ಕೊರೊನ ಕುರಿತು ಸುಳ್ಳು ಹೇಳುತ್ತಿದೆಯ ಈ ಸರಕಾರ..? ದಿನಕ್ಕೆ ಎಷ್ಟು ಲಕ್ಷ ಕೇಸ್ ಪತ್ತೆಯಾಗ್ತಿವೆ ನೋಡಿ..!

Updated: Sunday, April 25, 2021, 09:13 [IST]

ಹೌದು ಸ್ನೇಹಿತರೆ ಕರೋನವೈರಸ್ ಎರಡನೆ ಅಲೆ ಇದೀಗ ರಾಜ್ಯಾದ್ಯಂತ ಸೇರಿ ಇಡೀ ದೇಶದ ತುಂಬೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಜನರಿಗೆ ತಗಲುತ್ತಿತ್ತು ದಿನೇದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತು ಸರಕಾರ ಕೂಡ ಕರೋನವೈರಸ್ ತಡೆಹಿಡಿಯುವಲ್ಲಿ ಸಾಕಷ್ಟು ಹೊಸ ಹೊಸ ನಿಯಮ ಮತ್ತು ಕ್ರಮಗಳನ್ನ ಜಾರಿಗೊಳಿಸುತ್ತಿದೆ. ಆದರೂ ಸಹ ಜನರು ಬೇಕಾಬಿಟ್ಟಿ ಕೆಲವು ಕಡೆ ಓಡಾಡಿ ಕೋರೋನವನ್ನು ಇನ್ನಷ್ಟು ಹೆಚ್ಚು ಮಾಡ್ತಿದ್ದಾರೆ. 

ಹೌದು ಸರ್ಕಾರ ಕೂಡ ಈ ಕೊರೋನಾದ ಹಿನ್ನೆಲೆಯಲ್ಲಿ ಹೇಳುತ್ತಿರುವ ಮಾಹಿತಿ ಸಹ ಸುಳ್ಳು ಎಂಬುದು ಕೂಡ ಕೆಲವು ಕಡೆ ಚರ್ಚೆ ಆಗುತ್ತಿದೆ. ಮತ್ತು ಪ್ರತಿದಿನ ಸಾಕಷ್ಟು ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಸಾಯುತ್ತಿದ್ದಾರೆ, ಕರೋನವೈರಸ್ ಎರಡನೆ ಅಲೆಯ ತೀವ್ರತೆ ಹೆಚ್ಚಾಗಿ ರುದ್ರ ತಾಂಡವ ಆಡುತ್ತಿದೆ, ಆದ್ರೆ ಸರ್ಕಾರ ದಿನಕ್ಕೆ ಕೇವಲ 3 ಲಕ್ಷ ಕರೋನಾ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ ಎಂದು ಹೇಳಿ ಮಾಧ್ಯಮ ಮೂಲಕ ವರದಿ ಮಾಡುತ್ತಿವೆ. ಆದರೆ ಇದರ ನಿಜರೂಪ ಬೇರೆ ಇದೆ ಎಂದು ಈಗ ಒಂದು ವಿಡಿಯೋ ಮೂಲಕ ತಿಳಿಸಿದ್ದಾನೆ.

ಹೌದು ಈ ಕೊರೊನ ರೋಗಿಗಳಿಗೆ ಎಲ್ಲರಿಗೂ ಆಕ್ಸಿಜನ್ ಸಿಗುತ್ತಿದೆಯಾ,ಈ  ವ್ಯಾಕ್ಸಿನೇಷನ್ ಸಿಗುತ್ತಿದೆಯಾ ಇಲ್ವಾ ಇದರ ಸಂಪೂರ್ಣ ಮಾಹಿತಿಯನ್ನು ದ್ರುವ ರಾತೆ ಅವರು ಈಗ ವಿಡಿಯೋ ಮೂಲಕ ಬಿಚ್ಚಿಟ್ಟಿದ್ದು, ದಿನಕ್ಕೆ 30 ಲಕ್ಷ ಕೊರೊನ ಕೇಸ್ ಬರುತ್ತಿವೆ ಎಂದು ಹೇಳಿ ಇಡೀ ದೇಶದ ಜನರಿಗೆ ಆತಂಕ ಮೂಡಿಸಿದ್ದಾರೆ. ಹೌದು ಈ ವಿಡಿಯೋ ಮೂಲಕ ಈತ ಹೇಳಿದ್ದೇನು ಎಂದು ನೋಡಿ, ಬಳಿಕ ಸರಕಾರ ಈ ಕೊರೊನ ಹಿನ್ನೆಲೆಯಲ್ಲಿ ಸುಳ್ಳು ಮಾಹಿತಿ ಹೇಳುತ್ತಿದೆಯಾ ಎಂದು ನೀವು ಸಹ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ....