ಮಧುಮೇಹಿಗಳೇ ಚಿಂತಿಸ ಬೇಡಿ: ನಿತ್ಯ ಒಂದು ನಿಂಬೆ ಬಳಸಿ, ಶುಗರ್ ಖಾಯಿಲೆಯನ್ನು ಓಡಿಸಿ..

By Infoflick Correspondent

Updated:Monday, December 6, 2021, 22:16[IST]

ಮಧುಮೇಹಿಗಳೇ ಚಿಂತಿಸ ಬೇಡಿ: ನಿತ್ಯ ಒಂದು ನಿಂಬೆ ಬಳಸಿ, ಶುಗರ್ ಖಾಯಿಲೆಯನ್ನು ಓಡಿಸಿ..

ಪ್ರತೀ ಮನೆಯಲ್ಲೊಬ್ಬರಂತೆ ಎಲ್ಲರಿಗೂ ಶುಗರ್ ಖಾಯಿಲೆ ಇದ್ದೇ ಇರುತ್ತೆ. ಆಗ ತಾನೆ ಜನಿಸಿದ ಮಗುವಿಗೂ ಈಗ ಶುಗರ್ ಖಾಯಿಲೆ ಬಂದು ಬಿಡುತ್ತೆ. ಹೀಗಿರುವಾಗ ವಯಸ್ಸಾದವರನ್ನು ಕೇಳಬೇಕಾ..? ಈ ಡಯಾಬಿಟೀಸ್ ನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಇನ್ನು ಈ ಶುಗರ್ ಇರುವವರು ಅನ್ನ ತಿನ್ನಬಾರದು, ಸಿಹಿ ಪದಾರ್ಥಗಳನ್ನು ಮುಟ್ಟಲೇ ಬಾರದು, ಮೈದಾ, ತೊಗರಿ ಬೇಳೆ, ಹಣ್ಣು ಸೇರಿದಂತೆ ಹಲವು ಪದಾರ್ಥಗಳನ್ನು ಸೇವಿಸಬಾರದು ಎನ್ನುತ್ತಾರೆ. 

ಶುಗರ್ ಪೇಶೆಂಟ್ ಗಳು ಕೆಲ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ತರಕಾರಿ-ಸೋಪ್ಪು ಸೇವನೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ. ಮಕ್ಕಳಿರುವವರು ತಪ್ಪದೇ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಮಕ್ಕಳಿಗೆ ವೈರಸ್ ಹರಡದಂತೆ ನೋಡಿಕೊಳ್ಳಬೇಕು. ಶುಗರ್, ಬಿಪಿ ಖಾಯಿಲೆ ಇರುವವರು ತಮ್ಮ ವಯಸ್ಸಿಗೆ ತಕ್ಕಂತೆ, ತಮ್ಮ ಜೀರ್ಣಶಕ್ತಿಯ ಆಧಾರದ ಮೇಲೆ ಆಹಾರದ ಪ್ರಮಾಣವನ್ನು ಸೇವಿಸಬೇಕು. ಶುಗರ್ ಇರುವವರು, ಕ್ಯಾರೆಟ್, ಆಲೂಗಡ್ಡೆ, ಕುಂಬಳಕಾಯಿ ಹಾಗೂ ಅಕ್ಕಿಯ ಪದಾರ್ಥಗಳನ್ನು ಸ್ವಲ್ಪ ಕಡಿಮೆ ಬಳಸುವುದು ಉತ್ತಮ. ಅದು ಹೊರತುಪಡಿಸಿದರೆ, ಎಲ್ಲಾ ಬಗೆಯ ಆಹಾರವನ್ನು ಸೇವಿಸಬಹುದು.   

ಆದಷ್ಟು ಬೆಂದ ಆಹಾರ, ಬಿಸಿ ಬಿಸಿ ಆಹಾರ ಸೇವಿಸಬೇಕು. ಡಯಾಬಿಟಿಸ್ ಖಾಯಿಲೆ ಇರುವವರು ಅನ್ನ ತಿನ್ನುವಂತಿಲ್ಲ ಎನ್ನುವುದಕ್ಕಿಂತ ಅನ್ನದ ಜೊತೆಗೆ ತರಕಾರಿ, ಸೊಪ್ಪು ಹಣ್ಣುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇನ್ನು ಶುಗರ್ ಪೇಶೆಂಟ್ ಗಳಿಗೆ ನಿಂಬೆ ಹಣ್ಣು ರಾಮಬಾಣದಂತೆ ಕೆಲಸ ಮಾಡುತ್ತದೆ. ನಿತ್ಯ ನಿಂಬೆ ರಸವನ್ನು ಸೇವಿಸುವುದರಿಂದ ಶುಗರ್ ಕಂಟ್ರೋಲ್ ಗೆ ಬರುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಇದ್ದು, ಇದು ಇಮ್ಯೂನಿಟಿ, ಜೀರ್ಣಶಕ್ತಿಗೆ ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಇದರಲ್ಲಿ ಮನುಷ್ಯನಿಗೆ ಬೇಕಾಗಿರುವ ಫೈಬರ್ ಕಂಟೆಂಟ್ ಇರುತ್ತದೆ. ಮಿಸ್ ಮಾಡದೇ ನಿತ್ಯ ನಿಂಬೆ ರಸವನ್ನು ಸೇವಿಸಿ..