂಶವಿರುವ ಆಹಾರ ಸೇವಿಸಬೇಕು. ನಿಮ್ಮ ಆಹಾರದಲ್ಲಿ ಧಾನ್ಯಗಳು, ಹಣ್ಣುಗಳು, ತರಕಾರಿ, ಕಾಳುಗಳು, ನಟ್ಸ್, ಹಾಲಿನ ಉತ್ಪನ್ನಗಳು ಹಾಗೂ ಪ್ರೊಟೀನ್‌ ಅಂಶವಿರುವ ಆಹಾರ ಸೇವಿಸಬೇಕು. ನ್ಯೂಟ್ರಿಷಿಯನ್ ಸೂಪ್, ಮೊಟ್ಟೆ, ಚೀಸ್, ಆಲೀವ್, ಹಸಿರು ಸೊಪ್ಪು, ಸೌತೆಕಾಯಿ, ಟೊಮೆಟೊ, ಓಟ್‌ಮೀಲ್

ನೀರು

ದಿನದಲ್ಲಿ 8 ಲೋಟ ನೀರು ಅವಶ್ಯಕ, ಆದರೆ ಉಪವಾಸದ ಸಮಯದಲ್ಲಿ ಅಷ್ಟು ಕುಡಿಯಲು ಆಗುವುದಿಲ್ಲ, ಆದರೆ ತೀರಾ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ. ಕೆಫೀನ್ ಅಂಶವಿರುವ ಟೀ, ಕಾಫಿ ಕಡಿಮೆ ಮಾಡಿ, ಇದು ದೇಹದಲ್ಲಿ ನೀರಿನಂಶ ಮತ್ತಷ್ಟು ಕಡಿಮೆ ಮಾಡುತ್ತದೆ. ನೀರು, ತಾಜಾ ಹಣ್ಣಿನ ಜ್ಯೂಸ್‌ ಕುಡಿಯಿರಿ.

ವ್ಯಾಯಾಮ 

ಉಪವಾಸ ಮಾಡುವಾಗ ವ್ಯಾಯಾಮ ಮಾಡಬಹುದೇ ಎಂದು ನೋಡುವುದಾದರೆ ತಜ್ಞರ ಪ್ರಕಾರ 30 ನಿಮಿಷದ ಲಘು ವ್ಯಾಯಾಮ ಜೀರ್ಣಕ್ರಿಯೆಗೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಇಫ್ತಾರ್ ಊಟದ ಬಳಿಕ ಸ್ವಲ್ಪ ನಡೆಯುವ ವ್ಯಾಯಾಮ ಒಳ್ಳೆಯದು.