ಒಳ ಉುಡುಪುಗಳನ್ನು ಹಿಡಿದು ಕುಣಿದ ಹಾಸ್ಟೆಲ್ ಗರ್ಲ್ಸ್..! ವಾರ್ಡನ್ ಮಾಡಿದ್ದೇನು ನೋಡಿ

ಒಳ ಉುಡುಪುಗಳನ್ನು ಹಿಡಿದು ಕುಣಿದ ಹಾಸ್ಟೆಲ್ ಗರ್ಲ್ಸ್..! ವಾರ್ಡನ್ ಮಾಡಿದ್ದೇನು ನೋಡಿ

ಇವತ್ತಿನ ದಿನಮಾನ ಅದು ಹೇಗಿದೆ ಎಂದರೆ, ಈ ಸೋಶಿಯಲ್ ಮೀಡಿಯಾದಲ್ಲಿ ತಾವು ಹೆಚ್ಚಾಗಿ ಪ್ರಸಿದ್ಧಿಯಾಗಲು, ಏನು ಬೇಕಾದರೂ ಮಾಡುತ್ತಾರೆ. ಇಲ್ಲಿಯವರೆಗೆ ನಾವು ನಾನಾ ರೀತಿಯ ಹೆಚ್ಚೆಚ್ಚು ಸಕತ್ ಫೋಟೋಗಳ ಹಾಗೂ ವಿಡಿಯೋಗಳನ್ನ ನೋಡಿದ್ದೇವೆ. ತುಂಬಾ ಕೆಟ್ಟದಾಗಿ ಅಲ್ಲದಿದ್ದರೂ ಕೂಡ ಜನರಿಗೆ ಕಿರಿಕಿರಿ ಬರುವಂತೆ ಕೆಲವರು ಕಂಡುಬಂದಿದ್ದಾರೆ. ಅಂಥಹವರ ನೋಡಿ ಇವರದೇನಪ್ಪಾ ಪ್ರತಿದಿನ ಇವರನ್ನೇ ನಾವು ನೋಡುವುದಾಯಿತಲ್ಲ ಎಂದು ನೆಟ್ಟಿಗರು ಸಾಕಷ್ಟು ಬಾರಿ ಅವರನ್ನು ಟ್ರೊಲ್ ಮಾಡಿದ್ದು ಉಂಟು. ಹೌದು ಅಂತಹ ಜನರ ಸಾಲಿಗೆ ಇದೀಗ ಮತ್ತೊಂದು  ಹುಡುಗಿಯರ ಗುಂಪು ಸೇರಿದ್ದು, ತುಂಬಾ ಕೆಟ್ಟದಾಗಿ ಇವರು ಕಾಣಿಸಿಕೊಂಡಿದ್ದಾರೆ ಎನ್ನಬಹುದು. ಹೆಣ್ಣನ್ನು ನಮ್ಮ ಭಾರತ ದೇಶದಲ್ಲಿ ತುಂಬಾ ಗೌರವದಿಂದ ಕಾಣುತ್ತೇವೆ.

ಹೆಣ್ಣನ್ನು ದೇವರಿಗೆ ಹೋಲಿಸುತ್ತೇವೆ. ನಮ್ಮ ಸಂಸ್ಕೃತಿ ಪ್ರಕಾರ ಹೆಣ್ಣು ಹೇಗಿರಬೇಕು ಹಾಗಿದ್ದರೇನೇ ನಮ್ಮ ದೇಶದಲ್ಲಿ ಚಂದ. ಅಂತಹದರಲ್ಲಿ ಹಾಸ್ಟೆಲ್ ನಲ್ಲಿ ಈ ಹುಡುಗಿಯರ ಗುಂಪು ತುಂಬಾ ಕೆಟ್ಟದಾಗಿ ಒಳ ಉಡಪು ಹಿಡಿದಿದ್ದಲ್ಲದೆ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬೇರೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಎಂದರೆ ಏನು, ಅವರಿಗೆ ದೊಡ್ಡ ವೇದಿಕೆ ಹುಡುಕಿಕೊಡಲು, ಹಾಗೆ ಅವರಲ್ಲಿರುವ ಚಾಣಾಕ್ಷತನದ ಕಲೆಯನ್ನು ಹೊರ ತರಲು ದೊಡ್ಡ ವೇದಿಕೆ ಕಲ್ಪಿಸಲು ಇದು ಉಪಯೋಗ ಆಗುತ್ತದೆ. ಆದರೆ ಇದನ್ನೇ ಕೆಲವರು ನಾವು ಅತಿ ಹೆಚ್ಚು ಫಾಲೋವರ್ಸ್ ಹೊಂದಬೇಕು, ನಮ್ಮನ್ನು ಕೂಡ ಸಾಕಷ್ಟು ಜನರು ಹಿಂಬಾಲಿಸಬೇಕು, ಹಾಗೆ ನಾವು ಜನರ ಬಳಿಗೆ ತಲುಪಬೇಕು ಎಂಬುದಾಗಿ ಈ ರೀತಿ ವರ್ತಿಸುವುದು ನೋಡಲು ಅಸಹ್ಯಕರ. ಇದು ಎಲ್ಲಿಯ ವಿಡಿಯೋ ಎಂಬುದಾಗಿ ತಿಳಿದು ಬಂದಿಲ್ಲ, ಬದಲಿಗೆ ನಮ್ಮ ರಾಜ್ಯದಲ್ಲಂತೂ ಇದು ನಿಜ ನಡೆದಿಲ್ಲ ಎಂಬುದಾಗಿ ಸ್ಪಷ್ಟವಾಗಿ ಹೇಳಬಹುದು.  

ಅದು ಭಾಷೆಯ ಆಧಾರಿತ ಮೇಲೆ ಹೇಳಬಹುದು. ಇತ್ತೀಚಿಗೆ ನಟಿ ತಮನ್ನ ಸ್ಟೆಪ್ ಹಾಕಿದ್ದ ಒಂದು ಹಾಡು ತುಂಬಾ ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಅದರ ಹೆಚ್ಚು ವಿಡಿಯೋಗಳನ್ನು ನೀವು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈಗಾಗಲೇ ನೋಡಿರಬಹುದು. ಆದ್ರೆ ಈ ಹುಡುಗಿಯರ ಗುಂಪು ಒಳಉಡುಪನ್ನು ಕೈಯಲ್ಲಿ ಹಿಡಿದು, ಹಾಸ್ಟೆಲ್ ನಲ್ಲಿ 'ಕಾವಲಂ ಚಡ್ಡಿ' ಎಂದು ತಲೆದೂಗುತ್ತಾ ಡಾನ್ಸ್ ಮಾಡಿ ಹೆಚ್ಚು ಕೆಟ್ಟದಾಗಿ ಕಂಡುಬಂದಿದ್ದಾರೆ. ವಿಡಿಯೋ ಇದೀಗ ಹೆಚ್ಚಾಗಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಪ್ರತಿಯೊಬ್ಬರು ಪರ ವಿರೋಧ ಅಭಿಪ್ರಾಯಗಳನ್ನು ಈ ವಿಡಿಯೋ ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹಾಗೆ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಈ ಹುಡುಗಿಯರಿಗೆ ಬುದ್ಧಿ ಮಾತು ಹೇಳಿ ಸಕತ್ ತರಾಟೆಗೆ ತೆಗೆದುಕೊಂಡಿದ್ದರೆ ಎನ್ನಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಾಸ್ಟೆಲ್ ವಾರ್ಡನ್ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಹೇಳಿರುವುದಾಗಿ ಕೇಳಿ ಬಂದಿದ್ದು, ಇದು ಮನರಂಜನೆ ರೀತಿ ಮಾಡಿದರೂ ಕೂಡ ತಪ್ಪಾಗಿ ಅರ್ಥ ಕಲ್ಪಿಸುತ್ತದೆಂದು ಹೇಳಿದ್ದಾರಂತೆ. ಇವರ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ನಿಮ್ಮ ಅನಿಸಿಕೆಯನ್ನು ಹೇಳಿ ಧನ್ಯವಾದಗಳು..