ಕೊರೊನಾ ಬಂದವರು ಮೊದಲು ಮನೆಯಲ್ಲಿ ಹೀಗೆ ಚಿಕಿತ್ಸೆ ಮಾಡಿ.. : ವೈದ್ಯರಿಂದ ಸಲಹೆ

Updated: Thursday, April 29, 2021, 15:25 [IST]

ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸಮಾಧಾನದ ವಿಷಯವೆಂದರೆ ಅರ್ಧಕ್ಕರ್ಧ ಕೋವಿಡ್-19 ಪಾಸಿಟಿವ್ ಕೇಸ್ ಇರುವವರು ಹೆಚ್ಚಿನ ಚಿಕಿತ್ಸೆಯೇ ಇಲ್ಲದೆ ಗುಣಮುಖರಾಗುತ್ತಿದ್ದಾರೆ. ಅಲ್ಲದೇ, ರೋಗ ಲಕ್ಷಣಗಳು ಇವರಲ್ಲಿ ಬಹಳ ಕಡಿಮೆ ಇರುತ್ತವೆ ಅಥವಾ ಏನೂ ಇರುವುದೇ ಇಲ್ಲ. 

ವೃದ್ಧರು, ಮಕ್ಕಳು, ಬಿಪಿ, ಶುಗರ್, ಹೃದಯ ಸಮಸ್ಯೆಗಳು, ಕ್ಯಾನ್ಸರ್, ಉಸಿರಾಟದ ತೊಂದರೆ ಇರುವವರಲ್ಲಿ ಕೊರೋನಾ ಉಗ್ರ ರೂಪ ತಾಳಬಹುದು. ಉಳಿದಂತೆ ಬಹುತೇಕ ರೋಗಿಗಳಲ್ಲಿ ಹೀಗೆ ಬಂದು ಹಾಗೆ ಹೋಗುತ್ತದೆ. ಇವರಿಗೆ ಅಂಥ ವಿಶೇಷ ಚಿಕಿತ್ಸೆಯ ಅಗತ್ಯವಿಲ್ಲ.ಕೊರೋನಾ ಪಾಸಿಟಿವ್ ಬಂದವರು ಮನೆಯಲ್ಲಿ ಗಾಳಿಬೆಳಕು ಹೊಂದಿರುವ ಪ್ರತ್ಯೇಕ ಕೋಣೆಯೊಂದಿದ್ದು, ಅಟ್ಯಾಚ್ಡ್ ಬಾತ್ರೂಂ ಹಾಗೂ ಟಾಯ್ಲೆಟ್ ಇರಬೇಕು. ಅವರ ಸೇವೆಗೆ ಸದಾ ಸಿದ್ಧವಿರುವವರೊಬ್ಬರು ಇರಬೇಕು. ಇವರು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರೋಗಿಯ ತಾಪಮಾನ ಏರುಪೇರು, ಇತರೆ ಕಾಯಿಲೆ ಲಕ್ಷಣಗಳು ಕಂಡುಬಂದಲ್ಲಿ ವರದಿ ನೀಡುತ್ತಿರಬೇಕು.     

ಕುಟುಂಬದ ಸದಸ್ಯರೆಲ್ಲರೂ ಐಸೋಲೇಶನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇವರೆಲ್ಲರೂ ಫೇಸ್ ಮಾಸ್ಕನ್ನು ಧರಿಸಿಯೇ ಇರುವುದು ಕಡ್ಡಾಯ. ರೋಗಿಗೆ ಪ್ರತ್ಯೇಕ ತಟ್ಟೆಲೋಟಗಳನ್ನು ಬಳಸಬೇಕು. ಮನೆಯಲ್ಲಿರುವ ಮಕ್ಕಳು ಹಾಗೂ ವೃದ್ಧರು ರೋಗಿಯ ಸಂಪರ್ಕಕ್ಕೆ ಬರದಂತೆ ಕಟ್ಟೆಚ್ಚರ ವಹಿಸಬೇಕು. ಹೀಗೆ ಹೋಮ್ ಕೇರಿಂಗ್ ಇರುವಾಗ ಪಲ್ಸ್ ಆಕ್ಸಿಮೀಟರ್ ಕೊಳ್ಳಲು ಅವಕಾಶವಿದ್ದು, ಅದರ ಬಳಕೆಯನ್ನು ಆರೋಗ್ಯಾಧಿಕಾರಿಗಳು ವಿಡಿಯೋ ಕಾಲ್ ಮೂಲಕ ತಿಳಿಸಬೇಕು.

ಒಂದೊಮ್ಮೆ ನಿಮಗೆ ಕೊರೊನಾ ಇದ್ದರೂ ಪರೀಕ್ಷೆ ಬೇಡ ಎಂದು ತಜ್ಞ ವೈದ್ಯರು ಸಲಹೆ ಕೊಟ್ಟಿದ್ದಾರೆ. ಸಾಮಾನ್ಯ ನೆಗಡಿ, ಕೆಮ್ಮು, ಜ್ವರ ಇದ್ದರೂ ಯಾವುದೇ ಪರೀಕ್ಷೆ ಬೇಡ. ಪರೀಕ್ಷೆ ಮಾಡಿಸಿದರೆ ಕೊರೊನಾ ವೈರಸ್ ಸೋಂಕಿರುವುದು ದೃಢವಾಗುತ್ತದೆ. ಈಗಾಗಲೇ ಸಮುದಾಯಕ್ಕೆ ಸೋಂಕು ಹರಡಿರುವುದರಿಂದ ರೋಗ ನಿರೋಧಕ ಶಕ್ತಿ ಕೂಡ ನಮಗೆಲ್ಲ ಬಂದಿದೆ. ಆದರೆ ಜ್ವರ ಅಥವಾ ಬೇರಾವುದೇ ಲಕ್ಷಣಗಳೊಂದಿಗೆ ಉಸಿರಾಟದ ತೊಂದರೆ ಇದ್ದರೆ ಮಾತ್ರ ನೀವು ಆಸ್ಪತ್ರೆಗೆ ಹೋಗಿ ದಾಖಲಾಗಿ. ಅನಗತ್ಯವಾಗಿ ಆಸ್ಪತ್ರೆಗೆ ಹೋಗುವುದು ಬೇಡ ಎಂದು ತಜ್ಞರು ಹೇಳಿದ್ದಾರೆ.