ಕಳೆದ ತಿಂಗಳು 9 ಮಕ್ಕಳಿಗೆ ಜನ್ಮ: ಈ ತಿಂಗಳು 10 ಮಕ್ಕಳಿಗೆ ಜನ್ಮ ಕೊಟ್ಟ ಮಹಾತಾಯಿ..

Updated: Thursday, June 10, 2021, 15:18 [IST]

ಅದೊಂದು ಕಾಲದಲ್ಲಿ ವಯಸ್ಸು ಐವತ್ತಾದರೂ ಮಕ್ಕಳನ್ನ ಹೇರುತ್ತಿದ್ದರು. ಅದೇ ಈ ಕಾಲದಲ್ಲಿ ಒಂದು ಮಗು ಆದರೆ ಸಾಕಪ್ಪ ಅಂತಾರೆ ಜನ. ಇನ್ನು ಅಕಸ್ಮಾತ್ ಆಗಿ ಅವಳಿ ಮಕ್ಕಳೇನಾದರೂ ಆದರೆ, ಕೆಲವರು ತಲೆ ಚೆಚ್ಚಿಕೊಳ್ಳೋದುಂಟು. ಹಾಗಿರುವಾಗ ಒಂದೇ ಸಲಕ್ಕೆ 9-10 ಮಕ್ಕಳನ್ನ ಹೇರೋದು ಅಂದರೆ ತಮಾಷೆನಾ.. ದಾಖಲೆಯೇ ಸರಿ. 

ಕಳೆದ ತಿಂಗಳು ಮೊರಾಕ್ಕೋದ ಆಸ್ಪತ್ರೆಯಲ್ಲಿ ಹಲೀಮಾ ಸಿಸ್ಸೆ ಎಂಬಾಕೆ ಒಂದೇ ಸಲಕ್ಕೆ 9 ಮಕ್ಕಳಿಗೆ ಜನ್ಮ ನೀಡಿ ದಾಖಲೆಯ ಪುಟ ಸೇರಿದ್ದರು. ಈ ತಿಂಗಳು ದಕ್ಷಿಣ ಆಫ್ರಿಕಾದ 37 ವರ್ಷದ ಗೋಸಿಯಾರ್‌ ತಮಾರಾ ಸಿಥೋಲ್‌ ಎಂಬ ಮಹಿಳೆ ನಿನ್ನೆ ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈ ಮೂಲಕ ಗಿನ್ನಿಸ್‌ ದಾಖಲೆಯ ಪುಟ ಸೇರಿದ್ದಾಳೆ.   

ಕಳೆದ ಬಾರಿ ಈಕೆಗೆ ಹೆರಿಗೆ ಆದಾಗ ಈಕೆಗೆ ಅವಳಿ ಮಕ್ಕಳು ಜನಿಸಿದ್ದವು. ಇದೀಗ 10 ಮಕ್ಕಳು ಜನಿಸುವೆ. ಈ ಮೂಲಕ ಸಿಥೋಲ್‌ 12 ಮಕ್ಕಳ ತಾಯಿಯಾಗಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಸಿಥೋಲ್‌ ಪತಿ ಟೆಬೋಗಿ, ಸಂತಸವನ್ನು ಹಂಚಿಕೊಂಡಿದ್ದಾರೆ. ಸಿಥೋಲ್‌ ಏಳು ಗಂಡು, ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸಿಝೇರಿಯನ್‌ ಮೂಲಕ ಸಿಥೋಲ್ ಗೆ ಹೆರಿಗೆ ಮಾಡಿಸಲಾಗಿದೆ.