ಮಾಸ್ಕ್ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಈ ಸಮಸ್ಯೆಗಳು ಎದುರಾಗುತ್ತವೆ !!

Updated: Tuesday, April 6, 2021, 19:22 [IST]

ನೀವು ಕೋವಿಡ್ 19 ನಿಂದ ಪಾರಾಗಬೇಕೆಂದರೆ ಮಾಸ್ಕ್ ಧರಿಸುವುದು ಅವಶ್ಯಕ. ಆದರೆ ಮಾಸ್ಕ್ ಅನ್ನು ನಿರಂತರವಾಗಿ ತೊಳೆಯುವುದು ಬಹಳ ಮುಖ್ಯ. ಕೊಳಕಾದ ಮಾಸ್ಕ್ ಧರಿಸಬಾರದು. ಬಹುತೇಕರು ಕುತ್ತಿಗೆ ನೋವು, ಗಂಟಲು ನೋವು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಮಾಸ್ಕ್ ಧರಿಸದೆ, ದೂರ ಸರಿಯುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಕಾರಣವೆಂದರೆ ಕೊಳಕಾಗಿರುವ ಮಾಸ್ಕ್. ಹೌದು, ಕೋ’ವಿಡ್ 19 ನಿಂದ ತಪ್ಪಿಸಿಕೊಳ್ಳಲು ನೀವು ಮಾಸ್ಕ್ ಧರಿಸುತ್ತಿದ್ದೀರಿ, ಅದರ ಜೊತೆಗೆ ಸಾವಿರಾರು ರೋಗಾಣುಗಳೊಂದಿಗೆ ನೀವು ಗಂಟಲಿನ ಕಾಯಿಲೆಗಳಿಗೆ ಗುರಿಯಾಗುತ್ತಿದ್ದೀರಿ. ನೀವು ಆರೋಗ್ಯವಾಗಿರಲು ಬಯಸಿದರೆ ಮಾಸ್ಕ್ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಮಾಸ್ಕ್ ಧರಿಸುವುದರಿಂದ ಕೆಮ್ಮು ಉಂಟಾಗುವುದಿಲ್ಲ, ಆದರೆ ಆರೋಗ್ಯಕರವಲ್ಲದ ಮಾಸ್ಕ್ ಧರಿಸುವುದರಿಂದ ಗಂಟಲಿನ ತೊಂದರೆ ಉಂಟಾಗುತ್ತದೆ. ನೀವು ಕೆಮ್ಮನ್ನು ತಪ್ಪಿಸಲು ಬಯಸಿದರೆ, ನಿಮ್ಮ ಮಾಸ್ಕ್ ಅನ್ನು ಸ್ವಚ್ಛಗೊಳಿಸಲು ವಿಶೇಷ ಕಾಳಜಿ ವಹಿಸಬೇಕು. ಅದನ್ನು ಸಂಪೂರ್ಣವಾಗಿ ಸೋಂಕುನಿವಾರಕಗೊಳಿಸಿ, ನಂತರ ಬಳಸಿ.    

ಹಾನಿಕಾರಕ ಬ್ಯಾಕ್ಟೀರಿಯಾವು ಕೊಳಕು ಮಾಸ್ಕ್’ಗಳಲ್ಲಿ ಬೆಳೆಯಬಹುದು, ಇದು ನಿಮ್ಮ ಗಂಟಲಿನಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಮಾಸ್ಕ್ ಅನ್ನು ಸೋಂಕುರಹಿತವಾಗಿಸಲು ಸ್ವಲ್ಪ ನೀರಿನಿಂದ ತೊಳೆಯುವುದು ಸಾಕಾಗುವುದಿಲ್ಲ. ಮಾಸ್ಕ್ ತೊಳೆಯಲು ಬಿಸಿನೀರನ್ನು ಬಳಸಿ. ಮಾಸ್ಕ್ ಅನ್ನು ಬೆಚ್ಚಗಿನ ನೀರಿನಲ್ಲಿ 5-10 ನಿಮಿಷಗಳ ಕಾಲ ನೆನೆಸಿ. ನಂತರ ಸೋಪಿನಿಂದ ತೊಳೆಯಿರಿ. ಮಾಸ್ಕ್ ಅನ್ನು ಸೋಂಕುರಹಿತವಾಗಿಸಲು ತೊಳೆಯುವುದು ಮಾತ್ರವಲ್ಲ, ಅದನ್ನು ಸರಿಯಾಗಿ ಒಣಗಿಸುವುದು ಸಹ ಅಗತ್ಯವಾಗಿರುತ್ತದೆ.  

ಮಾಸ್ಕ್ ಒಮ್ಮೆ ಬಳಸಿದ ನಂತರ ನೀವು ಅದನ್ನು ಸ್ವಚ್ಛಗೊಳಿಸುವುದು ಅಥವಾ ತೊಳೆಯುವುದು ಅವಶ್ಯಕ. ನೀವು ಬಟ್ಟೆ ಮಾಸ್ಕ್ ಧರಿಸುತ್ತಿದ್ದರೆ, ಅದನ್ನು ಬೆಚ್ಚಗಿನ ನೀರು ಮತ್ತು ಸಾಬೂನಿನಿಂದ ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಮಾಸ್ಕ್ ಹೊರ ಭಾಗವು ಕಲುಷಿತವಾಗಿರುತ್ತದೆ. ಆದ್ದರಿಂದ ಅದನ್ನು ಧರಿಸುವಾಗ ಅದನ್ನು ಮತ್ತೆ ಮತ್ತೆ ಮುಟ್ಟಬೇಡಿ. ನೀವು ಅದನ್ನು ಸರಿಪಡಿಸಿಕೊಂಡರೂ ಸಹ, ಕೈಗಳನ್ನು ಸ್ವಚ್ಛಗೊಳಿಸಿ. ಪ್ರಸ್ತುತ ಜನ ಸಾಮಾನ್ಯವಾಗಿ ಮಾಡುತ್ತಿರುವ ತಪ್ಪೆಂದರೆ ಮಾಸ್ಕ್ ಅವರ ಮೂಗಿನ ಕೆಳಗೆ ಇರುತ್ತದೆ ಮತ್ತು ಬಾಯಿಯನ್ನು ಮಾತ್ರ ಆವರಿಸುತ್ತದೆ ಅಥವಾ ಮೂಗಿನ ತುದಿಯಲ್ಲಿರುತ್ತದೆ. ನೀವು ಮಾಸ್ಕ್ ನಿಂದ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚಿಕೊಳ್ಳದಿದ್ದರೆ, ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.