ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳಿಗೆ ಸಿಗಲಿದೆ ಸೂಜಿರಹಿತ ಲಸಿಕೆ: ಜೈಕೋವ್-ಡಿ ವ್ಯಾಕ್ಸಿನ್‌ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ ಇಲ್ಲಿದೆ..

By Infoflick Correspondent

Updated:Friday, October 8, 2021, 18:43[IST]

ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳಿಗೆ ಸಿಗಲಿದೆ ಸೂಜಿರಹಿತ ಲಸಿಕೆ: ಜೈಕೋವ್-ಡಿ ವ್ಯಾಕ್ಸಿನ್‌ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ ಇಲ್ಲಿದೆ..

ಉತ್ಸಾಹದಿಂದ ಶಾಲೆಗಳಿಗೆ ತೆರಳುತ್ತಿದ್ದಾರೆ. ಒಂದೂವರೆ ವರ್ಷದ ಬಳಿಕ ಶಾಲೆಗಳು ಪ್ರಾರಂಭವಾಗಿದ್ದು, ಜನ ಜೀವನ ಕೂಡ ಮೊದಲಿನ ಸ್ಥಿತಿಗೆ ಆಗಮಿಸುತ್ತಿದೆ. ಜನಸಾಮಾನ್ಯರಿಗೆ ಈಗಾಗಲೇ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌, ಸ್ಪುಟ್ನಿಕ್‌ ಸೇರಿದಂತೆ ಹಲವು ಲಸಿಕೆಗಳು ಲಭ್ಯವಾಗಿದ್ದು, ಇದೀಗ ಮಕ್ಕಳಿಗೂ ಲಸಿಕೆ ತಯಾರಿಸಲಾಗಿದೆ. .

ಜೈಡಸ್‌ ಕ್ಯಾಡಿಲಾ ಸಂಸ್ಥೆ 12 ವರ್ಷದಿಂದ 18 ವರ್ಷದ ಮಕ್ಕಳಿಗೆ ಲಸಿಕೆಯನ್ನು ತಯಾರಿಸಿದೆ. ಜೈಕೋವ್-ಡಿ ಲಸಿಕೆಯ ಪ್ರಯೋಗಗಳು ನಡೆದಿದ್ದು, ಸಕ್ಸಸ್‌ ಆಗಿದೆ. ಇನ್ನು ಮಕ್ಕಳಿಗೆ ಲಸಿಕೆ ವಿತರಿಸುವುದೊಂದೆ ಬಾಕಿ ಇದೆ. ಲಸಿಕೆಗೆ ಹಣ ನಿಗದಿಪಡಿಸುವ ಸಲುವಾಗಿ ಕೇಂದ್ರದಲ್ಲಿ ಚರ್ಚೆ ನಡೆಯುತ್ತಿದೆ. ಶೀಘ್ರವೇ ಲಸಿಕೆಗೆ ಬೆಲೆ ನಿಗದಿಪಡಿಸಿ ಲಸಿಕೆ ಅಭಿಯಾನಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳೀಸಿದೆ. ಅಲ್ಲದೇ ಆಗಸ್ಟ್‌ 20ರಂದೇ ಔಷಧಿಯ ತುರ್ತು ಬಳಕೆಗೆ ಸರ್ಕಾರ ಅನುಮತಿ ನೀಡಿತ್ತು. ಮುಂದಿನ ತಿಂಗಳಿಂದ ಲಸಿಕೆ ಸರಬರಾಜು ಆಗಲಿದೆ ಎಂದು ಜೈಡಸ್‌ ಸಂಸ್ಥೆ ತಿಳಿಸಿದೆ. 

ಜೈಕೋವ್-ಡಿ ಲಸಿಕೆ ಮೊದಲ ಪ್ಲಾಸ್ಮಿಡ್‌ ಡಿಎನ್‌ ಎ ಲಸಿಕೆ ಎಂದು ಕರೆಸಿಕೊಂಡಿದ್ದು, ಗುಜರಾತ್‌ ನ ಅಹಮದಾಬಾದ್‌ ನಲ್ಲಿ ಕ್ಯಾಡಿಲಾ ಹೆಲ್ತ್‌ ಕೇರ್‌ ಸಂಸ್ಥೆ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ. ಈ ಲಸಿಕೆ ಸೂಜಿರಹಿತವಾಗಿದ್ದು, ಚರ್ಮಕ್ಕೆ ವ್ಯಾಕ್ಸಿನ್‌ ನೀಡಲಾಗುತ್ತದೆ. ಈ ಲಸಿಕೆಯ ದಕ್ಷತೆ ಶೇ.66.60ರಷ್ಟಿದೆ ಎಂದು ಸಂಸ್ಥೆ ತಿಳಿಸಿದೆ. ಜೆಟ್‌ ಇಂಜೆಕ್ಟರ್‌ ಅನ್ನು ಬಳಸಿ ಈ ಲಸಿಕೆಯನ್ನು ಮಕ್ಕಳ ಚರ್ಮದ ಕೋಶಗಳಿಗೆ ಚುಚ್ಚುವ ಔಷಧ ಇದಾಗಿದೆ. ಈ ಲಸಿಕೆಯನ್ನು ಮೂರು ಡೋಸ್‌ ನಲ್ಲಿ ನೀಡಲಾಗುತ್ತದೆ. ಮೊದಲ ಡೋಸ್‌ ಪಡೆದ 28 ದಿನಗಳಿಗೆ ಎರಡನೇ ಡೋಸ್‌ ಪಡೆಯಬೇಕು. ತದ ನಂತರ ಮೂರನೇ ಡೋಸ್‌ ಅನ್ನು 56ನೇ ದಿನಗಳಿಗೆ ಪಡೆಯಬೇಕು ಎಂದು ತಿಳಿದು ಬಂದಿದೆ. ಆದರೆ, ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದು ಬಂದಿಲ್ಲ. 

ಜೈಕೋವ್-ಡಿ ಲಸಿಕೆ ಮಕ್ಕಳಿಗೆ ತುಂಬಾ ಸುರಕ್ಷತೆಯುಳ್ಳ ವ್ಯಾಕ್ಸಿನ್‌ ಎಂದು ಹೇಳಲಾಗಿದೆ. ಇನ್ನು 2022ರ ಜನವರಿ ತಿಂಗಳ ವೇಳೆಗೆಕ್ಯಾಡಿಲಾ ಕಂಪನಿ ಪ್ರತಿ ತಿಂಗಳಿಗೆ 4ರಿಂದ 5 ಕೋಟಿ ಲಸಿಕೆಗಳನ್ನು ಉತ್ಪಾದನೆ ಮಾಡುವ ಗುರಿ ಹೊಂದಿರುವುದಾಗಿ ಹೇಳಿದೆ. ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಜೈಕೋವಿಡ್ ಜಂಟಿಯಆಗಿ ಇದೇ ಮೊದಲ ಬಾರಿಗೆ ಡಿಎನ್‌ಎ ಆಧಾರಿತ ಲಸಿಕೆಯನ್ನು ಸಿದ್ಧ ಪಡಿಸಲಾಗಿದೆ. ಈ ಲಸಿಕೆಯನ್ನು ಸಾರ್ಸ್‌, ಕೊರೊನಾ ರೋಗಿಗಳಲ್ಲಿ ಪ್ರೋಟಿನ್ ಅಂಶವನ್ನು ವೃದ್ಧಿಸಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.