ಕೊರೊನಾ ಬಂದು ಹೋದವರು ಇಂತಹ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ..

Updated: Friday, May 7, 2021, 12:47 [IST]

ನಿಮಗೆ ಈಗಾಗಲೇ ಕೊರೊನಾ ಬಂದು ಹೋಗಿದ್ಯಾ..? ಈಗಷ್ಟೇ ಕೊರೊನಾ ದಿಂದ ಚೇತರಿಸಿಕೊಂಡಿದ್ದೀರಾ..? ಹಾಗಾದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಇದರಲ್ಲಿ ನೀವು ಯಾವ ಯಾವ ಆಹಾರವನ್ನು ಸೇವಿಸಬಾರದು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಕೊರೊನಾ ಮಹಾಮಾರಿ ಅದೆಷ್ಟೋ ಜನರ ಜೀವವನ್ನು ಬಲಿ ಪಡೆದಿದೆ. ಕೆಲವೇ ಕೆಲವು ದಿನಗಳ ಕಾಲ ನಮ್ಮ ದೇಹದಲ್ಲಿರುವ ಈ ವೈರಸ್ ನಮ್ಮನ್ನು ಸಂಪೂರ್ಣವಾಗಿ ಕುಗ್ಗಿಸಿ ಬಿಡುತ್ತದೆ. ದೈಹಿಕವಾಗಿ ಅಷ್ಟೇ ಅಲ್ಲದೇ, ಕೆಲವರಿಗೆ ಮಾನಸಿಕವಾಗಿಯೂ ಕುಗ್ಗಿಸುತ್ತಿದೆ.  

ಹೀಗಿರುವಾಗ ಕೊರೊನಾದಿಂದ ಚೇತರಿಸಿಕೊಂಡವರು ಕೆಲವು ಆಹಾರಗಳನ್ನು ಅನಿವಾರ್ಯ ಕಾರಣಗಳಿಂದ ತ್ಯಜಿಸಲೇಬೇಕಾಗಿದೆ. 

ಕೊರೊನಾದಿಂದ ಪಾರಾದ ನಂತರ ನಮ್ಮ ಆರೋಗ್ಯವನ್ನು ಕಪಾಡಿಕೊಳ್ಳಬೇಕು. ನಮ್ಮಲ್ಲಿನ ಶಕ್ತಿಯನ್ನು ವೃದ್ಧಿಸುವಂತಹ ಆಹಾರಗಲನ್ನು ಸೇವಿಸಬೇಕು.  ಮೊದಲು ನೀವು ಪ್ಯಾಕ್ ಆಗಿರುವ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು. ಇದರಲ್ಲಿ ಸೋಡಿಯಂ ಇರುವುದರಿಂದ ಜೀರ್ಣಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ. ಹಾಗಾಗಿ ರೆಡಿ ಫುಡ್ ಗಲನ್ನು ದೂರವಿರಿಸಿ.. 

ಕೂಲ್ ಡ್ರಿಂಕ್ಸ್ ಗಳನ್ನು ಮರೆತು ಬಿಡಿ. ಕೂಲ್ ಡ್ರಿಂಕ್ಸ್ ಗಳು ನಿಮ್ಮ ಆರೋಗ್ಯಕ್ಕೆ ಒಳ್ಳಯದಲ್ಲ. ಇವನ್ನು ತಯಾರಿಸಲು ಬಳಸಿದ ಪದಾರ್ಥಗಳು ಒಳ್ಳೆಯದಲ್ಲ. ಜೊತೆಗೆ ಇದರಿಂದ ಡಯಾಬಿಟಿಸ್ ಶುರುವಾಗುವ ಸಾಧ್ಯತೆಗಳಿರುತ್ತವೆ. ಪಾನೀಯಗಳ ಉರಿಯೂತವನ್ನು ಉಂಟು ಮಾಡುತ್ತವೆ. 

ಇನ್ನು ಕರಿದ ತಿಂಡಿಗಳನ್ನು ಮರೆತು ಬಿಡಿ. ಏಕೆಂದರೆ, ಕರಿದ ತಿಂಡಿಗಳಲ್ಲಿನ ಎಣ್ಣೆ ಅಂಶ ನಿಮ್ಮ ಗಂಟಲಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದರಿಂದ ನಿಮ್ಮ ಆರೋಗ್ಯ ಮತ್ತೆ ಹದಗೆಡುವ ಸಾಧ್ಯತೆ ಇರುತ್ತದೆ. ಇನ್ನು ಮಸಾಲೆ ಅಡುಗೆಯನ್ನು ಆದಷ್ಟು ಕಡಿಮೆ ಮಾಡಿ. ನಾಲಿಗೆ ರುಚಿಗೆ ನೀವು ಮಸಾಲೆ ಹಾಕಿದ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಕರುಳಿಗೆ ಹೊರೆಯಾಗುತ್ತದೆ. ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.