ಪ್ರೇಮಿಗಳ ದಿನ ಹುಟ್ಟಿಕೊಳ್ಳಲು ಈ ಮಹಾತ್ಮ ಕಾರಣ..! ಎಲ್ಲಾ ಪ್ರೇಮಿಗಳು ಈ ಮಹಾತ್ಮನ ತ್ಯಾಗದ ಬಗ್ಗೆ ತಿಳಿದುಕೊಳ್ಳಿ

ಪ್ರೇಮಿಗಳ ದಿನ ಹುಟ್ಟಿಕೊಳ್ಳಲು ಈ ಮಹಾತ್ಮ ಕಾರಣ..! ಎಲ್ಲಾ ಪ್ರೇಮಿಗಳು ಈ ಮಹಾತ್ಮನ ತ್ಯಾಗದ ಬಗ್ಗೆ ತಿಳಿದುಕೊಳ್ಳಿ

ಇನ್ನೇನು ಫೆಬ್ರವರಿ ೧೪th ಬಂದಿದ್ದು ಜಗತ್ತಿನಾದ್ಯಂತ ಪ್ರೇಮಿಗಳ ದಿನಾಚರಣೆಯನ್ನು ಸಂಭ್ರಮಿಸುವ ಸಮಯ.. ಹೌದು ಕೆಲವರ ಪಾಲಿಗೆ ಇದು ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ, ಇನ್ನು ಕೆಲವರಿಗೆ ಪಾಲಿಗೆ ಇದು ಒಂದು ದೊಡ್ಡ ಕರಾಳ ದಿನ ಆಗಿದೆ. ಅವರು ಯಾವುದೇ ಪ್ರೇಮಿಗಳ ದಿನಾಚರಣೆ ಎಂದು ಸಂಭ್ರಮಾಚರಣೆಯ ಮಾಡುವುದಿಲ್ಲ.. ಈ ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ ಎಂದು ಕರೆಯುತ್ತಾರೆ.. ಈ ಹೆಸರು ಬರಲು ಮುಖ್ಯ ಕಾರಣ ಇದೆ ಗೆಳೆಯರೇ. ಹಾಗೆ ಈ ದಿನದಲ್ಲೆ ಪ್ರೇಮಿಗಳ ದಿನ ಎಂದು ಯಾಕೆ ಆಚರಿಸುತ್ತಾರೆ ಗೊತ್ತಾ..? ಮುಂದೆ ಓದಿ.

ಈ ದಿನವೆ ಜೀವ ಕೊಟ್ಟಂತಹ ಆ ಒಂದು ವ್ಯಕ್ತಿಯ ಕಥಾ ಲೇಖನ ಇದಾಗಿದೆ. ನಿಮಗೆ ಆ ಚರಿತ್ರೆಯ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಪೂರ್ತಿ ಮಾಹಿತಿಯನ್ನ ಈಗ ತಿಳಿಯಿರಿ. ಅದನ್ನು ತಿಳಿಸುವ ಪ್ರಯತ್ನ ಈ ಲೇಖನದಾಗಿದೆ ಅಷ್ಟೇ. ಫೆಬ್ರವರಿ 14 ಕ್ಕೇ ಸಾಕಷ್ಟು ಪ್ರೇಮಿಗಳು, ಲವ್ ಬರ್ಡ್ಸ್ ಗಳು ಅವರದೇ ಆದ ಇಷ್ಟದ ಬಟ್ಟೆ ತೊಟ್ಟು ಅವರದೇ ಆದ ರೀತಿಯಲ್ಲಿ ಪ್ರೇಮ ನಿವೇದನೆ ಒಪ್ಪಿಸಿಕೊಂಡು, ಆ ದಿನವನ್ನು ಕಲರ್ ಫುಲ್ ಆಗಿ ಎಂಜಾಯ್ ಮಾಡುತ್ತಾ ಸಕ್ಕತ್ ಖುಷಿಯಲ್ಲಿ ಇರುತ್ತಾರೆ. ಪವಿತ್ರ ಪ್ರೀತಿಯನ್ನ ಆಚರಣೆ ಮಾಡುತ್ತಾರೆ. ಹೌದು ಇದಕ್ಕೆ ಕಾರಣ ಕೂಡ ದೊಡ್ಡದಿದೆ. ಈ ದಿನವನ್ನೇ ವ್ಯಾಲೆಂಟೈನ್ಸ್ ಡೇ ಎಂದು ಕರೆಯಲು ಅಸಲಿ ಕತೆಯೇ ಬೇರೆ ಇದೆ.  

ಮೂರನೇ ಸೆಂಚುರಿ ಬಗ್ಗೆ ಎಲ್ಲರಿಗೂ ಗಮನ ಇದೆ ಅಂತ ನಾವು ಅಂದುಕೊಂಡಿದ್ದೇವೆ. ಮೂರನೇ ಸೆಂಚುರಿಯಲ್ಲಿ ರೋಮ್ ದೇಶದಲ್ಲಿ ಒಬ್ಬ ರಾಜ ಇದ್ದ. ಅಲ್ಲಿ ತನ್ನದೇ ಅದಾ ಒಂದು ಬಲಿಷ್ಠ ಸೇನೆ ಕಟ್ಟಿಕೊಂಡು ಆಳ್ವಿಕೆಯ ಮಾಡುತ್ತಿದ್ದನು. ಆತನ ಹೆಸರೆ ಕ್ಲವಿಡಿಯಸ್ ಸೆಕೆಂಡ್. ಈತ ಒಮ್ಮೆ ತನ್ನ ಯೋಧರನ್ನು ಪರೀಕ್ಷೆಗೆ ಒಳಪಡಿಸಿದ್ದ. ಅದರಲ್ಲಿ ಮದುವೆ ಆದವರು ಇದ್ದರು, ಜೊತೆಗೆ ಮದುವೆಯಾಗದೆ ಬ್ಯಾಚುಲರ್ ಆಗಿ ಸೇವೇ ಸಲ್ಲಿಸುತ್ತಾ ಇದ್ದವರು ಕೂಡ ಕಂಡುಬಂದರು. ಈ ಸಮೀಕ್ಷೆಯಲ್ಲಿ ರಾಜ ಮದುವೆ ಆದವರಿಗಿಂತ ಮದುವೆ ಆಗದೆ ಇರುವ ಸೋಲ್ಜರ್ ಶಕ್ತಿಯನ್ನು ಗಮನಿಸಿದ್ದ, ಸೇನೆಯಲ್ಲಿ ಯುದ್ಧ ಮಾಡುವಾಗ ಮದುವೆಯಾಗದಿರುವವರು ತುಂಬಾನೇ ಆಕ್ಟಿವ್ ಆಗಿರುತ್ತಿದ್ದು ಕಂಡು ಬಂದಿತ್ತು.

ಆ ಕಾರಣಕ್ಕಾಗಿ ರಾಜ ಇನ್ನು ಮುಂದೆ ಈ ಸೇನೆಯಲ್ಲಿ ಕೆಲಸ ಮಾಡುವವರು ಮದುವೆ ಆಗದಿರುವವರು ಮದುವೆ ಆಗಲೇಬಾರದು, ಪ್ರೀತಿ ಮಾಡಬಾರದು ಎಂದು ಆಜ್ಞೆ ಮಾಡಿದ್ದ, ಹಾಗೆ ಮದುವೆ ಆದರೆ ಇಲ್ಲಿಗೆ ಬರುವಂತಿಲ್ಲ ಎಂದು ಶರತ್ತುಗಳನ್ನು ನೀಡಿ ಕೆಲವು ನಿಯಮ ಪಾಲಿಸಲು ಹೇಳಿದನು. ಇದನ್ನೆಲ್ಲಾ ಕೇಳಿದ ಅಲ್ಲಿಯೇ ಇದ್ದ ಒಬ್ಬ ಸೈಂಟ್ ವ್ಯಾಲೆಂಟೈನ್ಸ್ ಎನ್ನುವ ವ್ಯಕ್ತಿ, ಆ ರಾಜನ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದ. ಈ ಜಗತ್ತಿನಲ್ಲಿ ಯಾರಿಗೂ ನೀವು ಪ್ರೀತಿ ಮಾಡಬಾರದು, ಮದುವೆಯಾಗಬಾರದು, ಎನ್ನುವ ಹಕ್ಕನ್ನು ಹೇರುವಂತಿಲ್ಲ. ಆ ಹೇರಿಕೆ ನೀಡಲಾಗದು ಎಂದು ರಾಜನ ಹೇಳಿಕೆಗೆ ವಿರೋದಿಸಿ, ನಂತರ ಸೇನೆಯಲ್ಲಿಯೇ ಕೆಲಸ ಮಾಡುತ್ತಿದ್ದ ಸೋಲ್ಡ್ಜರ್ ಗಳ ಪ್ರೀತಿ ವಿಷಯ ತಿಳಿದುಕೊಂಡು ಅವರ ಹುಡುಗಿಯರ ಕರೆಸಿ ಗುಟ್ಟಾಗಿ ಮದುವೆ ಮಾಡಿಸುತ್ತಿದ್ದನು.

ಆ ನಂತರ ಆಗಿದ್ದೇನು, ರಾಜನ ಕಿವಿಗೆ ಗುಟ್ಟಾಗಿ ಈ ವ್ಯಾಲೆಂಟನ್ಸ್ ಮಾಡಿಸುತ್ತಿದ್ದ ಮದುವೆ ಸುದ್ದಿಯೂ ಬೀಳುತ್ತಿದ್ದಂತೆಯೆ ರಾಜ ಹೆಚ್ಚು ಕೋಪಿಷ್ಠನಾದ. ಅತ್ತ ಸೈಂಟ್ ವ್ಯಾಲೆಂಟೈನ್ಸ್ ಎನ್ನುವ ವ್ಯಕ್ತಿಯನ್ನು ಈ ರಾಜ ಆಗ ಏನು ಮಾಡಿದ ಗೊತ್ತಾ..? ಇಲ್ಲಿದೆ ನೋಡಿ ಆ ವಿಡಿಯೋ. ವ್ಯಾಲೆಂಟೈನ್ಸ್ ಡೇ ದಿನವನ್ನು ಆಚರಿಸಲು ಈ ಮಹಾತ್ಮ ಕಾರಣ ಆಗಿದ್ದಾರೆ. ವಿಡಿಯೋ ಒಮ್ಮೆ ನೋಡಿ, ಪ್ರೇಮಿಗಳ ದಿನಾಚರಣೆ ಆಚರಣೆಗೆ ಈ ವ್ಯಕ್ತಿಯೆ ಕಾರಣ ಎನ್ನುವ ಅಂಶ ತಿಳಿಯಿರಿ, ಈ ಮಹಾತ್ಮರಿಗೆ ನಿಮ್ಮ ನಮನ ಸಲ್ಲಿಸಿ ಧನ್ಯವಾದಗಳು..  ( video credit : Naya Tv )