ಇಂದು ವಿಶ್ವ ಇಡ್ಲಿ ದಿನ; ಇಡ್ಲಿಗೂ ಇದೆ ಒಂದು ಚರಿತ್ರೆ ; ತಿಳಿಯಿರಿ ವಿಶೇಷ ಮಾಹಿತಿ

By Infoflick Correspondent

Updated:Wednesday, March 30, 2022, 22:17[IST]

ಇಂದು ವಿಶ್ವ ಇಡ್ಲಿ ದಿನ; ಇಡ್ಲಿಗೂ ಇದೆ ಒಂದು ಚರಿತ್ರೆ ; ತಿಳಿಯಿರಿ ವಿಶೇಷ ಮಾಹಿತಿ

ಇಡ್ಲಿ ದಕ್ಷಿಣ ಭಾರತ ದ ಸಾಂಪ್ರದಾಯಕ ತಿನಿಸು ಮತ್ತು ಪ್ರಾಚೀನ ತಿನಿಸು ಇಡ್ಲಿ. ಹಲವಾರು ಜನರಮನೆಯಲ್ಲಿ, ಸಮಾರಾಧನೆಗಳಲ್ಲಿ, ಹಾಸ್ಟೇಲ್ ಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಇಡ್ಲಿಯದ್ದೇ ರಾಯಭಾರಿ‌.‌ ಎಷ್ಟೊ ವೈದ್ಯರೂ ಇಡ್ಲಿ ತಿನ್ನಿ ಇದು ಒಳ್ಳೆ ಪಥ್ಯ ಎನ್ನುತ್ತಾರೆ. ಹಲವರಿಗೆ ಇಡ್ಲಿ ಎಂದರೆ ಪ್ರಾಣ.‌ ಅದೊಂದಿದ್ದರೆ ಉಪಹಾರ ಊಟ ಎಲ್ಲವೂ ಆಯತು. ಹಾಗಾಗಿ ದಕ್ಷಿಣಭಾರತದಲ್ಲಿ ಇಡ್ಲಿ ಮಾಡದ ಹೊಟೇಲು ಇಲ್ಲ. ಇಷ್ಟೆಲ್ಲ ಪ್ರಾಶಸ್ತ್ಯ ಇರುವ ಇಡ್ಲಿಗೆ ಯಾರೂ ತಿಳಿಯದ ಒಂದು ಇತಿಹಾಸವಿದೆ. ಇಡ್ಲಿಗೂ ಒಂದು ದಿನವಿದೆ. 

ಕ್ರಿಸ್ತ ಶಕ  920ರಲ್ಲಿ ಕನ್ನಡ ಭಾಷೆಯಲ್ಲಿ ಶಿವಕೋಟಿ ಆಚಾರ್ಯರು ಬರೆದ ವಡ್ಡರಾಧನೆ ಎಂಬ ಕೃತಿಯಲ್ಲಿ ಮತ್ತು ಕ್ರಿಸ್ತ ಶಕ 1130ರಲ್ಲಿ ಪ್ರಕಟವಾದ ಸಂಸ್ಕೃತ ಕೃತಿ ಮಾನಸೊಲ್ಲಾಸದಲ್ಲಿಯೂ ಇಡ್ಲಿ ಬಗ್ಗೆ ಉಲ್ಲೇಖವಿದೆ. 17ನೇ ಶತಮಾನದಲ್ಲಿನ ತಮಿಳು ಕೃತಿಗಳಲ್ಲಿಯೂ ಇಡ್ಲಿಯ ಬಗ್ಗೆ ವ್ಯಾಖ್ಯಾನಗಳಿವೆ. 

12 ನೇ ಶತಮಾನದ ಮಧ್ಯೆ ದಕ್ಷಿಣ ಭಾರತಕ್ಕೆ ಬಂದ ಸೌರಾಷ್ಟ್ರದವರು ಇಡ್ಲಿಯನ್ನು ದಕ್ಷಿಣ ಭಾರತೀಯರಿಗೆ ಪರಿಚಯಿಸಿದ್ದರು ಎಂದು ಹೇಳಲಾಗುತ್ತಿದೆ. ಅದೇ ವೇಳೆ ಇಡ್ಡ ಎಂಬ ಹೆಸರಿನಲ್ಲಿ  ಉದ್ದಿನ ಕಾಳು ಮತ್ತು ಅಕ್ಕಿಯನ್ನು ಸೇರಿ ಅದನ್ನು ಆವಿಯಲ್ಲಿ ಬೇಯಿಸುವ ತಿಂಡಿ ಗುಜರಾತ್ ಮೂಲದ್ದು ಎಂಬ ವಾದವೂ ಇದೆ. ಇಡ್ಲಿಯನ್ನು ಭಾರತೀಯರಿಗಿಂತ ಮೊದಲು ಇಂಡೋನೇಷ್ಯಾದವರೇ  ತಯಾರಿಸಿದ್ದಾರೆ ಎಂಬ ವಾದವೂ ಇದೆ. ಫರ್ಮಂಟೇಷನ್ ಪ್ರಕ್ರಿಯೆ ಮೂಲಕ ಮುನ್ನಾದಿನ ತಯಾರಿಸಿಟ್ಟ ಹಿಟ್ಟನ್ನು ಮರುದಿನ ಆವಿಯಲ್ಲಿ ಬೇಯಿಸುವ ಮೂಲಕ ಇಡ್ಲಿ ತಯಾರಿಸಲಾಗುತ್ತದೆ. ಫರ್ಮಂಟೇಷನ್ ವಿದ್ಯೆ ಮೊದಲು ಆರಂಭಿಸಿದ್ದು ಇಂಡೋನೇಷ್ಯಾದಲ್ಲಿ ಎಂದು ಚರಿತ್ರಾಪುಟಗಳು ಹೇಳುತ್ತವೆ.  

ಆಹಾರ ತಜ್ಞ ಕೆ.ಟಿ. ಆಚಾರ್ಯ ಅವರು ಹೇಳುವ ಹಾಗೆ ಬಹುಶಃ ಇಡ್ಲಿ ಭಾರತಕ್ಕೆ ಬಂದದ್ದು ಇಂಡೋನೇಶ್ಯಾದಿಂದ. ಸುಮಾರು ೮೦೦- ೧೨೦೦ನೇ ಶತಮಾನದಲ್ಲಿ ಅದು ಇಲ್ಲಿಗೆ ಬಂದಿರಬಹುದು. ಆಗ ಆ ದೇಶವನ್ನು ಹಿಂದೂ ರಾಜರು ಆಳುತ್ತಿದ್ದರು, ಶೈಲೇಂದ್ರ, ಇಸಾಯನ ಹಾಗೂ ಸಂಜಯ ರಾಜವಂಶಗಳ ಕಾಲದಲ್ಲಿ ಅದು ಅಲ್ಲಿಂದ ಇಲ್ಲಿಗೆ ಬಂದಿರಬೇಕು. ಇಂಡೋನೇಶ್ಯಾದಲ್ಲಿ ಇದನ್ನು ಕೆಡ್ಲಿ ಎಂದು ಕರೆಯಲಾಗುತ್ತದೆ.    

ಇಡ್ಲಿ ಭಾರತದ ಮೂಲದ್ದು ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ಆದರೆ ಇಡ್ಲಿಯನ್ನು ಭಾರತೀಯರಿಗಿಂತ ಮೊದಲು ಇಂಡೋನೇಷ್ಯಾದಲ್ಲಿ.‌ವಿಶ್ವ ಇಡ್ಲಿ ದಿನವನ್ನು ಮೊದಲಿಗೆ ಆರಂಭಿಸಿದ್ದು ಚೆನ್ನೈನ ಇನಿಯವಣ್‌ ಎಂಬವರು. 2015 ರಿಂದ ಪ್ರತಿ ವರ್ಷ, ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನವನ್ನು ಆಚರಿಸಲಾಗುತ್ತದೆ. ಚೆನ್ನೈ ಮೂಲದ ಎನಿಯವನ್ ಎಂಬ ಇಡ್ಲಿ ಅಡುಗೆಮಾಡುವವರು ಈ ತಿನಿಸಿಗೂ ಒಂದು ದಿನವನ್ನು ಮೀಸಲಿಡಲು ನಿರ್ಧರಿಸಿದರು. 

ಎಂಟನೇ ತರಗತಿಯವರೆಗೆ ಮಾತ್ರ ಓದಿದ್ದ ಇನಿಯವಣ್ ಆಟೋಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಗ ಇಡ್ಲಿ ತಯಾರಿಸುವ ಮಹಿಳೆಯೊಬ್ಬರ ಪರಿಚಯವಾಗಿ, ನಂತರ ಅವರ ಪ್ರೇರಣೆಯಿಂದ  ಇಡ್ಲಿ ತಯಾರಿಸಲು ಆರಂಭಿಸಿದರಂತೆ. ಹೀಗೆ ಪ್ರಯೋಗಗಳನ್ನು ನಡೆಸುತ್ತಾ 2000 ವಿಧದ ಇಡ್ಲಿಗಳನ್ನು ತಯಾರಿಸಿ ಇನಿಯವಣ್ ದಾಖಲೆ ಸೃಷ್ಟಿಸಿದ್ದರು. ಈತನ ಈ ಪ್ರಯೋಗಗಳನ್ನು ಗೌರವಿಸಿ ಅಮೆರಿಕದ ವಿವಿಯೊಂದು ಇವರಿಗೆ ಗೌರವ ಡಾಕ್ಟರೇಟ್‌ನ್ನೂ ನೀಡಿತ್ತು. ಅವರೊಂದಿಗೆ ಕೈ ಜೋಡಿಸಿದ ತಮಿಳುನಾಡು ಕ್ಯಾಟರಿಂಗ್‌ ಎಂಪ್ಲಾಯ್ಸ್‌ ಯೂನಿಯನ್‌ನ ಅಧ್ಯಕ್ಷ ರಾಜಾಮಣಿ ಅಯ್ಯರ್‌ ಅವರು ಮಾರ್ಚ್‌ 30 ರಂದು ಈ ದಿನ ಆಚರಿಸಲು ನಿರ್ಧರಿಸಿದರು. ಅಂದಿನಿಂದ ವಿಶ್ವ ಇಡ್ಲಿ ದಿನ ಆಚರಿಸಲಾಗುತ್ತಿದೆ. ಅಷ್ಟೇ ಅಲ್ಲ, ಈ ದಿನ ಇನಿಯವಣ್ ಅವರ ಜನ್ಮದಿನವೂ ಹೌದು.  

ಇದು ಅತ್ಯುತ್ತಮ ಪೌಷ್ಟಿಕ ಆಹಾರ ಕೂಡ ಹೌದು. ಬೆಳಗ್ಗಿನ ತಿಂಡಿ ಸಾಕಷ್ಟು ಪ್ರೋಟಿನ್, ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ ಒಳಗೊಂಡಿರಬೇಕು. ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿರುವ ಇಡ್ಲಿಯಲ್ಲಿ ಅಧಿಕ ಪೋಷಕಾಂಶಗಳನ್ನು ಹೊಂದಿದ್ದು, ಬೆಳಗ್ಗಿನ ತಿಂಡಿಗೆ ಉತ್ತಮ ಆಯ್ಕೆ.