ಆಫರ್..! ಕರೋನಾ ಲಸಿಕೆ ಹಾಕಿಸಿಕೊಂಡರೆ ಬಿಯರ್ ಫ್ರೀ

Updated: Friday, May 7, 2021, 15:05 [IST]

ಕರೋನಾ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಎಲ್ಲಾ ದೇಶಗಳು ಶೀಘ್ರ ತನ್ನ ಪ್ರಜೆಗಳಿಗೆ ಲಸಿಕೆ  ಹಾಕಿಸಿಕೊಳ್ಳುವಂತೆ ಮನವಿ ಮಾಡುತ್ತಿದೆ. ಕೆಲವರು ಲಸಿಕೆ ಅಡ್ಡಪರಿಣಾಮವನ್ನು ಬೀರುತ್ತದೆ ಎಂಬ ಭಯದಿಂದ ಲಸಿಕೆ ಹಾಕಿಸಿಕೊಳ್ಳಲು ಹಿಂದೆ ಮುಂದೆ ಯೋಚಿಸುತ್ತಿದ್ದಾರೆ. ಹಾಗಾಗಿ ಈಗ ಸರ್ಕಾರಗಳು ಕೂಡಾ ಜನರಿಗೆ ಆಫರ್ ಗಳನ್ನು ನೀಡಲು ಆರಂಭಿಸಿದೆ. ಹೌದು, ವಾಷಿಂಗ್ಟನ್ ಡಿಸಿಯಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಬಿಯರ್ ಫ್ರೀ ಎನ್ನುವ ಆಫರ್ ಅನ್ನು ಸರ್ಕಾರ ಘೋಷಿಸಿದೆ. ಸ್ವತಃ  ಮೇಯರ್ ಈ ಘೋಷಣೆ ಮಾಡಿದ್ದಾರೆ.    

21 ವರ್ಷ ಮೇಲ್ಪಟ್ಟವರಿಗೆ ಈ ಆಫರ್ :

ಅಮೆರಿಕದ ಜೋ ಬಿಡೆನ್ ಸರ್ಕಾರವು, ತನ್ನ ದೇಶದ ಎಲ್ಲರಿಗೂ  ಬೇಗ ಲಸಿಕೆ ಹಾಕಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಆಫರ್ ಗಳನ್ನೊಳಗೊಂಡಂತೆ ಸರ್ವ ಪ್ರಯತ್ನವನ್ನೂ ನಡೆಸುತ್ತಿದೆ.  ಲಸಿಕೆ ಹಾಕಿಸಿಕೊಂಡರೆ, ಸಾರ್ವಜನಿಕರಿಗೆ ಉಚಿತ ಬಿಯರ್ ನೀಡುವುದಾಗಿ ವಾಷಿಂಗ್ಟನ್ ಡಿಸಿ ಮೇಯರ್ ಮುರಿಯಲ್ ಬೌಸರ್ ಘೋಷಿಸಿದ್ದಾರೆ. ಲಸಿಕೆ ಹಾಕಿಸಿಕೊಂಡ  21 ವರ್ಷ ಮೇಲ್ಪಟ್ಟವರಿಗೆ ಫ್ರೀ ಬಿಯರ್ ನೀಡಲಾಗುವುದು. ಈ ಬಗ್ಗೆ ಮೇಯರ್ ಕೂಡ ಟ್ವೀಟ್ ಮಾಡಿದ್ದಾರೆ. 

 

 

ಇನ್ನೂ ಸಾಮಾನ್ಯ ಸ್ಥಿತಿಗೆ ಮರಳದ ವಾಷಿಂಗ್ಟನ್ ಡಿಸಿ :
ಕರೋನಾ ಸಾಂಕ್ರಾಮಿಕದಿಂದಾಗಿ ವಾಷಿಂಗ್ಟನ್ ಡಿಸಿಯಲ್ಲಿನ ಜೀವನವು ಇನ್ನೂ ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಇಲ್ಲಿ ಕಚೇರಿಯಲ್ಲಿ ನೌಕರರ ಸಂಖ್ಯೆ ಬಹಳ ಕಡಿಮೆಯಾಗಿದೆ. ಹೊಟೇಲ್ ರೆಸ್ಟೋರೆಂಟ್ ಗಳಲ್ಲಿಯೂ ಜನಸಂದಣಿ ಕಂಡುಬರುವುದಿಲ್ಲ. ಹೀಗಾಗಿ ಎಲ್ಲರಿಗೂ ಆದಷ್ಟು ಶೀಘ್ರ ಲಸಿಕೆ ಹಾಕಿಸುವುದು ಸರ್ಕಾರದ ಉದ್ದೇಶ. ಎಲ್ಲರಿಗೂ ಲಸಿಕೆ ಹಾಕಿಸಿದರೆ,  ಜುಲೈ ವೇಳೆಗೆ ಎಲ್ಲವೂ ಸರಿಯಾಗಲಿದೆ ಎಂಬುದು ಸರ್ಕಾರದ ನಿರೀಕ್ಷೆ. ಕಂಪೆನಿಗಳು ಕೂಡಾ ಕಚೇರಿಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಬಹುದು.