ಕೃಷಿಯಲ್ಲಿ ಸೋತಾಗ ಹುಟ್ಟಿಕೊಂಡಿದ್ದೆ ಈ ಜೀನಿ ಎಂಬ ಪ್ರೊಡಕ್ಟ್..! ಯಶಸ್ವಿ ಹೇಗಾಯಿತು ಗೊತ್ತಾ..?

Updated: Sunday, April 11, 2021, 09:52 [IST]

ಸ್ನೇಹಿತರೆ ಈ ಜೀವನದಲ್ಲಿ ಯಾವ ಸಮಯದಲ್ಲಿ ಯಾರ ಹೊಸತನದ ವಿಷಯಗಳು ಬೇರೊಬ್ಬರಿಗೆ ಒಂದೊಳ್ಳೆಯ ಉಪಯುಕ್ತವಾದ ರೀತಿ ಅವರಿಗೆ ತಲುಪುತ್ತದೆ ಎಂದು ಹೇಳಲಿಕ್ಕಾಗದು, ಅದೇ ನಿಟ್ಟಿನಲ್ಲಿ ಇದೀಗ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪುಟ್ಟ ಹಳ್ಳಿಯಾದ ಎರಗುಂಟ
ಎನ್ನುವ ಊರಿನ ಒಬ್ಬ ಯುವಕ, ತನ್ನದೆ ಆದ ಸ್ವಂತ ಉದ್ದಿಮೆಯಲ್ಲಿ ಪಳಗಿ ಆರಂಭದ ಹಂತದಲ್ಲಿ ತುಂಬಾ ಕಷ್ಟಪಟ್ಟು ಇದೀಗ ತುಂಬಾ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಅಷ್ಟಕ್ಕೂ ಆ ಪ್ರೊಡಕ್ಟ್ ಯಾವುದು ಗೊತ್ತಾ..?    

ಹೌದು ನೀವು ಜೀನಿ ಎಂಬ ಪ್ರೊಡಕ್ಟ್ ಹೆಸರನ್ನ ಎಲ್ಲಿ ಆದ್ರೂ ಕೇಳಿರುತ್ತೀರಿ, ಈ ಜೀನಿ ಎಂಬ ಸಕತ್ ಪ್ರೊಡಕ್ಟ್  ಸಾಕಷ್ಟು ಸಿರಿಧಾನ್ಯಗಳಿಂದ ಕೂಡಿದ್ದು, ಹಾಗೆ ಈ ಪ್ರೊಡಕ್ಟ್ ಅನ್ನು ತಯಾರಿಸುವುದಕ್ಕೆ ಯಾವುದೇ ಯಂತ್ರ ಮಷೀನ್ ಇಲ್ಲ, ಬದಲಿಗೆ ಮ್ಯಾನ್ ಹ್ಯಾಂಡಲ್ ನಿಂದಲೇ ತಯಾರಾಗುತ್ತಿದ್ದು, ಪ್ರತಿದಿನವೂ 110 ಜನರು ಈ ಜೀನಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಮತ್ತು ಈ ಜೀನಿ ಎಂಬ ಪ್ರೊಡಕ್ಟ್ ಅನ್ನು ಯಾವ ರೀತಿ ಸೇವಿಸಬೇಕು ಇದು ಎಷ್ಟರಮಟ್ಟಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ಮನುಷ್ಯನ ಆರೋಗ್ಯಕ್ಕೆ ಆಗುವ ಅನುಕೂಲಗಳೇನು ಎಂಬುದನ್ನು ಈ ಕೊನೆಯಲ್ಲಿರುವ ಸಣ್ಣ ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ.

ಅಂದಹಾಗೆ ಈ ಸಂಸ್ಥೆಯ ಸ್ಥಾಪಕ ದಿಲೀಪ್ ಕುಮಾರ್ ಅವರು ಇಂದು ಯಶಸ್ವಿಯಾಗಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಆರಂಭದ ಹಂತದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು, ಬಿಸಿನೆಸ್ ಮಾಡಿ ತುಂಬಾ ಲಾಸ್ ಆಗಿದ್ದ ದಿಲೀಪ್ ಕುಮಾರ್ ಅವರಿಗೆ, ಹುಟ್ಟಿಕೊಂಡಿದ್ದೇ ಈ ಜೀನಿ ಎಂಬ ಹೊಸದಾದ ಪ್ರೊಡಕ್ಟ್, ಈ ಪ್ರಾಡಕ್ಟ್ ಬಗ್ಗೆ ಹಾಗೆ ಈ ಹೊಸತನದ ಸಂಸ್ಥೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ, ಧನ್ಯವಾದಗಳು....